ಅಧಿವೇಶನ ನಡೆಯುವಾಗ ಒದಗಿಸುವ ಆಹಾರದ ಗುಣಮಟ್ಟದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದೆ: ಬೆಳಗಾವಿ ಜಿಲ್ಲಾಧಿಕಾರಿ

|

Updated on: Dec 07, 2024 | 1:02 PM

ಅಧಿವೇಶನಲ್ಲಿ ಪಾಲ್ಗೊಳ್ಳಲು ಬರುವವವರಿಗೆ ನಗರದಲ್ಲಿ 2,750 ರೂಮುಗಳನ್ನು ಬುಕ್ ಮಾಡಲಾಗಿದೆ, ಅಧಿಕಾರಿಗಳ ತಂಡಗಳಿಗೆ ಶಿಷ್ಟಾಚಾರವನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ, ತನಗೆ ಸಿಕ್ಕಿರುವ ಅಧಿಕಾರಗಳ ಕಾರ್ಯಕ್ಷಮತೆಯನ್ನು ಎಷ್ಟು ಹೊಗಳಿದರೂ ಸಾಲದು, ಎರಡು ವಾರಗಳಿಂದ ಅವರು ಹಗಲು ರಾತ್ರಿ ಶ್ರಮವಹಿಸಿ ದುಡಿಯುತ್ತಿದ್ದಾರೆ ಜಿಲ್ಲಾಧಿಕಾರಿ ರೋಶನ್ ಹೇಳಿದರು.

ಬೆಳಗಾವಿ: ಸೋಮವಾರದಿಂದ ನಗರದ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ಶುರುವಾಗಲಿದ್ದು ಅದನ್ನು ಯಶಸ್ವೀಯಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇಲ್ಲಿನ ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್​ರೊಂದಿಗೆ ನಮ್ಮ ಬೆಳಗಾವಿ ವರದಿಗಾರ ಮಾತುಕತೆ ನಡೆಸಿದ್ದಾರೆ. ಅಧಿವೇಶನ ಸಾಂಗವಾಗಿ ನಡೆಯಲು ಮತ್ತು ಯಾವುದೇ ರೀತಿಯ ಕೊರತೆ ಉಂಟಾಗದಿರಲು ತಮ್ಮ ಅಧಿಕಾರಿಗಳ ತಂಡಗಳು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿವೆ, ಜಿಲ್ಲಾಡಳಿತದಿಂದ 10 ಸಮಿತಿಗಳನ್ನು ರಚಿಸಲಾಗಿದೆ, ಅಧಿವೇಶನದ ಅವಧಿಯಲ್ಲಿ ಪ್ರತಿದಿನ ಸುಮಾರು 8,000 ಜನಕ್ಕೆ ಊಟದ ವ್ಯವಸ್ಥೆ ಮಾಡಬೇಕಾಗುತ್ತದೆ, ಆಹಾರದ ಗುಣಮಟ್ಟ ಅತ್ಯುತ್ತಮವಾಗಿರಬೇಕೆಂದು ಮುಖ್ಯಮಂತ್ರಿ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ತಮಗೆ ಸೂಚನೆ ನೀಡಿದ್ದಾರೆಂದು ರೋಶನ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಚಳಿಗಾಲ ಅಧಿವೇಶನ: ಬೆಳಗಾವಿಯಲ್ಲಿ ಎಂಇಎಸ್​ ಮಹಾಮೇಳಕ್ಕೆ ಶಿವಸೇನೆ ಬೆಂಬಲ