AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಕ್ಫ್​ ಆಸ್ತಿ ವಿವಾದ: ಸಿದ್ದರಾಮಯ್ಯಗೊಂದು ಕುಮಾರಸ್ವಾಮಿ ನೇರ ಸವಾಲ್

ಅವರ ಅವಧಿಯಲ್ಲೂ ರೈತರಿಗೆ ನೋಟಿಸ್​ ಕೊಟ್ಟಿದ್ದರೆಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್​.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ನಿಮ್ಮ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದ್ದಾರೆ. ಒಂದು ವೇಳೆ ನನ್ನ ಕಾಲದಲ್ಲಿ ಈ ರೀತಿ ಆಗಿದ್ದರೆ ಕಾಂಗ್ರೆಸ್ ಕಾರಣ ಎಂದು ವಾಗ್ದಾಳಿ ಮಾಡಿದ್ದಾರೆ.

ವಕ್ಫ್​ ಆಸ್ತಿ ವಿವಾದ: ಸಿದ್ದರಾಮಯ್ಯಗೊಂದು ಕುಮಾರಸ್ವಾಮಿ ನೇರ ಸವಾಲ್
ವಜ್ಫ್​ ಆಸ್ತಿ ವಿವಾದ: ಸಿದ್ದರಾಮಯ್ಯಗೊಂದು ಕುಮಾರಸ್ವಾಮಿ ನೇರ ಸವಾಲ್
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ | Edited By: |

Updated on:Nov 04, 2024 | 6:19 PM

Share

ರಾಮನಗರ, ನವೆಂಬರ್​ 04: ವಕ್ಫ್​ ವಿಚಾರವಾಗಿ ನಾನು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ನೀವು ಮಾಡಿರುವ ತಪ್ಪನ್ನು ಬೇರೆಯವರ ಮೇಲೆ ಹೊರಿಸಬೇಡಿ. ನಿಮ್ಮ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಿ ಎಂದು ಸಿಎಂ ಸಿದ್ದರಾಯ್ಯಗೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಸವಾಲು ಹಾಕಿದ್ದಾರೆ. ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಮುಂದೆ ವಕ್ಫ್​​ ವಿಚಾರದ ಫೈಲ್ ಬಂದಿರಲಿಲ್ಲ ಎಂದಿದ್ದಾರೆ.

ಕೃಷ್ಣಭೈರೇಗೌಡ, ವಕ್ಫ್​ ಸಚಿವ ಜಮೀರ್ ಕಾರಣ ಎಂದ ಹೆಚ್​ಡಿ ಕುಮಾರಸ್ವಾಮಿ

ಒಂದು ವೇಳೆ ನನ್ನ ಕಾಲದಲ್ಲಿ ಈ ರೀತಿ ಆಗಿದ್ದರೆ ಕಾಂಗ್ರೆಸ್ ಕಾರಣ. ಕಂದಾಯ ಸಚಿವ ಕೃಷ್ಣಭೈರೇಗೌಡ, ವಕ್ಫ್​ ಸಚಿವ ಜಮೀರ್ ಕಾರಣ. ನನ್ನ ಗಮನಕ್ಕೆ ಬಾರದೆ ಅವರು ಮಾಡಿರಬಹುದು ಅಷ್ಟೇ. ಇಂತಹ ವಿಚಾರದಲ್ಲಿ ನಾನು ರಾಜಕೀಯ ಮಾಡಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಕ್ಫ್ ಆಸ್ತಿ ಕಾಪಾಡುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲೇ ಘೋಷಿಸಿತ್ತು: ಸಿಎಂ ವಾಗ್ದಾಳಿ

ಸತ್ಯ ಹರಿಶ್ಚಂದ್ರ, ಸತ್ಯಮೇವ ಜಯತೇ ಅಂತಾರೆ ಜವಾಬ್ದಾರಿಯಿಂದ ಮಾತಾಡಿ, ಕಾಂಗ್ರೆಸ್ ಸರ್ವನಾಶದ ಕಾಲ, ಈ ಬಗ್ಗೆ ಖರ್ಗೆ ಅವರೇ ಹೇಳಿದ್ದಾರೆ. ಇವರ ನಡವಳಿಕೆಯಿಂದ ಕಾಂಗ್ರೆಸ್ ಸರ್ವನಾಶ ಆಗುತ್ತೆ ಎಂದಿದ್ದಾರೆ.

