AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರದ ರಾಶಿ ಭವಿಷ್ಯ: ಅಕ್ಟೋಬರ್ 19 ರಿಂದ 25ರ ವರೆಗಿನ ದ್ವಾದಶ ರಾಶಿಗಳ ಫಲಾಫಲಗಳು

ವಾರದ ರಾಶಿ ಭವಿಷ್ಯ: ಅಕ್ಟೋಬರ್ 19 ರಿಂದ 25ರ ವರೆಗಿನ ದ್ವಾದಶ ರಾಶಿಗಳ ಫಲಾಫಲಗಳು

ಅಕ್ಷತಾ ವರ್ಕಾಡಿ
|

Updated on: Oct 18, 2026 | 9:41 AM

Share

ಖ್ಯಾತ ಜ್ಯೋತಿಷಿ ಡಾ. ಬಸವರಾಜ್ ಗುರೂಜಿ ಅವರು ಅಕ್ಟೋಬರ್ 19 ರಿಂದ 25 ರವರೆಗಿನ ವಾರದ ರಾಶಿ ಭವಿಷ್ಯವನ್ನು ನೀಡಿದ್ದಾರೆ. ಈ ವಾರದಲ್ಲಿ ನಡೆಯುವ ಪ್ರಮುಖ ಪರ್ವಕಾಲಗಳು, ಗ್ರಹಗಳ ಗೋಚಾರ ಸ್ಥಿತಿ ಹಾಗೂ ದ್ವಾದಶ ರಾಶಿಗಳ ಮೇಲೆ ಆಗುವ ಶುಭ ಮತ್ತು ಅಶುಭ ಫಲಗಳನ್ನು ವಿವರವಾಗಿ ವಿವರಿಸಿದ್ದಾರೆ. ಪ್ರತಿಯೊಂದು ರಾಶಿಯವರಿಗೂ ಆರ್ಥಿಕ, ಕೌಟುಂಬಿಕ, ಉದ್ಯೋಗ, ಆರೋಗ್ಯ ಹಾಗೂ ವೈವಾಹಿಕ ವಿಷಯಗಳಲ್ಲಿನ ಪ್ರಭಾವ ಮತ್ತು ಪರಿಹಾರಗಳನ್ನು ತಿಳಿಸಿದ್ದಾರೆ.

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ್ ಗುರೂಜಿ ಅವರು ಅಕ್ಟೋಬರ್ 19 ರಿಂದ 25 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಕುರಿತು ಮಾಹಿತಿ ನೀಡಿದ್ದಾರೆ. ಈ ವಾರ ಪರಾಭವನಾಮ ಸಂವತ್ಸರ, ದಕ್ಷಿಣಾಯನ, ಆಶ್ವೀಜ ಮಾಸ, ಶರದ ಋತು ಮತ್ತು ಶುಕ್ಲ ಪಕ್ಷದಿಂದ ಕೂಡಿದೆ. ವಾರದಲ್ಲಿ ಅಷ್ಟಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ತ್ರಯೋದಶಿ, ಚತುರ್ದಶಿ ತಿಥಿಗಳು ಇವೆ. ಆಯುಧ ಪೂಜೆ, ಶಮಿ ಪೂಜೆ, ಪಾಪಂಕುಶ ಏಕಾದಶಿ, ಶೃಂಗೇರಿ ಶಾರದಾಂಬ ರಥೋತ್ಸವ, ಚಾಮುಂಡೇಶ್ವರಿ ದೇವಿ ರಥೋತ್ಸವ, ಕೋಜಾಗರಿ ಮಹಾಲಕ್ಷ್ಮಿ ವ್ರತ, ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಚಂಡಿ ಯಾಗದಂತಹ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.

ಈ ವಾರದಲ್ಲಿ ಗ್ರಹಗಳ ಗೋಚಾರ ಸ್ಥಿತಿ ಹೀಗಿದೆ: ಶನಿ ಮೀನ ರಾಶಿಯಲ್ಲಿ ವಕ್ರಿಯಾಗಿ, ಗುರು ಮತ್ತು ಕುಜ ಕರ್ಕಾಟಕ ರಾಶಿಯಲ್ಲಿ, ಕೇತು ಸಿಂಹ ರಾಶಿಯಲ್ಲಿ, ಶುಕ್ರ, ಬುಧ, ರವಿ (ನೀಚನಾಗಿ) ತುಲಾ ರಾಶಿಯಲ್ಲಿ ಸಂಚರಿಸುತ್ತಿದ್ದರೆ, ರಾಹು ಕುಂಭ ರಾಶಿಯಲ್ಲಿ ವಕ್ರಿಯಾಗಿರುತ್ತಾನೆ. ಡಾ. ಬಸವರಾಜ್ ಗುರೂಜಿ ಅವರು ಪ್ರತಿ ರಾಶಿಯವರಿಗೆ ಉದ್ಯೋಗ, ಆರೋಗ್ಯ, ಆರ್ಥಿಕ ಸ್ಥಿತಿ, ಸಂಬಂಧಗಳು, ಪ್ರೀತಿ-ಪ್ರೇಮ, ಮನೆ-ವಾಹನ ಖರೀದಿ, ಮಕ್ಕಳ ಭವಿಷ್ಯ ಮತ್ತು ಕಾನೂನು ವಿಷಯಗಳ ಕುರಿತು ಮಾರ್ಗದರ್ಶನ ನೀಡಿದ್ದಾರೆ. ಅಲ್ಲದೆ, ಪ್ರತಿಯೊಂದು ರಾಶಿಗೆ ಸೂಕ್ತ ಪರಿಹಾರಗಳು, ಅದೃಷ್ಟ ಸಂಖ್ಯೆಗಳು, ಬಣ್ಣಗಳು ಮತ್ತು ಮಂತ್ರಗಳ ಕುರಿತು ಮಾಹಿತಿ ಒದಗಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

 

 

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಸದ್ಯ ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ರಾಜಕೀಯ, ಕ್ರೈಂ ಸುದ್ದಿಗಳನ್ನು ಬರೆಯುತ್ತಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More