AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿ.ಕೆ. ಹರಿಪ್ರಸಾದ್​​ ಅಮಾನತಿಗೆ ಬಿಜೆಪಿ ಪಟ್ಟು: ರಣಾಂಗಣವಾದ ವಿಧಾನ ಪರಿಷತ್​

ಬಿ.ಕೆ. ಹರಿಪ್ರಸಾದ್​​ ಅಮಾನತಿಗೆ ಬಿಜೆಪಿ ಪಟ್ಟು: ರಣಾಂಗಣವಾದ ವಿಧಾನ ಪರಿಷತ್​

ಹರೀಶ್ ಜಿ.ಆರ್​.
| Edited By: |

Updated on: Jan 23, 2026 | 2:28 PM

Share

ಜಂಟಿ ಅಧಿವೇಶನ ಉದ್ದೇಶಿಸಿ ಸರ್ಕಾರ ಕೊಟ್ಟ ಭಾಷಣ ಮಾಡದೆ ರಾಜ್ಯಪಾಲರು ಸದನದಿಂದ ಹೊರ ಹೋಗುವ ವೇಳೆ ನಡೆದ ಹೈಡ್ರಾಮಾ ವಿಚಾರ ವಿಧಾನ ಪರಿಷತ್​​ನಲ್ಲಿ ಆಡಳಿತ ಮತ್ತು ವಿಪಕ್ಷದ ನಡುವೆ ಗಲಾಟೆಗೆ ಕಾರಣವಾಗಿದೆ. ಸದಸ್ಯ ಹರಿಪ್ರಸಾದ್​​ರನ್ನು ಅಮಾನತು ಮಾಡುವಂತೆ ಆಗ್ರಹಿಸಿ ಬಿಜೆಪಿ ಆಗ್ರಹಿಸಿದ ಪರಿಣಾಮ ಪರಿಷತ್​​ ರಣಾಂಗಣವಾಗಿ ಮಾರ್ಪಟ್ಟಿದೆ. ಹೀಗಾಗಿ ಕಲಾಪವನ್ನು ಸಭಾಪತಿ ಬಸವರಾಜ ಹೊರಟ್ಟಿ ಕೆಲಕಾಲ ಮೂಂದೂಡಬೇಕಾಯಿತು.

ಬೆಂಗಳೂರು, ಜನವರಿ 23:  ಕಾಂಗ್ರೆಸ್ ಸದಸ್ಯರು ರಾಜ್ಯಪಾಲರನ್ನು ಅಡ್ಡಗಟ್ಟಿದ ವಿಚಾರ ಸಂಬಂಧ ಬಿ.ಕೆ. ಹರಿಪ್ರಸಾದ್ ಅಮಾನತು ಆಗಬೇಕು ಎಂದು ಬಿಜೆಪಿ ಒತ್ತಾಯಿಸಿದ ಹಿನ್ನೆಲೆ ವಿಧಾನ ಪರಿಷತ್​​ ರಣಾಂಗಣವಾದ ಪ್ರಸಂಗ ನಡೆದಿದೆ. ರಾಜ್ಯಪಾಲರು ಬಂದಾಗ ‘ಕೈ’ ಸದಸ್ಯರ ಗೂಂಡಾ ವರ್ತನೆ ಸರಿಯಲ್ಲ. ಹೀಗಾಗಿ ಬಿ.ಕೆ. ಹರಿಪ್ರಸಾದ್ ಅಮಾನತು ಆಗಬೇಕೆಂದು ಬಿಜೆಪಿ ಸದಸ್ಯರು ಆಗ್ರಹಿಸಿದ್ದಾರೆ. ನೋಟಿಸ್​ ಕೊಟ್ಟಿಲ್ಲ, ಹಾಗಾಗಿ ಈ ಬಗ್ಗೆ ಚರ್ಚೆಗೆ ಅವಕಾಶ ಕೊಡಲು ಆಗಲ್ಲ ಎಂದ ಸಭಾಪತಿ ಹೊರಟ್ಟಿ ಹೇಳಿದ್ದರಿಂದ ಕಾಂಗ್ರೆಸ್​ಗೆ ಧಿಕ್ಕಾರ ಎಂದು ಬಿಜೆಪಿ ಸದಸ್ಯರು ಘೋಷಣೆ ಕೂಗಿದ್ದಾರೆ. ಈ ವೇಳೆ ಆಡಳಿತ ಪಕ್ಷ ಮತ್ತು ವಿಪಕ್ಷದ ನಡುವೆ ಮಾತಿನ ಚಕಮಕಿ ಉಂಟಾದ ಕಾರಣ ವಿಧಾನಪರಿಷತ್​ ಕಲಾಪವನ್ನು ಸಭಾಪತಿ ಬಸವರಾಜ ಹೊರಟ್ಟಿ ಕೆಲಕಾಲ ಮೂಂದೂಡಬೇಕಾಯಿತು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.