ಬಿಲ್ ಮಂಡನೆ ವೇಳೆ ಗದ್ದಲ: ಬೆಂಗಳೂರು ಛಿದ್ರ ಛಿದ್ರ ಮಾಡಿದ್ರೆ ಕೆಂಪೇಗೌಡರ ಶಾಪ ತಟ್ಟತ್ತೆ ಎಂದ ಬಿಜೆಪಿ ನಾಯಕರು

| Updated By: ಗಂಗಾಧರ​ ಬ. ಸಾಬೋಜಿ

Updated on: Jul 23, 2024 | 9:00 PM

2024ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಬಿಲ್​ ಅನ್ನು ಡಿಕೆ ಶಿವಕುಮಾರ್ ಮಂಡಿಸುವ ವೇಳೆ ವಿಧೇಯಕಕ್ಕೆ ವಿಪಕ್ಷ ನಾಯಕ ಆರ್​. ಅಶೋಕ್ ಮತ್ತು ಡಾ. ಅಶ್ವತ್ ನಾರಾಯಣ್ ವಿರೋಧ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಛಿದ್ರ ಛಿದ್ರ ಮಾಡಿದರೆ ನಿಮಗೆ ಕೆಂಪೇಗೌಡರ ಶಾಪ ತಟ್ಟದೇ ಇರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಜುಲೈ 23: ಗ್ರೇಟರ್​ ಬೆಂಗಳೂರು (Bengaluru) ಆಡಳಿತ ವಿಧೇಯಕವನ್ನು ಡಿಸಿಎಂ ಡಿಕೆ ಶಿವಕುಮಾರ್ (DK Shivakumar)​ ಮಂಡನೆ ವೇಳೆ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಬೆಂಗಳೂರಿನ‌ ಜನರು ಈ ವಿಧೇಯಕದ ವಿರುದ್ಧ ಇದ್ದಾರೆ. ಈ ಬಗ್ಗೆ ಚರ್ಚೆ ಆಗಬೇಕು, ಇದಕ್ಕೆ ನಮ್ಮ ವಿರೋಧವಿದೆ. ಬೆಂಗಳೂರು ಛಿದ್ರ ಛಿದ್ರ ಮಾಡಿದರೆ ನಿಮಗೆ ಕೆಂಪೇಗೌಡರ ಶಾಪ ತಟ್ಟದೇ ಇರುವುದಿಲ್ಲ. ಅವೈಜ್ಞಾನಿಕವಾಗಿ ವಿಧೇಯಕ ತಂದಿದ್ದಾರೆಂದು ಗಲಾಟೆ ಮಾಡಿದ್ದಾರೆ. ಈಗಾಗಲೇ ಬೆಂಗಳೂರು ನಗರ ನರಕವಾಗಿದೆ. ಸರ್ಕಾರಕ್ಕೆ ಒಂದು ರೂ. ಕೊಡಲು ಯೋಗ್ಯತೆ ಇಲ್ಲ. ಜು.27ಕ್ಕೆ ಸಭೆ ಕರೆದಿದ್ದೀರಲ್ಲ ಈ ಬಗ್ಗೆ ಚರ್ಚೆ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ವಿರೋಧ ಪಕ್ಷ ನಾಯಕ ಅಶೋಕ್, ಅಶ್ವತ್ಥ್​​ ನಾರಾಯಣ್, ಸುರೇಶ್ ಕುಮಾರ್ ಆಗ್ರಹಿಸಿದರು. ಅಧಿಕಾರಿಗಳಿಗೆ ಬೆಂಗಳೂರಿನ ಬಗ್ಗೆ ಏನು ಬದ್ಧತೆ ಇದೆ? ಅವರು ಏನೋ ವಿಧೇಯಕ ಮಾಡಿ ಎಲ್ಲೋ ಹೋಗುತ್ತಾರೆ. ಬೆಂಗಳೂರನ್ನು ಸರ್ವನಾಶ ಮಾಡಲು ಹೊರಟಿದ್ದೀರಿ. ಇದರ ಸಾಧಕ ಭಾದಕಗಳ ಬಗ್ಗೆ ಚರ್ಚೆಯಾಗಬೇಕು. ಅದಕ್ಕಾಗಿ ಬೆಂಗಳೂರು ಶಾಸಕರ ಸಮಿತಿಯನ್ನ ರಚಿಸಿ, ಅಧ್ಯಯನ ವರದಿ ಆಧಾರಿಸಿ ತೀರ್ಮಾನ ಕೈಗೊಳ್ಳಿ ಎಂದು​ ಒತ್ತಾಯಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.