ಲೋಕಾಯುಕ್ತ ಅಧಿಕಾರಿಗಳ ಮುಂದೆ ಬುಧವಾರ ವಿಚಾರಣೆಗೆ ಹಾಜರಾಗುತ್ತೇನೆ: ಸಿದ್ದರಾಮಯ್ಯ
ನವೆಂಬರ್ 6ರಂದು ಮುಖ್ಯಮಂತ್ರಿಯವರು ಲೋಕಾಯುಕ್ತ ಅಧಿಕಾರಿಗಳ ಮುಂದೆ ಹಾಜರಾಗಬೇಕಿದೆ. ನೋಟೀಸ್ ಜಾರಿಯಾಗಿರುವ ವಿಷಯ ಪ್ರಾಯಶಃ ಸಿದ್ದರಾಮಯ್ಯ ಗಮನಕ್ಕೆ ಅದಾಗಲೇ ಬಂದಿತ್ತಾದರೂ ಮಾಧ್ಯಮದವರು ಅದರ ಬಗ್ಗೆ ಪ್ರಶ್ನೆ ಬಗ್ಗೆ ಕೇಳಿದಾಗ ಅವರ ಮುಖ ಬಿಳಚಿಕೊಂಡಂತೆ ಕಂಡಿತು.
ಹಾವೇರಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಕ್ರಮವಾಗಿ ಸೈಟು ಪಡೆದಿರುವ ಅರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮೈಸೂರು ಲೋಕಾಯುಕ್ತ ಕಚೇರಿಯಿಂದ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿಯಾಗಿದೆ. ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕಿನ ಹುರಳಿಕುಪ್ಪಿಯಲ್ಲಿ ಚುನಾವಣಾ ಪ್ರಚಾರದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಿದ್ದರಾಮಯ್ಯ ತಾನು ವಿಚಾರಣೆಗೆ ಹಾಜರಾಗುವುದದಾಗಿ ತಿಳಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವಕ್ಫ್ ಆಸ್ತಿ ವಿವಾದ: ಸಿದ್ದರಾಮಯ್ಯಗೊಂದು ಕುಮಾರಸ್ವಾಮಿ ನೇರ ಸವಾಲ್
Published on: Nov 04, 2024 07:32 PM