ನಮ್ಮದು ಬೆಲೆ ಏರಿಕೆ ಭಾಗ್ಯದ ಸರ್ಕಾರವಲ್ಲ, ಗ್ಯಾರಂಟಿಗಳ ಸರ್ಕಾರ ಎಂದ ಡಿಕೆ ಸುರೇಶ್
ಮುಖ್ಯಾಂಶಗಳು
- ಹಾಲು, ಮೊಸರು ಬೆಲೆ ಏರಿಕೆ ಸಮರ್ಥಿಸಿಕೊಂಡ ಡಿಕೆ ಸುರೇಶ್
- ಟಿವಿ9 ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಡಿಕೆ ಸುರೇಶ್ ಮಾತು
- ಬೆಲೆ ಏರಿಕೆಯ ಅಸಲಿ ಲೆಕ್ಕ ಬಿಚ್ಚಿಟ್ಟ ಬಮೂಲ್ ಅಧ್ಯಕ್ಷ
ಟಿವಿ9 ಸಂದರ್ಶನದಲ್ಲಿ ಬಮೂಲ್ ಅಧ್ಯಕ್ಷ ಡಿಕೆ ಸುರೇಶ್, ಹಾಲು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು. ಆರು ತಿಂಗಳಿಂದ ನಷ್ಟ ಅನುಭವಿಸುತ್ತಿರುವ ಒಕ್ಕೂಟಗಳಿಗೆ ಬೆಲೆ ಏರಿಕೆ ಅನಿವಾರ್ಯ ಎಂದರು. ಇತರೆ ರಾಜ್ಯಗಳು ಹಾಗೂ ಅಮುಲ್ ಸಂಸ್ಥೆಗೆ ಹೋಲಿಸಿದರೆ ಕರ್ನಾಟಕದಲ್ಲಿ ದರ ಕಡಿಮೆ ಇದೆ. ರೈತರಿಗೆ ಲಾಭವಾಗುವಂತೆ ದರ ಹೆಚ್ಚಳ ಮಾಡಲಾಗಿದೆ ಎಂದಿದ್ದಾರೆ.
ಬೆಂಗಳೂರು, ನವೆಂಬರ್ 07: ‘ಕರ್ನಾಟಕದ ಹಾಲು ದರವು ಇತರೆ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆಯಿದೆ. ಕಳೆದ ಆರು ತಿಂಗಳಿಂದ ಹಾಲು ಒಕ್ಕೂಟಗಳು ಪ್ರತಿದಿನ ಒಂದು ಕೋಟಿ 10 ಲಕ್ಷದಿಂದ ಒಂದು ಕೋಟಿ 15 ಲಕ್ಷ ಲೀಟರ್ ಹಾಲನ್ನು ಶೇಖರಿಸಲಾಗುತ್ತಿದ್ದು, ಪ್ರತಿನಿತ್ಯ 1 ರಿಂದ 1.5 ರೂ ನಷ್ಟ ಅನುಭವಿಸುತ್ತಿವೆ. ಈ ನಷ್ಟವನ್ನು ಸರಿದೂಗಿಸಲು ಬೆಲೆ ಏರಿಕೆ ಅನಿವಾರ್ಯ’ ಎಂದು ಮಾಜಿ ಸಂಸದ, ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಹೇಳಿದ್ದಾರೆ. ಟಿವಿ9 ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಇಡೀ ದೇಶದಲ್ಲಿ ಅಮುಲ್ ಸೇರಿದಂತೆ ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೂ ಕರ್ನಾಟಕಕ್ಕಿಂತ ಹೆಚ್ಚಿನ ಹಾಲಿಕ ದರವಿದ್ದು. ಖಾಸಗಿ ಡೈರಿಗಳು ಇನ್ನೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿವೆ. ನಮ್ಮದು ಬೆಲೆ ಏರಿಕೆ ಭಾಗ್ಯ ಸರ್ಕಾರವಲ್ಲ, ಗ್ಯಾರಂಟಿಗಳ ಸರ್ಕಾರ’ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

