ಐಪಿಎಲ್ 18: ಪ್ರತಿ ಸಲ ಕಪ್ ನಮ್ದೇ ಎನ್ನುವ ಕನ್ನಡಿಗರಿಗೆ ರಜತ್ ಪಾಟೀದಾರ್ ಹಿಂದೆ ಸಾಧ್ಯವಾಗದ್ದನ್ನು ಸಾಧಿಸುತ್ತಾರೆಯೇ?

|

Updated on: Mar 12, 2025 | 11:42 AM

ಆರ್​ಸಿಬಿ ತಂಡಕ್ಕೆ ಈ ಬಾರಿ ರಜತ್ ಪಾಟೀದಾರ್ ನಾಯಕ. ವೇಗದ ಬೌಲರ್ ಜೋಷ್ ಹೇಜೆಲ್​ವುಡ್ ಗಾಯಗೊಂಡಿರುವುದು ದೊಡ್ಡ ಹೊಡೆತ. ಅವರು ಚಾಂಪಿಯನ್ ಬೌಲರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ, ಅವರು ಈ ಐಪಿಎಲ್ ಸೀಸನ್​ನ ಮೊದಲ ಲೆಗ್ ಆಡಲಾರರು. ಪ್ರತಿಸಲದಂತೆ ಈ ಬಾರಿಯೂ ತಂಡದ ಬೌಲಿಂಗ್ ವಿಭಾಗ ದುರ್ಬಲ ಅನಿಸುತ್ತಿದೆ, ಭುವನೇಶ್ವರ್ ಕುಮಾರ್ ಬೌಲಿಂಗ್​ನಲ್ಲಿ ಮೊದಲಿನ ಮೊನಚು ಇಲ್ಲ.

ಬೆಂಗಳೂರು, ಮಾರ್ಚ್ 12 : ಇಂಡಿಯನ್ ಪ್ರಿಮೀಯರ್ ಲೀಗ್​ನ (Indian Premier League) ಪ್ರತಿ ಸೀಸನ್ ಶುರುವಾಗುವಾಗ ಈ ಸಲ ಕಪ್ ನಮ್ದೇ ಅಂತ ಕನ್ನಡಿಗರ ಆಶಯದೊಂದಿಗೆ ಅಭಿಯಾನ ಆರಂಭಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 17 ನೇ ಸೀಸನ್​ವರೆಗೆ ನಿರಾಶೆಗೊಳಿಸಿದೆ. ವಿಶ್ವದ ಅಗ್ರಮಾನ್ಯ ಬ್ಯಾಟರ್ ವಿರಾಟ್ ಕೊಹ್ಲಿ ಆರ್​ಸಿಬಿಗೆ ಆಟಗಾರನಾಗಿ ಮತ್ತು ನಾಯಕನಾಗಿ ಆಡಿದಾಗ್ಯೂ ಕಪ್ ಸಿಕ್ಕಿಲ್ಲ! ಹೊಸ ಸೀಸನ್ ಒಂದೂವರೆ ವಾರದ ಅವಧಿಯಲ್ಲಿ ಶುರುವಾಗಲಿದೆ, ಹೇಗಿದೆ ತಂಡದ ತಯಾರಿ, ಯಾರು ಫಿಟ್ ಯಾರೆಲ್ಲ ಅನ್ಫಿಟ್? ಇಲ್ಲಿದೆ ವರದಿ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಅನುಷ್ಕಾ ಎಂದರೆ ವಿರಾಟ್​​ಗೆ ಬೆಟ್ಟದಷ್ಟು ಪ್ರೀತಿ; ಮ್ಯಾಚ್ ಗೆದ್ದ ಬಳಿಕ ಕೊಹ್ಲಿ ಏನು ಮಾಡಿದ್ರು ನೋಡಿ