ಸಿಡಿ ಬಿಡುಗಡೆ ಮಾಡಿ ಬದುಕನ್ನು ಹಾಳು ಮಾಡಿದವರು ಒಬ್ಬ ಮಹಿಳೆಗಾದರೂ ಸಾಂತ್ವನ ಹೇಳಿದರೇ? ಕುಮಾರಸ್ವಾಮಿ

|

Updated on: Dec 04, 2024 | 7:26 PM

ನಾಳೆ ಹಾಸನದಲ್ಲಿ ಕಾಂಗ್ರೆಸ್ ನಡೆಸುವ ಜನಕಲ್ಯಾಣ ಸಮಾವೇಶವನ್ನು ಲೇವಡಿ ಮಾಡಿದ ಕುಮಾರಸ್ವಾಮಿ, ಸಿಡಿಗಳನ್ನು ಬಿಡುಗಡೆ ಮಾಡಿ ಹೆಣ್ಣುಮಕ್ಕಳ ಬದುಕನ್ನು ಬೀದಿಗೆ ತಂದು ಅವರಿಗೆ ಒಂದೇ ಒಂದು ಸಾಂತ್ವನ ಹೇಳದ ಸರ್ಕಾರ ಅದ್ಯಾವ ನೈತಿಕತೆಯಿಂದ ಸಮಾವೇಶ ನಡೆಸುತ್ತದೆ? ಈ ಸರ್ಕಾರದ ಪ್ರತಿನಿಧಿಗಳು ಮುಂದೆ ಉತ್ತರ ನೀಡಬೇಕಾದ ಸಮಯ ಬರಲಿದೆ ಎಂದು ಕುಮಾರಸ್ವಾಮಿ ಹೇಳಿದರು.

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಹೆಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಾ ತಮ್ಮ ಸಹೋದರ ಹೆಚ್ ಡಿ ರೇವಣ್ಣರ ಪಕ್ಷ ವಹಿಸಿಕೊಂಡರು. ರೇವಣ್ಣರನ್ನು ಸುಳ್ಳು ಕೇಸಲ್ಲಿ ಫಿಕ್ಸ್ ಪ್ರಯತ್ನವನ್ನು ಮಾಡಿದರು, ಅವರು ಯಾವ ತಪ್ಪು ಮಾಡಿದ್ದರು? ಒಬ್ಬ ಮಾಜಿ ಪ್ರಧಾನಿಯ ಮನೆಗೂ ಪೊಲೀಸರನ್ನು ನುಗ್ಗಿಸುವ ಹೀನ ಕೆಲಸವನ್ನು ಈ ಸರ್ಕಾರ ಮಾಡಿತ್ತು, ಲೋಕಸಭಾ ಚುನಾವಣೆ ಸಮಯದಲ್ಲಿ ಸಿಡಿ ಬಿಡುಗಡೆ ಮಾಡಿಸಿದ್ದರಲ್ಲ? ತನಿಖೆ ನಡೆಸುತ್ತಿರುವ ಎಸ್ಐಟಿ ಏನು ಮಾಡುತ್ತಿದೆ? ದೇವರಾಜೇಗೌಡನ ಜೊತೆ ಡಿಕೆ ಶಿವಕುಮಾರ್ ಮಾತಾಡಿದ್ದ ಆಡಿಯೋ ಟೇಪ್ ಎಲ್ಹೋಯ್ತು? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಜೆಡಿಎಸ್ ಪಕ್ಷವನ್ನು ಪುನಶ್ಚೇತನಗೊಳಿಸುವ ಭಾರ ನಿಖಿಲ್ ಮೇಲೆ ಹಾಕಿದ ಹೆಚ್ ಡಿ ಕುಮಾರಸ್ವಾಮಿ