ಹಿಂದಿ ರಾಷ್ಟ್ರ ಭಾಷೆ ಎಂಬ ಹೇಳಿಕೆಗೆ ರಿಯಾಕ್ಷನ್ ಕೊಟ್ಟ ಶಿವಣ್ಣ

ಪ್ಯಾನ್ ಇಂಡಿಯಾ ಸಿನಿಮಾ ವಿಚಾರದ ಬಗ್ಗೆಯೂ ಶಿವರಾಜ್​ಕುಮಾರ್ ಅವರು ಮಾತನಾಡಿದ್ದಾರೆ. ‘ಪ್ಯಾನ್​ ಇಂಡಿಯಾ ಅಲ್ಲಾ, ವಿ ಶುಡ್ ಪ್ಲ್ಯಾನ್ ಇಂಡಿಯಾ’ ಎಂದಿದ್ದಾರೆ ಅವರು.

ಹಿಂದಿ ರಾಷ್ಟ್ರ ಭಾಷೆ ಎಂಬ ಹೇಳಿಕೆಗೆ ರಿಯಾಕ್ಷನ್ ಕೊಟ್ಟ ಶಿವಣ್ಣ
ನಟ ಶಿವರಾಜಕುಮಾರ
Edited By:

Updated on: May 01, 2022 | 7:45 PM

ಇತ್ತೀಚೆಗೆ ಪ್ಯಾನ್​ ಇಂಡಿಯಾ ಸಿನಿಮಾ ಬಗ್ಗೆ ಸುದೀಪ್ (Kichcha Sudeep) ನೀಡಿದ್ದ ಹೇಳಿಕೆಗೆ ಅಜಯ್ ದೇವಗನ್ ಕೌಂಟರ್ ಕೊಡೋಕೆ ಹೋಗಿ ಪೇಚಿಗೆ ಸಿಲುಕಿದ್ದರು. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ‘ಹಿಂದಿ ನಮ್ಮ ರಾಷ್ಟ್ರ ಭಾಷೆ’ ಎಂದು ಹೇಳುವ ಮೂಲಕ ಅಜಯ್​ ದೇವಗನ್ ಅವರು ಮೂರ್ಖತನ ಪ್ರದರ್ಶನ ಮಾಡಿದ್ದರು. ಈಗ ಈ ವಿಚಾರದ ಬಗ್ಗೆ ನಟ ಶಿವರಾಜ್​ಕುಮಾರ್ ಅವರು (Shivarajkumar) ಮಾತನಾಡಿದ್ದಾರೆ. ‘ಎಲ್ಲಾ ಭಾಷೆಗಳು ಒಂದೇ ಎಂಬುದು ನಮ್ಮ ರಾಷ್ಟ್ರಗೀತೆಯಲ್ಲೇ ಇದೆ. ಎಲ್ಲಾ ಭಾಷೆಗಳು ಇಲ್ಲೇ ಇರುವುದರಿಂದ ನಾವೆಲ್ಲ ಒಂದೇ. ಕನ್ನಡದ ವಿಚಾರಕ್ಕೆ ಬಂದ್ರೆ ನಮಗೆ ಕನ್ನಡ ಮುಖ್ಯ’ ಎಂದರು. ಪ್ಯಾನ್ ಇಂಡಿಯಾ ಸಿನಿಮಾ ವಿಚಾರದ ಬಗ್ಗೆಯೂ ಅವರು ಮಾತನಾಡಿದ್ದಾರೆ. ‘ಪ್ಯಾನ್​ ಇಂಡಿಯಾ ಅಲ್ಲಾ, ವಿ ಶುಡ್ ಪ್ಲ್ಯಾನ್ ಇಂಡಿಯಾ’ ಎಂದಿದ್ದಾರೆ.

ಇದನ್ನೂ ಓದಿ: ‘ಜೇಮ್ಸ್​’ ಸಿನಿಮಾ ನೋಡಿ ಕಣ್ಣೀರು ಹಾಕಿದ ಗೀತಾ ಶಿವರಾಜ್​ಕುಮಾರ್​; ಇಲ್ಲಿದೆ ವಿಡಿಯೋ.. 

‘ಮಗಳ ಪ್ರೊಡಕ್ಷನ್​ನಲ್ಲಿ ನಾನೂ ಒಂದು ವೆಬ್ ಸೀರಿಸ್ ಮಾಡ್ತಾ ಇದೀನಿ’; ಶಿವರಾಜ್​ಕುಮಾರ್ ಅಚ್ಚರಿಯ ಘೋಷಣೆ

Published On - 7:32 pm, Sun, 1 May 22