ಸೂರಜ್ ರೇವಣ್ಣ, ಡಿಕೆಶಿ ಜೊತೆಯಲ್ಲಿರೋ ಫೋಟೋ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ಇದು

|

Updated on: May 01, 2024 | 7:04 PM

Siddaramaiah at Yadagiri: ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ಜೊತೆಯಲ್ಲಿರೋ ಫೋಟೋ ಇದೆ. ಕಳೆದ ಚುನಾವಣೆಯಲ್ಲಿ ಅವರಿಬ್ಬರನ್ನು ಜೋಡೆತ್ತು ಅಂತಿದ್ರು. ನಂದೂ ರೇವಣ್ಣದೂ ಫೋಟೋ ಇದೆ. ಅದರ್ಥ ನಾನು ರೇವಣ್ಣನಿಗೆ ಸಪೋರ್ಟ್ ಮಾಡ್ತೀನಿ ಅಂತನಾ? ಸೂರಜ್ ರೇವಣ್ಣ ಮತ್ತು ಡಿಕೆ ಶಿವಕುಮಾರ್ ಜೊತೆಯಲ್ಲಿರುವ ಫೋಟೋ ಇರಬಹುದು. ಈ ಫೋಟೋ ಒಳ್ಳೆಯ ಸಾಕ್ಷ್ಯ ಆಗದು ಎಂದು ಯಾದಗಿರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಸಿದ್ದರಾಮಯ್ಯ ಹೇಳಿದ್ದಾರೆ.

ಯಾದಗಿರಿ, ಮೇ 1: ಪ್ರಜ್ವಲ್ ರೇವಣ್ಣ ರಾಸಲೀಲೆ ವಿಡಿಯೋಗಳ ಪೆನ್ ಡ್ರೈವ್ ಪ್ರಕರಣದಲ್ಲಿ ಮಹಾನ್ ನಾಯಕರೊಬ್ಬರ ಕೈವಾಡ ಇದೆ ಎಂದು ಡಿಕೆ ಶಿವಕುಮಾರ್ ಅವರದ್ದ ಪರೋಕ್ಷವಾಗಿ ಕುಮಾರಸ್ವಾಮಿ ಬೊಟ್ಟು ಮಾಡಿರುವ ಆರೋಪವನ್ನು ಸಿದ್ದರಾಮಯ್ಯ (siddaramaiah) ತಳ್ಳಿಹಾಕಿದ್ದಾರೆ. ಪೆನ್ ಡ್ರೈವ್​ನಲ್ಲಿರುವ ವಿಡಿಯೋಗಳು ಲೀಕ್ ಅಗಿದೆ ಅಂತ ಕುಮಾರಸ್ವಾಮಿ ಹೇಳ್ತಾ ಇದಾರೆ. ಆದರೆ, ರೇವಣ್ಣನ ಕಾರ್ ಡ್ರೈವರ್ ಕಾರ್ತಿಕ್ ಏನು ಹೇಳ್ತಿದಾರೆ? ಬಿಜೆಪಿಯ ದೇವರಾಜೇಗೌಡರಿಗೆ ಕೊಟ್ಟಿರುವುದಾಗಿ ಆತ ಹೇಳ್ತಿದಾರೆ. ಡಿಕೆ ಶಿವಕುಮಾರ್​ಗೆ ಪೆನ್ ಡ್ರೈವ್ ಕೊಟ್ಟಿರುವುದಾಗಿ ಹೇಳಿದ್ದಾರಾ? ಡಿಕೆ ಶಿವಕುಮಾರ್ ಅವರಿಗೂ ಈ ಪೆನ್ ಡ್ರೈವ್ ಲೀಕ್ ಆಗಿರುವುದಕ್ಕೂ ಸಂಬಂಧ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಯಾದಗರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಬಿಜೆಪಿಯವರಿಗೆ ಯಾವುದೇ ವಿಷಯ ಸಿಗುತ್ತಿಲ್ಲದ್ದರಿಂದ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ. ಸೂರಜ್ ರೇವಣ್ಣ ಜೊತೆ ಡಿಕೆ ಶಿವಕುಮಾರ್ ಇರುವ ಫೋಟೋ ವೈರಲ್ ಆಗಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಯನ್ನೂ ಸಿದ್ದರಾಮಯ್ಯ ಅಲ್ಲಗಳೆದಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ವಿಡಿಯೋ ಬಗ್ಗೆ ಅಮಿತ್ ಶಾಗೂ ಗೊತ್ತಿದ್ದು ಟಿಕೆಟ್ ಕೊಟ್ಟಿದ್ಯಾಕೆ?: ಸಿಎಂ ಸಿದ್ದರಾಮಯ್ಯ

ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ಜೊತೆಯಲ್ಲಿರೋ ಫೋಟೋ ಇದೆ. ಕಳೆದ ಚುನಾವಣೆಯಲ್ಲಿ ಅವರಿಬ್ಬರನ್ನು ಜೋಡೆತ್ತು ಅಂತಿದ್ರು. ನಂದೂ ರೇವಣ್ಣದೂ ಫೋಟೋ ಇದೆ. ಅದರ್ಥ ನಾನು ರೇವಣ್ಣನಿಗೆ ಸಪೋರ್ಟ್ ಮಾಡ್ತೀನಿ ಅಂತನಾ? ಸೂರಜ್ ರೇವಣ್ಣ ಮತ್ತು ಡಿಕೆ ಶಿವಕುಮಾರ್ ಜೊತೆಯಲ್ಲಿರುವ ಫೋಟೋ ಇರಬಹುದು. ಈ ಫೋಟೋ ಒಳ್ಳೆಯ ಸಾಕ್ಷ್ಯ ಆಗದು ಎಂದು ಯಾದಗಿರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಸಿದ್ದರಾಮಯ್ಯ ಹೇಳಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:15 pm, Wed, 1 May 24

Follow us on