ಲಕ್ಷ್ಮಿಯ ಸುಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು, ಯಾಕೆ ಗೊತ್ತಾ? ವಿಡಿಯೋ ನೋಡಿ

Ganesha son of goddess Lakshmi decorated with currency notes: ಗಣಪತಿ ಮತ್ತು ಲಕ್ಷ್ಮಿದೇವಿಯದ್ದು ತಾಯಿ-ಮಗನ ಸಂಬಂಧ. ಅದನ್ನು ಚೆನ್ನಾಗಿ 'ಅರ್ಥೈಸಿಕೊಂಡ' ಭಕ್ತರು ವಿನಾಯಕನನ್ನು ಅಪಾರ ಪ್ರಮಾಣದ ಹಣದ ನೋಟುಗಳಿಂದ ಅಲಂಕರಿಸಿ, ಸಂಭ್ರಮಿಸಿದ್ದಾರೆ. ಕರ್ನೂಲ್ ಜಿಲ್ಲೆಯ ಮಿಮಿಗನೂರು ಪಟ್ಟಣದಲ್ಲಿ ಮಿಟ್ಟಿ ವಿನಾಯಕೋತ್ಸವ ವೇಳೆ ಇದು ಕಣ್ಣಿಗೆ ಬಿದ್ದಿದೆ.

ಲಕ್ಷ್ಮಿಯ ಸುಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು, ಯಾಕೆ ಗೊತ್ತಾ? ವಿಡಿಯೋ ನೋಡಿ
|

Updated on:Sep 09, 2024 | 2:40 PM

ತೆಲುಗು ದ್ವಿರಾಜ್ಯಗಳಲ್ಲಿ ವಿನಾಯಕ ಚೌತಿ ಆಚರಣೆಯನ್ನು ವಿಜೃಂಭಣೆಯಿಂದ ನಡೆಸಲಾಗುತ್ತಿದೆ. ಬೀದಿ ಬೀದಿಗಳಲ್ಲಿ ಗಣೇಶನನ್ನು ಕೂಡಿಸಿ, ಸಂಭ್ರಮಿಸುತ್ತಿದ್ದಾರೆ ಭಕ್ತರು. ಪೆಂಡಾಲ್​​ಗಳಲ್ಲಿ ವಿರಾಜಮಾನ ಗಣಪನು ಭಕ್ತರಿಂದ ಹರಕೆ ಸ್ವೀಕರಿಸಿ, ತಥಾಸ್ತು ಅನ್ನುತ್ತಿದ್ದಾನೆ. ಈ ಮಧ್ಯೆ, ಕರ್ನೂಲ್ ಜಿಲ್ಲೆಯ ಮಿಮಿಗನೂರು ಪಟ್ಟಣದಲ್ಲಿ ಮಿಟ್ಟಿ ವಿನಾಯಕೋತ್ಸವ ಭಾರೀ ಸದ್ದು ಮಾಡುತ್ತಿದೆ. 4ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಇಲ್ಲಿನ ಭಕ್ತ ಮಂಡಳಿ 54 ಲಕ್ಷ ರೂಪಾಯಿ ನೋಟುಗಳಿಂದ ಗಣಪನನ್ನು ಅಲಂಕರಿಸಿದ್ದಾರೆ.

ದೇವಸ್ಥಾನದಲ್ಲಿ ವಿನಾಯಕನ್ನು ವಿನೂತನವಾಗಿ ಅಲಂಕರಿಸುವ ಸಲುವಾಗಿ ಶಕ್ತಿ ವಿನಾಯಕ ಮಂಡಳಿಯ ಸದಸ್ಯರು ಕಳೆದ ಕೆಲವು ತಿಂಗಳುಳಿಂದ ವಿವಿಧ ಬ್ಯಾಂಕ್‌ಗಳಿಂದ ಹೊಚ್ಚ ಹೊಸ ನೋಟುಗಳನ್ನು ಸಂಗ್ರಹಿಸಿದ್ದಾರೆ. ಗರಿಗರಿ ನೋಟುಗಳಿಂದ ಹೊಸ ವೈಭವದಿಂದ ಕಂಗೊಳಿಸುತ್ತಿರುವ ವಿನಾಯಕ ಭಕ್ತರನ್ನು ಆಕರ್ಷಿಸುತ್ತಿದ್ದಾನೆ. ಸ್ಥಳೀಯ ಕೋರ್ಟ್ ರಸ್ತೆ ಪ್ರದೇಶದಲ್ಲಿ ಶಕ್ತಿ ಯೂತ್ ಕ್ಲಬ್ ಸದಸ್ಯರು ಕರೆನ್ಸಿ ವಿನಿಮಯ ಕಚೇರಿಯಂತೆ ಈ ಗಣಪನನ್ನು ಸ್ಥಾಪಿಸಿದ್ದಾರೆ.

ಇದನ್ನೂ ಓದಿ: Ganesha Chaturti 2024 – ಲಕ್ಷ್ಮಿದೇವಿಯ ಮಗ ಗಣೇಶ, ಏನಿದು ತಾಯಿ-ಮಗನ ಸಂಬಂಧ!?

ಪಟ್ಟಣದಲ್ಲಿ ಈ ಮೂರ್ತಿಯು ವಿಶೇಷ ಆಕರ್ಷಣೆಯಾಗಿದೆ. ಈ ವಿಗ್ರಹ ತಯಾರಿಕೆಗೆ 54 ಲಕ್ಷ ರೂ. ವೆಚ್ಚವಾಗಿದೆ. ಈ ಮೂರ್ತಿಯನ್ನು ನೋಡಲು ಸುತ್ತಮುತ್ತಲ ಗ್ರಾಮಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ ಎಂದು ವಿನಾಯಕ ಮಂಡಳಿ ಸಂಘಟಕರು ತಿಳಿಸಿದ್ದಾರೆ.

