ಡಾ. ರಾಜ್ಕುಮಾರ್ ಸಮಾಧಿ ವಿವಾದ: ಕ್ಷಮೆ ಕೇಳುವಾಗ ಸತಾಯಿಸಿದ್ರಾ ನಟ ಚೇತನ್? ವಿಡಿಯೋ ನೋಡಿ
ಇತ್ತೀಚೆಗೆ ನಟ ಚೇತನ್ ಅಹಿಂಸಾ ನೀಡಿದ್ದ ಹೇಳಿಕೆಗೆ ಡಾ. ರಾಜ್ಕುಮಾರ್ ಅಭಿಮಾನಿಗಳು, ಕನ್ನಡಪರ ಸಂಘಟನೆ ಕಾರ್ಯಕರ್ತರು ಖಂಡನೆ ವ್ಯಕ್ತಪಡಿಸಿದರು. ಚೇತನ್ ಅಹಿಂಸಾ ಕ್ಷಮೆ ಕೇಳಬೇಕು ಎಂದು ಎಲ್ಲರೂ ಒತ್ತಾಯಿಸಿದರು. ಆದರೆ ಚೇತನ್ ಅವರು ಕ್ಷಮೆ ಕೇಳುವಾಗ ಸುತ್ತಿ ಬಳಸಿ ಮಾತನಾಡಿದರು. ವಿಡಿಯೋ ನೋಡಿ..
ನಟ ಚೇತನ್ ಅಹಿಂಸಾ ಅವರು ಇತ್ತೀಚೆಗೆ ಡಾ. ರಾಜ್ಕುಮಾರ್ ಸಮಾಧಿ (Dr Rajkumar Samadhi) ಬಗ್ಗೆ ನೀಡಿದ ಹೇಳಿಕೆಯಿಂದ ವಿವಾದ ಸೃಷ್ಟಿ ಆಯಿತು. ಸಮಾಧಿ ನಿರ್ಮಾಣಕ್ಕೆ ಸರ್ಕಾರ ಎರಡೂವರೆ ಎಕರೆ ಜಾಗ ನೀಡಿದ್ದು ಸೂಕ್ತವಲ್ಲ ಎಂದು ಚೇತನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಅದಕ್ಕೆ ಡಾ. ರಾಜ್ಕುಮಾರ್ ಅಭಿಮಾನಿಗಳು, ಕನ್ನಡಪರ ಸಂಘಟನೆ ಕಾರ್ಯಕರ್ತರು ಖಂಡನೆ ವ್ಯಕ್ತಪಡಿಸಿದರು. ಚೇತನ್ ಅಹಿಂಸಾ (Chetan Kumar Ahimsa) ಕ್ಷಮೆ ಕೇಳಬೇಕು ಎಂದು ಎಲ್ಲರೂ ಒತ್ತಾಯಿಸಿದರು. ಆದರೆ ಚೇತನ್ ಅವರು ಕ್ಷಮೆ ಕೇಳುವಾಗ ಸುತ್ತಿ ಬಳಸಿ ಮಾತನಾಡಿದರು. ನೇರವಾಗಿ ಅವರು ಕ್ಷಮೆ ಕೇಳುವುದಕ್ಕೂ ಮುನ್ನ ತಮ್ಮ ಹೇಳಿಕೆಯನ್ನು ಸಮರ್ಥಿಸುವ ಪ್ರಯತ್ನ ಮಾಡಿದರು. ಅದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us

