AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಿದ್ದರಾಮಯ್ಯ ಈ ದೇಶ ಕಂಡ ಅತ್ಯಂತ ಗೌರವಾನ್ವಿತ ಸಿಎಂ’: ಹಿರಿಯ ನಟ ಸುಂದರ್ ರಾಜ್

‘ಸಿದ್ದರಾಮಯ್ಯ ಈ ದೇಶ ಕಂಡ ಅತ್ಯಂತ ಗೌರವಾನ್ವಿತ ಸಿಎಂ’: ಹಿರಿಯ ನಟ ಸುಂದರ್ ರಾಜ್

ಮದನ್​ ಕುಮಾರ್​
|

Updated on: Jun 14, 2026 | 10:19 AM

Share

‘ಕನಕರಾಜ’ ಸಿನಿಮಾದಲ್ಲಿ ಅನೂಪ್ ರೇವಣ್ಣ ಅವರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ಹಿರಿಯ ನಟ ಸುಂದರ್ ರಾಜ್ ಕೂಡ ಅಭಿನಯಿಸಿದ್ದಾರೆ. ಚಿತ್ರದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಚಿತ್ರದ ಶೀರ್ಷಿಕೆಗೆ ‘ಫ್ಯಾನ್ ಆಫ್ ಸಿಎಂ’ ಎಂಬ ಟ್ಯಾಗ್ ಲೈನ್ ಇದೆ. ಆ ಬಗ್ಗೆ ಸುಂದರ್ ರಾಜ್ ವಿವರಿಸಿದರು.

‘ಕನಕರಾಜ’ ಸಿನಿಮಾದಲ್ಲಿ ಅನೂಪ್ ರೇವಣ್ಣ ಅವರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ಹಿರಿಯ ನಟ ಸುಂದರ್ ರಾಜ್ (Sundar Raj) ಕೂಡ ಅಭಿನಯಿಸಿದ್ದಾರೆ. ಚಿತ್ರದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಚಿತ್ರದ ಶೀರ್ಷಿಕೆಗೆ ‘ಫ್ಯಾನ್ ಆಫ್ ಸಿಎಂ’ ಎಂಬ ಟ್ಯಾಗ್ ಲೈನ್ ಇದೆ. ಆ ಬಗ್ಗೆ ಸುಂದರ್ ರಾಜ್ ವಿವರಿಸಿದರು. ‘ಹೆಚ್​.ಎಂ. ರೇವಣ್ಣ ಅವರು ರಾಜಕೀಯ ವ್ಯಕ್ತಿ ಆಗಿದ್ದರೂ ಕೂಡ ರಾಜಕಾರಣವನ್ನು ಪಕ್ಕಕ್ಕೆ ಇಟ್ಟು ಸಿನಿಮಾರಂಗದ ಬಗ್ಗೆ ಅವರು ತೋರುವ ಒಲವನ್ನು ನಾನು ಅತ್ಯಂತ ಗೌರವದಿಂದ ನೋಡುತ್ತೇನೆ. ಕನಕರಾಜ ಶೀರ್ಷಿಕೆಗೆ ಫ್ಯಾನ್ ಆಫ್ ಸಿಎಂ ಎಂಬ ಅಡಿಬರಹ ಇದೆ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ. ಈ ಚಿತ್ರದಲ್ಲಿ ರಾಮಯ್ಯ ಎಂಬ ಪಾತ್ರವನ್ನು ಅನೂಪ್ ಮಾಡಿದ್ದಾರೆ. ನಾವು ಸಿದ್ದರಾಮಯ್ಯ (Siddaramaiah) ಅವರನ್ನು ನೆನಪಿಸಿಕೊಂಡು ಈ ಸಿನಿಮಾ ಮಾಡಿದ್ದೇವೆ. ಈ ರಾಷ್ಟ್ರ ಕಂಡ ಅತ್ಯಂತ ಗೌರವಾನ್ವಿತ ಸಿಎಂ ಎಂದರೆ ಅದು ನಮ್ಮ ಸಿದ್ದರಾಮಯ್ಯನವರು ಅಂತ ನಾವು ಎದೆತಟ್ಟಿ ಹೇಳಬಹುದು’ ಎಂದಿದ್ದಾರೆ ಸುಂದರ್ ರಾಜ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More