ಶ್ರೀ ಶಕ್ತಿ ವಿನಾಯಕ ಮಂಡಳಿಯು ಕರ್ನೂಲ್ ಜಿಲ್ಲೆಯ ಕೋರ್ಟ್ ರಸ್ತೆಯಲ್ಲಿ 54 ಲಕ್ಷ ಕರೆನ್ಸಿ ನೋಟುಗಳೊಂದಿಗೆ ಗಣೇಶ ಮೂರ್ತಿಯನ್ನು ಸ್ಥಾಪಿಸಿದೆ. ಸಹಸ್ರಾರು ಭಕ್ತರು ವೀಕ್ಷಿಸುತ್ತಾ ಹರ್ಷೋದ್ಗಾರ ಮಾಡುತ್ತಿದ್ದಾರೆ. 25 ದಿನಗಳ ಕಾಲ ಎರಡು ಮತ್ತು ಒಂದು ರೂಪಾಯಿ ನಾಣ್ಯಗಳ ಜೊತೆಗೆ 500, 200,50, 20,10 ರೂಪಾಯಿಗಳ ಕರೆನ್ಸಿ ನೋಟುಗಳನ್ನು ಬಳಸಿ ಲೆಕ್ಕ ಮೂರ್ತಿಯನ್ನು ಅಲಂಕರಿಸಲಾಗಿದೆ. ಈ ಧನಲಕ್ಷ್ಮಿ ಗಣಪತಿ ರೂಪ ನೋಡುಗರನ್ನು ಅಪಾರವಾಗಿ ಆಕರ್ಷಿಸುತ್ತದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:52 pm, Mon, 9 September 24

Follow us
ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ: ಜಗದೀಶ್
ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ: ಜಗದೀಶ್
ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕೇಳಿದರೆ ಡಾ ಮಂಜುನಾಥ್ ಉತ್ತರ!
ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕೇಳಿದರೆ ಡಾ ಮಂಜುನಾಥ್ ಉತ್ತರ!
ನಿಯಮ ಮುರಿದ ಸ್ಪರ್ಧಿಗಳು, ಕಠಿಣ ಶಿಕ್ಷೆ ಕೊಟ್ಟ ಬಿಗ್​ಬಾಸ್
ನಿಯಮ ಮುರಿದ ಸ್ಪರ್ಧಿಗಳು, ಕಠಿಣ ಶಿಕ್ಷೆ ಕೊಟ್ಟ ಬಿಗ್​ಬಾಸ್
ಸಿದ್ದರಾಮಯ್ಯ ಮತ್ತು ಹರಿಯಾಣ ಸೋಲಿನ ನಡುವೆ ಸಂಬಂಧವಿಲ್ಲ: ಡಿಕೆ ಶಿವಕುಮಾರ್
ಸಿದ್ದರಾಮಯ್ಯ ಮತ್ತು ಹರಿಯಾಣ ಸೋಲಿನ ನಡುವೆ ಸಂಬಂಧವಿಲ್ಲ: ಡಿಕೆ ಶಿವಕುಮಾರ್
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಲೈವ್​ ನೋಡಿ..
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಲೈವ್​ ನೋಡಿ..
ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಲೈವ್; ಇಂದಾದರೂ ದಾಸನಿಗೆ ಸಿಗುತ್ತಾ ಬೇಲ್?
ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಲೈವ್; ಇಂದಾದರೂ ದಾಸನಿಗೆ ಸಿಗುತ್ತಾ ಬೇಲ್?
ಅಪ್ರಸ್ತುತವಾಗಿದ್ದರೂ ಬಸನಗೌಡ ಯತ್ನಾಳ್ ಹೆಸರು ಉಲ್ಲೇಖಿಸಿದ ಜಮೀರ್
ಅಪ್ರಸ್ತುತವಾಗಿದ್ದರೂ ಬಸನಗೌಡ ಯತ್ನಾಳ್ ಹೆಸರು ಉಲ್ಲೇಖಿಸಿದ ಜಮೀರ್
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರೋದು ಶಿವಕುಮಾರ್​​ಗೆ ಗೊತ್ತಿಲ್ಲ
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರೋದು ಶಿವಕುಮಾರ್​​ಗೆ ಗೊತ್ತಿಲ್ಲ
ಮೈಸೂರು ಕಾರ್ಯಕರ್ತನ ಮನೆಯಲ್ಲಿ ಸ್ಪೆಷಲ್ ದೋಸೆ ಸವಿದ ಸತೀಶ್ ಜಾರಕಿಹೊಳಿ!
ಮೈಸೂರು ಕಾರ್ಯಕರ್ತನ ಮನೆಯಲ್ಲಿ ಸ್ಪೆಷಲ್ ದೋಸೆ ಸವಿದ ಸತೀಶ್ ಜಾರಕಿಹೊಳಿ!
ಸಿಎಂ ಬದಲಾಯಿಸುವ ಸನ್ನಿವೇಶ ರಾಜ್ಯದಲ್ಲಿ ಸೃಷ್ಟಿಯಾಗಿಲ್ಲ: ಜಿ ಪರಮೇಶ್ವರ್
ಸಿಎಂ ಬದಲಾಯಿಸುವ ಸನ್ನಿವೇಶ ರಾಜ್ಯದಲ್ಲಿ ಸೃಷ್ಟಿಯಾಗಿಲ್ಲ: ಜಿ ಪರಮೇಶ್ವರ್