‘ಪ್ರಜಾಪ್ರಭುತ್ವದ ಅಡಿಪಾಯವನ್ನು ನಾವು ಕಾಪಾಡಬೇಕು’: ವಿನಯ್​ ರಾಜ್​ಕುಮಾರ್​

‘ಪ್ರಜಾಪ್ರಭುತ್ವದ ಅಡಿಪಾಯವನ್ನು ನಾವು ಕಾಪಾಡಬೇಕು’: ವಿನಯ್​ ರಾಜ್​ಕುಮಾರ್​

Mangala RR
| Updated By: ಮದನ್​ ಕುಮಾರ್​

Updated on: Apr 26, 2024 | 10:49 PM

ಬೆಂಗಳೂರಿನಲ್ಲಿ ವಿನಯ್​ ರಾಜ್​ಕುಮಾರ್​, ಯುವ ರಾಜ್​ಕುಮಾರ್​ ಅವರು ಮತ ಚಲಾಯಿಸಿದ್ದಾರೆ. ಅಭಿಮಾನಿಗಳಲ್ಲೂ ಅವರು ಮತದಾನದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಓಟ್​ ಮಾಡಿದ ಬಳಿಕ ಮಾತನಾಡಿದ ವಿನಯ್​ ರಾಜ್​ಕುಮಾರ್​ ಅವರು ಮತದಾನವೇ ಪ್ರಜಾಪ್ರಭುತ್ವದ ಅಡಿಪಾಯ ಎಂದಿದ್ದಾರೆ. ‘ಓಟ್​ ಮಾಡಿದರೆ ನಮಗೆ ಪ್ರಶ್ನೆ ಮಾಡುವ ಅಧಿಕಾರ ಇರುತ್ತದೆ’ ಎಂದು ಯುವ ರಾಜ್​ಕುಮಾರ್​ ಹೇಳಿದ್ದಾರೆ.

ಡಾ. ರಾಜ್​ಕುಮಾರ್​ ಕುಟುಂಬದ ಕುಡಿಗಳಾದ ವಿನಯ್​ ರಾಜ್​ಕುಮಾರ್​ (Vinay Rajkumar) ಮತ್ತು ಯುವ ರಾಜ್​ಕುಮಾರ್​ ಅವರು ಬೆಂಗಳೂರಿನಲ್ಲಿ ಮತದಾನ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ (Lok Sabha Election) ಅವರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಓಟ್​ ಮಾಡಿದ ಬಳಿಕ ‘ಟಿವಿ9 ಕನ್ನಡ’ ಜೊತೆ ಮಾತನಾಡಿದ ಅವರು ಮತದಾನದ ಬಗ್ಗೆ ತಮ್ಮ ಅನಿಸಿಕೆ ತಿಳಿಸಿದರು. ಯುವಕರು ತಪ್ಪದೇ ಮತ ಹಾಕಬೇಕು ಎಂದು ಜಾಗೃತಿ ಸಂದೇಶ ನೀಡಿದರು. ‘ಸದಾಶಿವ ನಗರದಲ್ಲಿ ನಾವು 35 ವರ್ಷಗಳಿಂದ ಇದ್ದೇವೆ. ನಾನು ಇದೇ ಶಾಲೆಯಲ್ಲಿ ಓದಿದ್ದು. ನಮ್ಮ ಸ್ನೇಹಿತರು ತುಂಬ ಜನರು ಇದ್ದಾರೆ ಇಲ್ಲಿ. ನಮಗೆ ಗೊತ್ತಿರುವ ಎಲ್ಲರೂ ಪ್ರತಿ ವರ್ಷ ಬಂದು ಖಂಡಿತಾ ಓಟ್​ ಮಾಡುತ್ತಾರೆ. ಇದರಿಂದ ಪ್ರೇರಣೆಗೊಂಡು ಎಲ್ಲ ಕಡೆಗಳಲ್ಲೂ ಜನರು ಹೀಗೆಯೇ ಮತ ಹಾಕಬೇಕು. ಯಾಕೆಂದರೆ, ಇದು ನಮ್ಮ ಹಕ್ಕು. ಇದು ನಮ್ಮ ಪ್ರಜಾಪ್ರಭುತ್ವದ ದೊಡ್ಡ ಅಡಿಪಾಯ. ಇದನ್ನು ನಾವು ಯಾವಾಗಲೂ ಕಾಪಾಡಬೇಕು’ ಎಂದು ವಿನಯ್​ ರಾಜ್​ಕುಮಾರ್ ಹೇಳಿದ್ದಾರೆ. ‘ಪ್ರತಿಯೊಬ್ಬರೂ ಓಟ್​ ಮಾಡಲೇಬೇಕು. ನಾವು ಪ್ರಶ್ನೆ ಮಾಡಬೇಕು ಎಂದರೆ ಮತದಾನ ಮಾಡಿರಲೇಬೇಕು. ನಮ್ಮದು ದೊಡ್ಡ ಪ್ರಜಾಪ್ರಭುತ್ವ. ಈಗ ಎಲ್ಲ ಹಳ್ಳಿಯಲ್ಲೂ ಓಟ್​ ಮಾಡುವ ಅವಕಾಶ ಇದೆ. ಅದನ್ನು ನಾವು ಬಳಸಿಕೊಳ್ಳಬೇಕು. ನಮ್ಮ ಕುಟುಂಬದ ಪ್ರತಿಯೊಬ್ಬರೂ ಓಟ್​ ಮಾಡಿದ್ದೇವೆ. ನೀವು ಕೂಡ ಕುಟುಂಬ ಸಮೇತರಾಗಿ ಬಂದು ಮತ ಹಾಕಿ’ ಎಂದು ಯುವ ರಾಜ್​ಕುಮಾರ್​ (Yuva Rajkumar) ಅವರು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.