ಅಪಹೃತೆಯನ್ನು ರಕ್ಷಿಸಿ ಐದು ದಿನಗಳಾದರೂ ನ್ಯಾಯಾಧೀಶರ ಮುಂದೆ ಹೇಳಿಕೆ ಯಾಕೆ ದಾಖಲಿಸಿಕೊಂಡಿಲ್ಲ? ಕುಮಾರಸ್ವಾಮಿ

|

Updated on: May 09, 2024 | 1:45 PM

ಪ್ರಕರಣ ನಿರ್ಮಾಪಕ-ನಿರ್ದೇಶಕ ಕುಮಾರಸ್ವಾಮಿ ಅಂತ ಡಿಕೆ ಶಿವಕುಮಾರ್ ಹೇಳೀರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹೌದು ನಾನೇ ಪ್ರೊಡ್ಯೂಸರ್, ನಾನೇ ಡೈರೆಕ್ಟರ್ ಮತ್ತು ಕಥಾನಾಯಕನೂ ನಾನೇ ಎಂದು ಹೇಳಿ, ರವಿಚಂದ್ರನ್ ಅಭಿನಯದ ದೃಶ್ಯಂ ಚಿತ್ರದಲ್ಲಿನ ಕಥಾನಾಯಕನಂತೆ ನಾನು ಈ ಪ್ರಕರಣದ ಕಥಾನಾಯಕ ಎಂದರು.

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತೊಮ್ಮೆ ಎಸ್ಐಟಿ ತನಿಖೆ (SIT investigation) ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದರು. ರೇವಣ್ಣ ಅವರನ್ನು ಬಂಧಿಸಿದ್ದು ಮಹಿಳೆಯೊಬ್ಬರನ್ನು ಅಪಹರಿಸಿರುವ ಪ್ರಕರಣದಲ್ಲಿ, ಅದರೆ ಆಕೆಯನ್ನು ಟ್ರೇಸ್ ಮಾಡಿ 5 ದಿನ ಕಳೆದರೂ ಯಾಕೆ ಇದುವರೆಗೆ ಆಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೇಳಿಕೆಯನ್ನು (statement) ದಾಖಲಿಸಿಕೊಂಡಿಲ್ಲ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು, ರೇವಣ್ಣರನ್ನು ಇನ್ನೂ ಕೆಲದಿನಗಳ ಕಾಲ ಜೈಲಲ್ಲಿ ಕೂಡಿಹಾಕಬೇಕೆನ್ನುವುದು ಸರ್ಕಾರದ ಉದ್ದೇಶವಾಗಿದೆ, ಅಪಹರಣ ಪ್ರಕರಣದಲ್ಲಿ ಸತ್ಯಾಂಶ ಹೊರಬರೋದು ಸರ್ಕಾರಕ್ಕೆ ಬೇಕಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. ಪ್ರಕರಣ ನಿರ್ಮಾಪಕ-ನಿರ್ದೇಶಕ ಕುಮಾರಸ್ವಾಮಿ ಅಂತ ಡಿಕೆ ಶಿವಕುಮಾರ್ ಹೇಳೀರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹೌದು ನಾನೇ ಪ್ರೊಡ್ಯೂಸರ್, ನಾನೇ ಡೈರೆಕ್ಟರ್ ಮತ್ತು ಕಥಾನಾಯಕನೂ ನಾನೇ ಎಂದು ಹೇಳಿ, ರವಿಚಂದ್ರನ್ ಅಭಿನಯದ ದೃಶ್ಯಂ ಚಿತ್ರದಲ್ಲಿನ ಕಥಾನಾಯಕನಂತೆ ನಾನು ಈ ಪ್ರಕರಣದ ಕಥಾನಾಯಕ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ತಮಗೆ ಬೇಕಾಗುವ ರೀತಿಯಲ್ಲಿ ಹೇಳಿಕೆ ನೀಡಲು ಎಸ್ಐಟಿ ಅಧಿಕಾರಿಗಳು ರೇವಣ್ಣ ಮೇಲೆ ಒತ್ತಡ ಹೇರುತ್ತಿದ್ದಾರೆ: ಕುಮಾರಸ್ವಾಮಿ

Follow us on