ಹೊಸ ರೂಪದ ಮೈಸೂರು ಸ್ಯಾಂಡಲ್ ಸೋಪ್ ಬಿಡುಗಡೆ ಮಾಡಿದ ತಮನ್ನಾ ಭಾಟಿಯಾ
ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರು ಮೈಸೂರು ಸ್ಯಾಂಡಲ್ ಸೋಪ್ಗೆ ಪ್ರಚಾರ ರಾಯಭಾರಿ ಆಗಿದ್ದಾರೆ. ಇಂದು (ಫೆಬ್ರವರಿ 10) ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮನ್ನಾ ಭಾಗಿಯಾದರು. ಹೊಸ ರೂಪದ ಸೋಪನ್ನು ಅವರು ಬಿಡುಗಡೆ ಮಾಡಿದರು. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ.
ಬಹುಭಾಷಾ ನಟಿ ತಮನ್ನಾ ಭಾಟಿಯಾ (Tamannaah Bhatia) ಅವರು ಮೈಸೂರು ಸ್ಯಾಂಡಲ್ ಸೋಪ್ಗೆ ಪ್ರಚಾರ ರಾಯಭಾರಿ. ಇಂದು (ಫೆಬ್ರವರಿ 10) ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮನ್ನಾ ಭಾಗಿಯಾದರು. ಹೊಸ ರೂಪದ ಸೋಪನ್ನು ಅವರು ಬಿಡುಗಡೆ ಮಾಡಿದರು. ‘ಎಲ್ಲರಿಗೂ ನಮಸ್ಕಾರ’ ಎಂದು ಕನ್ನಡದಲ್ಲೇ ಹೇಳುವ ಮೂಲಕ ತಮನ್ನಾ ಅವರು ಮಾತು ಆರಂಭಿಸಿದರು. ಬಳಿಕ ಅವರು ಇಂಗ್ಲಿಷ್ನಲ್ಲಿ ಮಾತು ಮುಂದುವರಿಸಿದರು. ‘ನನಗೆ ಇದು ತುಂಬಾ ದೊಡ್ಡ ಗೌರವ ಹಾಗೂ ಹೆಮ್ಮೆ. KSDL ಕುಟುಂಬದಲ್ಲಿ ನಾನೂ ಒಬ್ಬಳಾಗಿದ್ದೇನೆ. 20 ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದೀನಿ. ಇಂದಿನಿಂದ ನನ್ನ ಬದುಕಿನ ಹೊಸ ಚಾಪ್ಟರ್ ಶುರು ಆಗಿದೆ. ಮೈಸೂರು ಸ್ಯಾಂಡಲ್ ಸೋಪ್ (Mysore Sandal Soap) ಎಂದರೆ ಎಮೋಷನ್ ಹಾಗೂ ಬಾಲ್ಯದ ನೆನಪು. ಎಷ್ಟೇ ಸೋಪ್ಗಳು ಮಾರುಕಟ್ಟೆಗೆ ಬಂದರೂ ಮೈಸೂರ್ ಸ್ಯಾಂಡಲ್ ಸೋಪ್ ಜನರ ಹೃದಯದಲ್ಲಿ ಸ್ಥಾನ ಪಡೆದುಕೊಂಡಿದೆ. ನಾನು ತುಂಬಾ ಅದೃಷ್ಟವಂತೆ. ಮೈಸೂರ್ ಸ್ಯಾಂಡಲ್ ಸೋಪಿಗೆ ರಾಯಭಾರಿ ಆಗಿದ್ದೇನೆ’ ಎಂದು ತಮನ್ನಾ ಭಾಟಿಯಾ ಅವರು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Feb 10, 2026 10:38 PM
JDS ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ
ಬಿಗ್ ಬಾಸ್ ಕಾಂಪಿಟೇಷನ್ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ತಿಳಿಸಿದ ಕಲರ್ಸ್
ತಾಯಿ ಆನೆ ಮಡಿಲಲ್ಲಿ ಮಲಗಿದ್ದ ಮರಿಗಳ ಕ್ಯೂಟ್ ದೃಶ್ಯ ವೈರಲ್
ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ದುರಂತ: ಬಿಹಾರ, ತಮಿಳುನಾಡಿನ ಇಬ್ಬರು ನಾಪತ್ತೆ

