AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೇಪಾಳದ ಪ್ರವಾಹದಿಂದ ರಕ್ಷಿಸಲ್ಪಟ್ಟ ತಮಿಳುನಾಡಿನ 21 ಯಾತ್ರಿಕರನ್ನು ಸ್ವಾಗತಿಸಿದ ವಿದೇಶಾಂಗ ಸಚಿವ ಜೈಶಂಕರ್

ನೇಪಾಳದ ಪ್ರವಾಹದಿಂದ ರಕ್ಷಿಸಲ್ಪಟ್ಟ ತಮಿಳುನಾಡಿನ 21 ಯಾತ್ರಿಕರನ್ನು ಸ್ವಾಗತಿಸಿದ ವಿದೇಶಾಂಗ ಸಚಿವ ಜೈಶಂಕರ್

TV9 Web
| Edited By: |

Updated on:Aug 28, 2026 | 7:56 PM

Share

ಪ್ರವಾಹದಿಂದಾಗಿ ನೇಪಾಳದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ 538ಕ್ಕೇರಿದ್ದು, ಇನ್ನೂ 320ಕ್ಕೂ ಹೆಚ್ಚು ಭಾರತೀಯ ಪ್ರಜೆಗಳು ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ನಿರಂತರವಾಗಿ ಸಾಗಿದ್ದು, ಭಾರತ ಸರ್ಕಾರವು ನೇಪಾಳಕ್ಕೆ ವೈದ್ಯಕೀಯ ನೆರವು, ಪರಿಹಾರ ಸಾಮಗ್ರಿಗಳು ಮತ್ತು ತಾಂತ್ರಿಕ ತಂಡಗಳನ್ನು ಕಳುಹಿಸಿಕೊಡುತ್ತಿದೆ. ತಮಿಳುನಾಡು ಸರ್ಕಾರದ ಸಚಿವರಾದ ಆಧವ್ ಅರ್ಜುನ ಮತ್ತು ರಾಜ್‌ಮೋಹನ್ ಸೇರಿದಂತೆ ಹಲವು ಪ್ರಮುಖರು ಈ ವೇಳೆ ಉಪಸ್ಥಿತರಿದ್ದು, ಯಾತ್ರಿಕರನ್ನು ಭೇಟಿಯಾಗಿ ಅವರ ಕ್ಷೇಮ ಸಮಾಚಾರ ವಿಚಾರಿಸಿದರು. ಇದೇ ವೇಳೆ ಸಚಿವರು ದೆಹಲಿಯಲ್ಲಿ ಸ್ಥಾಪಿಸಲಾಗಿರುವ ಸಹಾಯವಾಣಿ ಮತ್ತು ನಿಯಂತ್ರಣ ಕೊಠಡಿಗೆ ಭೇಟಿ ನೀಡಿ ಅದರ ಕಾರ್ಯಾಚರಣೆಯನ್ನು ಪರಿಶೀಲಿಸಿದರು.

ನವದೆಹಲಿ, ಆಗಸ್ಟ್ 28: ನೇಪಾಳದಲ್ಲಿ ಉಂಟಾದ ಭೀಕರ ಪ್ರವಾಹದಲ್ಲಿ (Nepal Flash Floods) ಸಿಲುಕಿ, ಯಶಸ್ವಿಯಾಗಿ ರಕ್ಷಿಸಲ್ಪಟ್ಟ ತಮಿಳುನಾಡಿನ 21 ಯಾತ್ರಿಕರನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಇಂದು ದೆಹಲಿಯಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು. ಈ ವೇಳೆ ಅವರ ಜೊತೆ ಸಚಿವರು ಮಾತುಕತೆ ನಡೆಸಿ, ಅವರ ಅನುಭವಗಳನ್ನು ಆಲಿಸಿದರು. ತಮಿಳುನಾಡು ಸರ್ಕಾರದ ಸಚಿವರಾದ ಆಧವ್ ಅರ್ಜುನ ಮತ್ತು ರಾಜ್‌ಮೋಹನ್ ಸೇರಿದಂತೆ ಹಲವು ಪ್ರಮುಖರು ಈ ವೇಳೆ ಉಪಸ್ಥಿತರಿದ್ದು, ಯಾತ್ರಿಕರನ್ನು ಭೇಟಿಯಾಗಿ ಅವರ ಕ್ಷೇಮ ಸಮಾಚಾರ ವಿಚಾರಿಸಿದರು. ಇದೇ ವೇಳೆ ಸಚಿವರು ದೆಹಲಿಯಲ್ಲಿ ಸ್ಥಾಪಿಸಲಾಗಿರುವ ಸಹಾಯವಾಣಿ ಮತ್ತು ನಿಯಂತ್ರಣ ಕೊಠಡಿಗೆ ಭೇಟಿ ನೀಡಿ ಅದರ ಕಾರ್ಯಾಚರಣೆಯನ್ನು ಪರಿಶೀಲಿಸಿದರು.

ಪ್ರವಾಹದಿಂದಾಗಿ ನೇಪಾಳದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ 538ಕ್ಕೇರಿದ್ದು, ಇನ್ನೂ 320ಕ್ಕೂ ಹೆಚ್ಚು ಭಾರತೀಯ ಪ್ರಜೆಗಳು ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ನಿರಂತರವಾಗಿ ಸಾಗಿದ್ದು, ಭಾರತ ಸರ್ಕಾರವು ನೇಪಾಳಕ್ಕೆ ವೈದ್ಯಕೀಯ ನೆರವು, ಪರಿಹಾರ ಸಾಮಗ್ರಿಗಳು ಮತ್ತು ತಾಂತ್ರಿಕ ತಂಡಗಳನ್ನು ಕಳುಹಿಸಿಕೊಡುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Aug 28, 2026 07:55 PM

Follow Us