ಜನರೇ ಕಾಂಗ್ರೆಸ್​ ನಾಯಕರ ಮನೆಗಳಿಗೆ ನುಗ್ಗುವ ಕಾಲ ಬರುತ್ತೆ ಎಂದು ಕಾಂಗ್ರೆಸ್ ಎಂಎಲ್​ಸಿ ಅಂದಿದ್ದರು. ಆದರೆ ಜನ ಬಾಂಗ್ಲಾದೇಶದ ಮಾದರಿ‌ ನಿಮ್ಮ ಮನೆಗಳಿಗೆ ನುಗ್ಗುತ್ತಾರೆ. ಜನ ನಿಮ್ಮ ಮನೆಗೆ ನುಗ್ಗುವ ಮುನ್ನ ನಿಮ್ಮ ತಪ್ಪನ್ನು ಸರಿಪಡಿಸಿಕೊಳ್ಳಿ ಎಂದು ವಾಗ್ದಾಳಿ ಮಾಡಿದ್ದಾರೆ.

ಡಿಕೆ ಶಿವಕುಮಾರ್​ ಹೇಳಿಕೆಗೆ H​.D.ಕುಮಾರಸ್ವಾಮಿ ತಿರುಗೇಟು

ಹೆಚ್​.ಡಿ.ಕುಮಾರಸ್ವಾಮಿ ಚನ್ನಪಟ್ಟಣ ಬಿಟ್ಟು ಹೋಗುವುದು ಒಳಿತು. ಕುಮಾರಸ್ವಾಮಿಯದ್ದು ಏನು ಸಾಕ್ಷಿ ಗುಡ್ಡೆ ಇದೆ ಎಂಬ ಡಿಸಿಎಂ ಡಿಕೆ ಶಿವಕುಮಾರ್​ ಹೇಳಿಕೆ ವಿಚಾರವಾಗಿ ಮಾತನಾಡಿದ್ದು, ಚನ್ನಪಟ್ಟಣದಿಂದ ಹೊರಗೆ ಹೋಗಬೇಕೆಂದು ಇವರು ಹೇಳುವುದಲ್ಲ. ಜನರು ತೀರ್ಮಾನ ಮಾಡಿ ಹೇಳಬೇಕು. ನೋಡೋಣ ಚನ್ನಪಟ್ಟಣ ಜನರು ಏನು ತೀರ್ಮಾನ ಮಾಡುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ: ವಕ್ಫ್​ ವಿವಾದ ಬೆನ್ನಲ್ಲೇ ರೈತರ ಪಹಣಿ ಸಿಗದಂತೆ ಸರ್ವರ್ ಡೌನ್: ಸರ್ಕಾರದ ವಿರುದ್ಧ ಯತ್ನಾಳ್​ ಆರೋಪ

ಡಿ.ಕೆ.ಶಿವಕುಮಾರ್​ ಮಾಡಿರುವ ಕೆಲಸದ ಸಾಕ್ಷಿ ಗುಡ್ಡೆ ಏನಿದೆ? ಆ ವ್ಯಕ್ತಿಗೆ ಸಾಕ್ಷಿ ಗುಡ್ಡೆ ಅರ್ಥ ಗೊತ್ತಿದೆಯಾ? ಕಲ್ಲು ಬಂಡೆಗಳನ್ನು ವಿದೇಶಕ್ಕೆ ಕಳುಹಿಸಿದ್ದು ಸಾಕ್ಷಿ ಗುಡ್ಡೆನಾ? ಪ್ರಾಕೃತಿಕ ಸಂಪತ್ತು ಹಾಳು ಮಾಡಿದ ರೀತಿ ಸಾಕ್ಷಿ ಗುಡ್ಡೆ ನೀಡಬೇಕಾಗಿತ್ತಾ? ಸಾಕ್ಷಿ ಗುಡ್ಡೆ ಏನು ಅಂತಾ ಸಿಪಿ ಯೋಗೇಶ್ವರ್​ ಕೇಳಿದರೆ ಹೇಳುತ್ತಾರೆ. ಅಣ್ಣ ತಮ್ಮಂದಿರು ಬಂದರೆ ಪೊರಕೆಯಲ್ಲಿ ಹೊಡೆಸ್ತಾರೆ ಅಂದಿದ್ದಾರೆ. ಇದಕ್ಕಿಂತ ಕಾಂಗ್ರೆಸ್​ ಪಕ್ಷದ ಅಭ್ಯರ್ಥಿಯ ಸಾಕ್ಷಿ ಗುಡ್ಡೆ ಬೇಕಾ? ಅವರಿಗೆ ಸಾತನೂರನ್ನು ತಾಲೂಕು ಕೇಂದ್ರ ಮಾಡಲು ಆಗಲಿಲ್ಲ. ನಮ್ಮ ಸಾಕ್ಷಿ ಗುಡ್ಡೆ ಜನರಿಗೆ ಕಾಣುತ್ತೆ, ಅವರ ಸಾಕ್ಷಿ ಗುಡ್ಡೆ ವಿದೇಶದಲ್ಲಿ ಕಾಣುತ್ತೆ ಎಂದು ಕಿಡಿಕಾರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:53 pm, Mon, 4 November 24

