Video: ಶ್ರೀರಾಮ ದೇವಾಲಯದ ಎದುರಿನ ಶಿವಲಿಂಗದ ಮೇಲೆ ನಾಗರಹಾವು ಪ್ರತ್ಯಕ್ಷ; ವಿಡಿಯೋ ಇಲ್ಲಿದೆ

ಶಿವಲಿಂಗದ ಮೇಲೆ ನಾಗರ ಹಾವು ಪ್ರತ್ಯಕ್ಷವಾಗಿರುವುದನ್ನು ಕಂಡು ದೇವಸ್ಥಾನದ ಅರ್ಚಕರು ನಾಗೇಂದ್ರನಿಗೆ ವಿಶೇಷ ಪೂಜೆ ಸಲ್ಲಿಸಿದ್ದು, ಹಾಗೂ ಈ ಪುಣ್ಯ ಕ್ಷಣವನ್ನು ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ಕಣ್ತುಂಬಿಸಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ತೆಲಂಗಾಣದ ಹುಜೂರಾಬಾದ್‍ನ ಶ್ರೀರಾಮ ದೇವಾಲಯದ ಎದುರಿನ ಶಿವಲಿಂಗದ ಮೇಲೆ ನಾಗರಹಾವು ಇದ್ದಕ್ಕಿದ್ದಂತೆ ಕಾಣಿಸಿಕೊಂಡಿದೆ. ಶಿವಲಿಂಗವು ನಾಗರ ಹಾವಿನಿಂದ ಸುತ್ತುವರಿದಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​ ಆಗಿದೆ. ನಾಗರಾಜನ ಜೊತೆಗೆ ಶಿವಲಿಂಗದ ದರ್ಶನ ಭಾಗ್ಯ ಲಭಿಸಿದ್ದರಿಂದ ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ. ಶಿವಲಿಂಗದ ಮೇಲೆ ನಾಗರ ಹಾವು ಪ್ರತ್ಯಕ್ಷವಾಗಿರುವುದನ್ನು ಕಂಡು ದೇವಸ್ಥಾನದ ಅರ್ಚಕರು ನಾಗೇಂದ್ರನಿಗೆ ವಿಶೇಷ ಪೂಜೆ ಸಲ್ಲಿಸಿದ್ದು, ಹಾಗೂ ಈ ಪುಣ್ಯ ಕ್ಷಣವನ್ನು ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ಕಣ್ತುಂಬಿಸಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸದ್ಯ ವಿಡಿಯೋ ಲಕ್ಷಾಂತರ ನೆಟ್ಟಿಗರನ್ನು ತಲುಪಿದೆ. ಹಾವು ಕೂಡ ಅಷ್ಟು ಭಕ್ತರು ನೆರೆದಿದ್ದರೂ ಕೂಡ ಯಾರಿಗೂ ಏನೂ ಹಾನಿಯುಂಟು ಮಾಡದೇ ತನ್ನ ಪಾಡಿಗೆ ಹೋಗಿದ್ದು, ಇದು ದೇವರ ಪವಾಡವೇ ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್​​ ಮೂಲಕ ವ್ಯಕ್ತ ಪಡಿಸಿದ್ದಾರೆ.

Published On - 10:55 am, Sun, 28 January 24

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us