Loading video

ಬೆಂಗಳೂರು ನಗರದಲ್ಲಿ ಒಂದು ಗುಂಡಿಯನ್ನು ಮುಚ್ಚುವ ಯೋಗ್ಯತೆ ಈ ಸರ್ಕಾರಕ್ಕಿಲ್ಲ: ಬಿವೈ ವಿಜಯೇಂದ್ರ

|

Updated on: Feb 21, 2025 | 5:07 PM

ಬೆಂಗಳೂರು ನಗರ ಸಿಲಿಕಾನ್ ಸಿಟಿ ಅಂತ ಹೆಸರು ಮಾಡಿದ್ದು ವಿಶ್ವದ ಇತರ ದೇಶಗಳು ಭಾರತವನ್ನು ಬೆಂಗಳೂರು ಮುಖಾಂತರ ನೋಡುತ್ತಿದ್ದಾರೆ, ಅದರೆ ಅಭಿವೃದ್ಧಿ ಶೂನ್ಯ ಸರ್ಕಾರಕ್ಕೆ ನಗರವನ್ನು ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿಲ್ಲ, ಕ್ಷೇತ್ರಗಳ ಅಭಿವೃದ್ಧಿಗೆ ಕೆಲಸಕ್ಕೆ ಹಣ ನೀಡದವರು ರಾಜ್ಯ ಮತ್ತು ಬೆಂಗಳೂರು ನಗರದ ಅಭಿವೃದ್ಧಿ ಬಗ್ಗೆ ಮಾತಾಡುವುದು ಆಶ್ಚರ್ಯ ಹುಟ್ಟಿಸುತ್ತದೆ ಎಂದು ವಿಜಯೇಂದ್ರ ಹೇಳಿದರು.

ಬೆಂಗಳೂರು: ಬೆಂಗಳೂರುಗೆ ಹೊಸ ಹೊಸ ಯೋಜನೆಗಳ ಘೋಷಣೆಯಾಗುತ್ತಿದೆಯೇ ಹೊರತು ಯಾವುದೂ ಕಾರ್ಯರೂಪಕ್ಕೆ ಬರುತಿಲ್ಲ, ಇದರಿಂದ ಬ್ರ್ಯಾಂಡ್ ಬೆಂಗಳೂರುಗೆ ಧಕ್ಕೆಯಾಗುತ್ತಿದೆ ಎಂದು ಉದ್ಯಮಿ ಮೋಹನ ದಾಸ್ ಪೈ ಟ್ವೀಟ್ ಮಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರಿಸುತ್ತ ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಡಿಕೆ ಶಿವಕುಮಾರ್ ಭಗವಂತನೇ ಬಂದರೂ ಇನ್ನೂ ಎರಡು ಮೂರು ವರ್ಷಗಳ ಕಾಲ ಬೆಂಗಳೂರನ್ನು ಬದಲಾಯಿಸುವುದು ಸಾಧ್ಯವಿಲ್ಲ ಅಂತ ಹೇಳಿದ್ದಾರೆ, ಒಂದು ಗುಂಡಿಯನ್ನು ಮುಚ್ಚುವುದೂ ಈ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಅದರೆ ಟನೆಲ್ ರೋಡ್​ಗಳನ್ನು ಮಾಡುವ ಬಗ್ಗೆ ಮಾತಾಡುತ್ತಾರೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ನೋಟಿಸ್ ಬಳಿಕ ಮೊದಲ ಬಾರಿಗೆ ಸಭೆ ಸೇರಿದ ಬಿಜೆಪಿ ಭಿನ್ನರ ಬಣ: ವಿಜಯೇಂದ್ರ ನೋಟಿಸ್ ಕೊಡಿಸಿದ್ದಾರೆಂದು ಯತ್ನಾಳ್ ಕೆಂಡಾಮಂಡಲ