ಸಿಎಂ ಸಿದ್ದರಾಮಯ್ಯ ಕರೆದಿರುವ ಸಭೆಗೆ ಹೋಗ್ತೀರಾ ಅಂತ ಕೇಳಿದಾಗ ಕುಮಾರಸ್ವಾಮಿ ಸಮಂಜಸ ಉತ್ತರ ನೀಡಲಿಲ್ಲ!

|

Updated on: Jun 27, 2024 | 2:31 PM

ಕರ್ನಾಟಕದ ನಾಯಕರು-ಯಾವುದೇ ಪಕ್ಷದವರಾಗಿರಲಿ, ತಮ್ಮ ಒಣ ಪ್ರತಿಷ್ಠೆಗಾಗಿ ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಬಾರದು. ರಾಜ್ಯದ ಅಭಿವೃದ್ಧಿ ಮತ್ತು ಸಮಸ್ಯೆಗಳ ವಿಷಯ ಬಂದಾಗ ರಾಜಕಾರಣ ಹಿಂಬದಿಯ ಆಸನಕ್ಕೆ ಹೋಗಬೇಕು. ನಾನು ರಾಜ್ಯದ ಮುಖ್ಯಮಂತ್ರಿ, ನಾನು ಕೇಂದ್ರದಲ್ಲಿ ಮಂತ್ರಿ ಎಂಬ ಅಹಂಗಳನ್ನು ನಾಯಕರು ಬದಿಗಿಡಬೇಕು.

ದೆಹಲಿ: ರಾಜ್ಯಸಭೆ ಮತ್ತು ಲೋಕಸಭೆಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಿದರು. ಅಧಿವೇಶನದಲ್ಲಿ ಭಾಗಿಯಾಗುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವ ಹೆಚ್ ಡಿ ಕುಮಾರಸ್ವಾಮಿಯವರು ನಾಡಪ್ರಭು ಕೆಂಪೇಗೌಡರ 515 ಜಯಂತಿ ಪ್ರಯುಕ್ತ ದೆಹಲಿಯಲ್ಲಿರುವ ಕರ್ನಾಟಕ ಭವನದಲ್ಲಿಯೇ ತಾನು, ರಾಜ್ಯದ ಮತ್ತೊಬ್ಬ ಕೇಂದ್ರ ಸಚಿವ ವಿ ಸೋಮಣ್ಣ ಹಾಗೂ ಕೋಲಾರದ ಜೆಡಿಎಸ್ ಸಂಸದ ಮಲ್ಲೇಶ್ ಅವರೊಂದಿಗೆ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ್ದಾಗಿ ಹೇಳಿದರು. ಕರ್ನಾಟಕ ಸರ್ಕಾರವು ಕೆಂಪೇಗೌಡ ಜಯಂತಿ ಅಧಿಕೃತ ಕಾರ್ಯಕ್ರಮದ ಪ್ರಕಟಣೆಯಲ್ಲಿ ತನ್ನ ಮತ್ತು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಹೆಸರು ಸೇರಿಸದಿರುವುದು ದೊಡ್ಡ ವಿಷಯವೆನಲ್ಲ ಮತ್ತು ತಾನು ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ದೆಹಲಿಯಲ್ಲಿ ಕುಮಾರಸ್ವಾಮಿ ಬುಧವಾರ ಹೇಳಿದ್ದರು. ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರೆದಿರುವ ಸಭೆಗೆ ಹಾಜರಾಗುತ್ತೀರಾ ಎಂದು ಕೇಳಿದ ಪ್ರಶ್ನೆಗೆ, ಕುಮಾರಸ್ವಾಮಿ; ಏನೋ ಸಭೆ ಕರೆದಿದ್ದಾರೆ ನೋಡೋಣ ಅಂತ ಉಡಾಫೆಯ ಉತ್ತರ ನೀಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಕೆಂಪೇಗೌಡ ಜಯಂತಿ ನಿಮಿತ್ತ ಸರ್ಕಾರೀ ಆಹ್ವಾನ ಪತ್ರಿಕೆಯಲ್ಲಿ ದೇವೇಗೌಡ ಹಾಗೂ ನನ್ನ ಹೆಸರಿಲ್ಲದಿರುವುದು ದೊಡ್ಡ ವಿಷಯವಲ್ಲ: ಕುಮಾರಸ್ವಾಮಿ