ಬೀದರ್: ಯಾವ ಸಿನಿಮಾ ಸೀನ್ಗೂ ಕಮ್ಮಿ ಇಲ್ಲ, ಮೈ ನಡುಗಿಸುವಂತಿದೆ ಅಪಘಾತದ ದೃಶ್ಯ
NH-65 ಮುಂಬೈ ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ನಿರ್ಣಾ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಭಯ ಹುಟ್ಟಿಸುವಂತಿದೆ. ಹೈದರಾಬಾದ್ ನಿಂದ ಮಹಾರಾಷ್ಟ್ರಕ್ಕೆ ಹೋಗುತ್ತಿದ್ದ ಕಾರು ಬೈಕ್ ಗೆ ಗುದ್ದಿದ ವೇಗಕ್ಕೆ ಹತ್ತು ಅಡಿ ಎತ್ತರಕ್ಕೆ ಹಾರಿ ಬೈಕ್ ಸವಾರರು ಬಿದ್ದಿದ್ದಾರೆ.
ಬೀದರ್, ಸೆ.09: ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ನಿರ್ಣಾ ಕ್ರಸ್ ಬಳಿ ಭೀಕರ ರಸ್ತೆ ಅಪಘಾತ (Road Accident) ಸಂಭವಿಸಿದ್ದು ಮೈ ನಡುಗಿಸೋ ರಸ್ತೆ ಅಪಘಾತದ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವೇಗವಾಗಿ ಬಂದ ಕಾರು ಚಲಿಸುತ್ತಿದ್ದ ಬೈಕ್ ನ ಹಿಂಭಾಗಕ್ಕೆ ಗುದ್ದಿದೆ. ಬೈಕ್ ಚಾಲಕರು ಕಾರಿನ ಮೇಲಿಂದ ಹಾರಿ ರಸ್ತೆ ಮೇಲೆ ಬಿದ್ದಿದ್ದಾರೆ. ಈ ಭಯಾನಕ ದೃಶ್ಯ ಬಂದು ಕ್ಷಣ ಮೈ ನಡುಗಿಸುವಂತಿದೆ.
NH-65 ಮುಂಬೈ ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ನಿರ್ಣಾ ಕ್ರಾಸ್ ಬಳಿ ಈ ರಸ್ತೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಉಡಬಾಳ ಗ್ರಾಮದ ಸತೀಶ್ ಶಿವಕುಮಾರ್ ಗೆ ಗಂಭೀರ ಗಾಯಗಳಾಗಿವೆ. ಹೈದರಾಬಾದ್ ನಿಂದ ಮಹಾರಾಷ್ಟ್ರಕ್ಕೆ ಹೋಗುತ್ತಿದ್ದ ಕಾರು ಬೈಕ್ ಗೆ ಗುದ್ದಿದ ವೇಗಕ್ಕೆ ಹತ್ತು ಅಡಿ ಎತ್ತರಕ್ಕೆ ಹಾರಿ ಬೈಕ್ ಸವಾರರು ಬಿದ್ದಿದ್ದಾರೆ. ಮನ್ನಾಖೇಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
Latest Videos