Follow Us
ಇಡಿ ವಿಚಾರಣೆಗೆ ಹಾಜರಾದ ಮಾಜಿ ಸಚಿವ ಬಿ. ನಾಗೇಂದ್ರ
ಇಡಿ ವಿಚಾರಣೆಗೆ ಹಾಜರಾದ ಮಾಜಿ ಸಚಿವ ಬಿ. ನಾಗೇಂದ್ರ
108 ಆ್ಯಂಬುಲೆನ್ಸ್ ನೌಕರರ ಪ್ರತಿಭಟನೆ: ಸಚಿವ ಖಾದರ್ ಖಡಕ್ ಎಚ್ಚರಿಕೆ
108 ಆ್ಯಂಬುಲೆನ್ಸ್ ನೌಕರರ ಪ್ರತಿಭಟನೆ: ಸಚಿವ ಖಾದರ್ ಖಡಕ್ ಎಚ್ಚರಿಕೆ
ಆಸ್ತಿಗಾಗಿ ತಂದೆಯ ಶವ ತಂದು ತಹಶೀಲ್ದಾರ್ ಕಚೇರಿ ಮುಂದೆ ಮಕ್ಕಳ ಪ್ರತಿಭಟನೆ
ಆಸ್ತಿಗಾಗಿ ತಂದೆಯ ಶವ ತಂದು ತಹಶೀಲ್ದಾರ್ ಕಚೇರಿ ಮುಂದೆ ಮಕ್ಕಳ ಪ್ರತಿಭಟನೆ
ಸರ್ಕಾರಿ ನಿವಾಸ ಖಾಲಿ ಮಾಡುವಂತೆ ಮಹದೇವಪ್ಪಗೆ ಸಚಿವ ಭೈರತಿ ಸುರೇಶ್​​ ಒತ್ತಡ?
ಸರ್ಕಾರಿ ನಿವಾಸ ಖಾಲಿ ಮಾಡುವಂತೆ ಮಹದೇವಪ್ಪಗೆ ಸಚಿವ ಭೈರತಿ ಸುರೇಶ್​​ ಒತ್ತಡ?
ಯುವತಿಗೆ ಮಗು ಕರುಣಿಸಿ ವಂಚಿಸಿದ್ದ ಯುವಕನಿಗೆ ಪೊಲೀಸರಿಂದಲೇ ಮದುವೆ
ಯುವತಿಗೆ ಮಗು ಕರುಣಿಸಿ ವಂಚಿಸಿದ್ದ ಯುವಕನಿಗೆ ಪೊಲೀಸರಿಂದಲೇ ಮದುವೆ
ಕೆಪಿಎಸ್​ಸಿ ಅಭ್ಯರ್ಥಿಗಳಿಗೆ ಡೀಲ್ ಮಾಡಿದ ಪ್ಲ್ಯಾನ್‌ ನೋಡಿ!
ಕೆಪಿಎಸ್​ಸಿ ಅಭ್ಯರ್ಥಿಗಳಿಗೆ ಡೀಲ್ ಮಾಡಿದ ಪ್ಲ್ಯಾನ್‌ ನೋಡಿ!
ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಏಕಾಂಗಿಯಾಗಿ ಶಾಸಕ ಶರಣಗೌಡ ಪ್ರತಿಭಟನೆ!
ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಏಕಾಂಗಿಯಾಗಿ ಶಾಸಕ ಶರಣಗೌಡ ಪ್ರತಿಭಟನೆ!
ಪ್ರಜಾ ಸೇವಾ ಆಂದೋಲನದಲ್ಲಿ ಕಾಂಗ್ರೆಸ್ ಶಾಸಕ ಎಚ್.ವಿ. ವೆಂಕಟೇಶ್ ದರ್ಪ!
ಪ್ರಜಾ ಸೇವಾ ಆಂದೋಲನದಲ್ಲಿ ಕಾಂಗ್ರೆಸ್ ಶಾಸಕ ಎಚ್.ವಿ. ವೆಂಕಟೇಶ್ ದರ್ಪ!
ನೈಸ್ ಟೋಲ್ ಸಿಬ್ಬಂದಿಗೆ ಕ್ಲಾಸ್ ತಗೊಂಡ ಯುವತಿ
ನೈಸ್ ಟೋಲ್ ಸಿಬ್ಬಂದಿಗೆ ಕ್ಲಾಸ್ ತಗೊಂಡ ಯುವತಿ
ಬೆಂಗಳೂರು: ಗಣೇಶೋತ್ಸವ ಸಂಭ್ರಮದಲ್ಲಿ ಇರುವವರಿಗೆ ಪೊಲೀಸರ ಶಾಕ್
ಬೆಂಗಳೂರು: ಗಣೇಶೋತ್ಸವ ಸಂಭ್ರಮದಲ್ಲಿ ಇರುವವರಿಗೆ ಪೊಲೀಸರ ಶಾಕ್