ಸಿದ್ದರಾಮಯ್ಯ ಸರ್ಕಾರದ ಕುತಂತ್ರಗಳಿಗೆ ಹೆದರಲ್ಲ, ಬಗ್ಗಲ್ಲ: ಬಿವೈ ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

Updated on: Jun 14, 2025 | 12:21 PM

ವಿಜಯೇಂದ್ರ ನಾಯಕತ್ವದ ಬಿಜೆಪಿ ನಾಯಕರು, ಕರಾವಳಿ ಭಾಗದ ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಕಾರ್ಯಕರ್ತರರು ಮಂಗಳೂರಿಗೆ ಭೇಟಿ ನೀಡಿ ರಹೆಮಾನ್ ಕೊಲೆ ಪ್ರಕರಣದ ನಂತರ ಇಲ್ಲಿಗೆ ವರ್ಗಾವಣೆ ಹೊಂದಿ ಬಂದಿರುವ ಪೊಲೀಸ್ ಕಮೀಶನರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿದ್ದರು.

ಬೆಂಗಳೂರು, ಜೂನ್ 14: ಕೋಮು ಗಲಭೆಗಳನ್ನು (communal riots) ಹತ್ತಿಕ್ಕಲು ಮತ್ತು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗವುಂಟಾಗದಿರಲಿ ಅಂತ ಹೇಳಿ ರಾಜ್ಯ ಸರ್ಕಾರ ರಚಿಸಿರುವ ಕೋಮು ನಿಗ್ರಹ ದಳ ಕೇವಲ ಹಿಂದೂ ಮತ್ತು ಬಿಜೆಪಿ ಕಾರ್ಯಕರ್ತನ್ನು ಟಾರ್ಗೆಟ್ ಮಾಡಲು ಸರ್ಕಾರ ಸ್ಥಾಪಿಸಿರುವ ಒಂದು ಟೂಲ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು. ಮಾಧ್ಯಮಗಳೊಂದಿಗೆ ಮಾತಾಡಿದ ಅವರು ಸಿದ್ದರಾಮಯ್ಯ ಸರ್ಕಾರದ ಯಾವುದೇ ಕುತಂತ್ರಗಳಿಗೆ ರಾಜ್ಯ ಬಿಜೆಪಿ ನಾಯಕರು ಕಾರ್ಯಕರ್ತರು ಹೆದರಲ್ಲ, ಬಗ್ಗಲ್ಲ ಎಂದು ಹೇಳಿದರು.

ಇದನ್ನೂ ಓದಿ:  ರಾಜ್ಯ ಸರ್ಕಾರ ಹಿಂದೂ ಕಾರ್ಯಕರ್ತರನ್ನು ವಿನಾಕಾರಣ ಟಾರ್ಗೆಟ್ ಮಾಡುತ್ತಿದೆ: ಬಿವೈ ವಿಜಯೇಂದ್ರ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