Video: ದಿನಸಿ ಅಂಗಡಿ ಬಾಗಿಲು ಮುರಿದು ಬಾಳೆಗೊನೆ ಕದ್ದು ತಿಂದ ಗಜರಾಜ!
Chamarajanagar News: ಕಾಡಾನೆ ಒಂದು ದಿನಸಿ ಅಂಗಡಿಯ ಬಾಗಿಲು ಮುರಿದು ಬಾಳೆಗೊನೆ ಕದ್ದಿರುವ ಘಟನೆ ತಮಿಳುನಾಡಿನ ಅಸನೂರಲ್ಲಿ ನಡೆದಿದೆ. ಅಸನೂರಿನ ವೆಂಕಟೇಶ್ ಎಂಬುವರ ದಿನಸಿ ಅಂಗಡಿಯ ಶಟರ್ ಮುರಿದ ಆನೆ ಬಾಳೆಗೊನೆ ಎತ್ತಿಕೊಂಡು ತಿಂದಿದೆ.
ಚಾಮರಾಜನಗರ, ಆಗಸ್ಟ್ 04: ಪುಣಜನೂರು ಸಮೀಪದ ತಮಿಳುನಾಡಿನ ಅಸನೂರಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡಿ ವಾಹನ ಅಡ್ಡಗಟ್ಟುತ್ತಿದ್ದ ಕಾಡಾನೆ (Elephant) ಇದೀಗ ದಿನಸಿ ಅಂಗಡಿಯ ಬಾಗಿಲು ಮುರಿದು ಬಾಳೆಗೊನೆ ಕದ್ದಿರುವ ಘಟನೆ ನಡೆದಿದೆ. ಅಸನೂರಿನ ವೆಂಕಟೇಶ್ ಎಂಬುವರ ದಿನಸಿ ಅಂಗಡಿಯ ಶಟರ್ ಮುರಿದ ಆನೆಯೊಂದು ಬಾಳೆಗೊನೆ ಎತ್ತಿಕೊಂಡು ತಿಂದಿದೆ. ಜೊತೆಗೆ, ಟೊಮೆಟೊ ತರಕಾರಿಯನ್ನು ತಿಂದಿದೆ. ಆನೆ ದಾಳಿಯಿಂದ ಎಚ್ವೆತ್ತ ಜನರು ಕಿರುಚಾಡಿ ಆನೆಯನ್ನು ಓಡಿಸಿದ್ದಾರೆ. ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು ಸಿಸಿಟಿವಿಯಲ್ಲೂ ಆನೆ ದಾಂಧಲೆ ಸೆರೆಯಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos