ಸಿದ್ದರಾಮಯ್ಯ ಅವರು ಧಮ್​ನಿಂದ ಗೆದ್ದಿದ್ದಾರೆ: ಹಾಡಿಹೊಗಳಿದ ಬಿಜೆಪಿ ಅಭ್ಯರ್ಥಿ ರಾಜುಗೌಡ

Edited By:

Updated on: Apr 07, 2024 | 6:18 PM

ಮೇ 7ರಂದು ಸುರಪುರ ವಿಧಾನಸಭೆ ಕ್ಷೇತ್ರದ ಬೈಎಲೆಕ್ಷನ್​ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ರಾಜುಗೌಡ ಅಬ್ಬರದ ಮತ ಪ್ರಚಾರ ನಡೆಸಿದ್ದಾರೆ. ಜಿಲ್ಲೆಯ ಸುರಪುರ ಕ್ಷೇತ್ರದ ವ್ಯಾಪ್ತಿಯ ಗ್ರಾಮದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿ ಅವರು, ಸಿಎಂ ಸಿದ್ದರಾಮಯ್ಯರನ್ನ ಹಾಡಿಹೊಗಳಿದ್ದಾರೆ. ಸಿದ್ದರಾಮಯ್ಯ ಧಮ್​ನಿಂದಲೇ ಗೆದ್ದಿದ್ದಾರೆ ಎಂದು ಹೇಳಿದ್ದಾರೆ.

ಯಾದಗಿರಿ, ಏಪ್ರಿಲ್ 07: ಮೇ 7ರಂದು ಸುರಪುರ ವಿಧಾನಸಭೆ ಕ್ಷೇತ್ರದ ಬೈಎಲೆಕ್ಷನ್​ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ರಾಜುಗೌಡ (Raju Gowda) ಅಬ್ಬರದ ಮತ ಪ್ರಚಾರ ನಡೆಸಿದ್ದಾರೆ. ಜಿಲ್ಲೆಯ ಸುರಪುರ ಕ್ಷೇತ್ರದ ವ್ಯಾಪ್ತಿಯ ಗ್ರಾಮದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿ ಅವರು, ಸಿಎಂ ಸಿದ್ದರಾಮಯ್ಯರನ್ನ ಹಾಡಿಹೊಗಳಿದ್ದಾರೆ. ಸಿದ್ದರಾಮಯ್ಯ ಧಮ್​ನಿಂದಲೇ ಗೆದ್ದಿದ್ದಾರೆ. ಕಾಂಗ್ರೆಸ್​ಗೆ ಇಷ್ಟು ಸೀಟು ಬಂದಿವೆ. ಸಿದ್ದರಾಮಯ್ಯ ಸಾಹೇಬರನ್ನ ಇಳಿಸಿದರೆ ಸರ್ಕಾರ‌‌ ಉಳಿಯಲ್ಲ. ಗೃಹಲಕ್ಷ್ಮೀ ಹಣ 3 ತಿಂಗಳಿಗೋ 6 ತಿಂಗಳಿಗೋ ಬರುತ್ತೆ. ನಾನು ಗೆದ್ರೆ ಸಿಎಂ ಸಾಹೇಬರ ಬಳಿ ಮಾತಾಡಿ ಹಾಕಿಸ್ತೇನೆ. ಕಾಂಗ್ರೆಸ್​ನವರು ಗೆದ್ರೆ ಸಿದ್ದರಾಮಯ್ಯರ ಮುಂದೆ ಮಾತಾಡಲ್ಲ. ಸಿದ್ದರಾಮಯ್ಯನವರು ಹೇ ಅಂದ್ರೆ ಅವರು ಸುಮ್ಮನಾಗುತ್ತಾರೆ. ನಾನಾದರೆ ಅಣ್ಣಾ ಅಂತ ಹೇಳಿ ಕೆಲಸವನ್ನು ಮಾಡಿಸುತ್ತೇನೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಅಮೀನ್​ ಸಾಬ್​

ಕಳೆದ ಹತ್ತು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿತ್ತಿದ್ದೆನೆ. ಬೆಂಗಳೂರಿನಿಂದ ಮಾಧ್ಯಮ ವೃತ್ತಿಯನ್ನ ಆರಂಬಿಸಿದ್ದು ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ಮೆಟ್ರೊ ರಿಪೋರ್ಟರ್ ಆಗಿ ಕೆಲಸ‌ ನಿರ್ವಹಿದ್ದೆನೆ. ಸದ್ಯ ಯಾದಗಿರಿ ಜಿಲ್ಲೆಯಲ್ಲಿ ಕಳೆದ ಎಂಟು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದೆನೆ.. ನನ್ನ ಹವ್ಯಾಸ ಕ್ರಿಕೆಟ್ ಆಡೋದು,ಮಾನವೀಯ ಮೌಲ್ಯ ಮೌಲ್ಯಯುಳ್ಳ ಸುದ್ದಿಗಳನ್ನ ಮಾಡೋದು.

Read More