AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರೇಟರ್​​ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?

ಗ್ರೇಟರ್​​ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?

ಪ್ರಸನ್ನ ಹೆಗಡೆ
|

Updated on: May 08, 2026 | 2:00 PM

Share

ಬಹು ನಿರೀಕ್ಷಿತ ಗ್ರೇಟರ್​​ ಬೆಂಗಲೂರು ಪ್ರಾಧಿಕಾರದ ಪಾಲಿಕೆಗಳ ಚುನಾವಣೆಗೆ ಕೊನೆಗೂ ಮುಹೂರ್ತ ನಿಗದಿಯಾಗುವ ಲಕ್ಷಣಗಳು ಗೋಚರಿಸಿವೆ. ಈ ಸಂಬಂಧ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಸಂಗ್ರೇಶಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದ್ದು, ಚುನಾವಣೆ ಸಂಬಂಧ ದಿನಾಂಕ ನಿಗದಿ ಮಾತ್ರ ಬಾಕಿ ಉಳಿದಿದೆ. ಉಳಿದೆಲ್ಲಾ ಪ್ರಕ್ರಿಯೆ ಮುಗಿಸಿದ್ದೇವೆ ಎಂದು ಆಯುಕ್ತರು ಸಭೆ ಬಳಿಕ ತಿಳಿಸಿದ್ದಾರೆ. ಜೂನ್ 14 ರಿಂದ ಜೂನ್ 24ರ ಒಳಗಾಗಿ ಚುನಾವಣೆ ನಡೆಯಲಿದೆ ಎನ್ನಲಾಗಿದೆ.

ಬೆಂಗಳೂರು, ಮೇ 08: ಜಿಬಿಎ ಚುನಾವಣೆ ಸಂಬಂಧ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಸಂಗ್ರೇಶಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದೆ. ಮೀಟಿಂಗ್​​ ಬಳಿಕ ಮಾತನಾಡಿದ ಆಯುಕ್ತ ಸಂಗ್ರೇಶಿ, ಚುನಾವಣೆ ಸಂಬಂಧ ದಿನಾಂಕ ನಿಗದಿ ಮಾತ್ರ ಬಾಕಿ ಉಳಿದಿದೆ. ಉಳಿದೆಲ್ಲಾ ಪ್ರಕ್ರಿಯೆ ಮುಗಿಸಿದ್ದೇವೆ. ಮಳೆಗಾಲ, ಶಾಲಾ ಕಾಲೇಜು, ಸೆನ್ಸನ್ ಇವೆಲ್ಲಾ ಗಮನಿಸಿ ದಿನಾಂಕ ನಿಗದಿ ಆಗಬೇಕು. ಜೂನ್ 30ರ ಒಳಗಾಗಿ GBA ಚುನಾವಣೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಹೀಗಾಗಿ ನಿಗದಿತ ಕಾಲಮಿತಿಯಲ್ಲಿ ಚುನಾವಣೆ ಮುಗಿಸಿ ಸುಪ್ರೀಂಕೋರ್ಟ್​​ಗೆ ನಾವು ವರದಿ ಕೊಡಬೇಕು . ಜೂನ್ 14 ರಿಂದ ಜೂನ್ 24ರ ಒಳಗಾಗಿ ಒಂದು ಡೇಟ್ ಹೇಳಿ ಎಂದು ಸೂಚನೆ ಕೊಟ್ಟಿದ್ದೇನೆ. ಕೆಲವೇ ದಿನಗಳಲ್ಲಿ ಅಂತಿಮ ದಿನಾಂಕವನ್ನು ನಿಮ್ಮೆಲ್ಲರಿಗೂ ಹೇಳುತ್ತೇವೆ. ಚುನಾವಣೆ ಮುಂದೂಡಿಕೆ ಮಾಡುವ ಅಧಿಕಾರ ಸುಪ್ರೀಂಕೋರ್ಟ್​​ಗೆ ಮಾತ್ರ ಇರೋದು ಎಂದವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us