ಸಂಪುಟ ವಿಸ್ತರಣೆ ಎಲ್ಲ ಶಾಸಕರ ಒತ್ತಾಸೆಯಾಗಿದೆ ಎಂದರು ಎಮ್ ಪಿ ರೇಣುಕಾಚಾರ್ಯ
ಸಂಪುಟದಲ್ಲಿ ಹೊಸಮುಖಗಳನ್ನು ಸೇರ್ಪಡೆ ಮಾಡುವುದು ಅತ್ಯವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಮಾಡಬೇಕೆಂದು ಶಾಸಕರು ಒತ್ತಾಯಿಸುತ್ತಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದರು.
Bengaluru: ಬಿಜೆಪಿ ವರಿಷ್ಠರು ಕರ್ನಾಟಕದಲ್ಲಿ ಸಂಪುಟ ವಿಸ್ತರಣೆ ಮಾಡಲು ಮೀನಮೇಷ ಎಣಿಸುತ್ತಿರುವುದು ಬಿಜೆಪಿ ಶಾಸಕರಲ್ಲಿ (BJP legislators) ಅದರಲ್ಲೂ ವಿಶೇಷವಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿರುವ ಎಂ ಪಿ ರೇಣುಕಾಚಾರ್ಯರಂಥವರಿಗೆ (MP Renukacharya) ತೀವ್ರ ಅಸಮಾಧಾನವನ್ನುಂಟು ಮಾಡಿದೆ. ಏತನ್ಮಧ್ಯೆ ಪಕ್ಷದ ಫೈರ್ ಬ್ರ್ಯಾಂಡ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಸಂಪುಟ ಪುನಾರಚನೆ ಬಗ್ಗೆ ವಿಜಯಪುರದಿಂದ ಪ್ರತಿದಿನ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಗುರುವಾರ ವಿಧಾನ ಸೌಧದ ಅವರಣದಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ರೇಣುಕಾಚಾರ್ಯ ಅವರು ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತು ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ರಾಷ್ಟ್ರೀಯ ನಾಯಕರ ನಡುವೆ ಚರ್ಚೆಗಳು ನಡೆಯುತ್ತಿವೆ. ಯತ್ನಾಳ್ ಅವರು ಏನು ಹೇಳಿದ್ದಾರೆ ಅಂತ ತನಗೆ ಗೊತ್ತಿಲ್ಲ. ಶಾಸಕರೆಲ್ಲ ಆದಷ್ಟು ಬೇಗ ಸಂಪುಟ ವಿಸ್ತರಣೆ ಆಗಬೇಕೆಂದು ಅನೇಕ ಸಲ ಒತ್ತಾಯಿಸಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದರು.
ಮುಂದಿನ ವಿಧಾ ಸಭೆಗೆ ಚುನಾವಣೆಗೆ 10-12 ತಿಂಗಳು ಮಾತ್ರ ಉಳಿದಿದೆ. ನಾಲ್ಕು ಖಾತೆಗಳು ಖಾಲಿಯಿದ್ದು ಅವುಗಳನ್ನು ಕೆಲ ಸಚಿವರು ಹೆಚ್ಚುವರಿ ಜವಾಬ್ದಾರಿಯಾಗಿ ನಿರ್ವಹಿಸುತ್ತಿದ್ದಾರೆ. ಸಂಪುಟದಲ್ಲಿ ಹೊಸಮುಖಗಳನ್ನು ಸೇರ್ಪಡೆ ಮಾಡುವುದು ಅತ್ಯವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಮಾಡಬೇಕೆಂದು ಶಾಸಕರು ಒತ್ತಾಯಿಸುತ್ತಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದರು.
ತಮ್ಮ ಕ್ಷೇತ್ರ ಹೊನ್ನಾಳಿಯಲ್ಲಿ ಇತ್ತೀಚಿಗೆ ಆಯೋಜಿಸಿದ ಸರ್ಕಾರೀ ಕಾರ್ಯಕ್ರಮಗಳ ಬಗ್ಗೆ ಮಾತಾಡಿದ ಶಾಸಕರು ಡಾ ಬಿಆರ್ ಅಂಬೇಡ್ಕರ್ ಜಯಂತಿ ಮತ್ತು ಬಸವ ಜಯಂತಿ ಕಾರ್ಯಕ್ರಮಗಳನ್ನು ಬಹಳ ಯಶಸ್ವೀಯಾಗಿ ಆಚರಿಸಲಾಯಿತು ಎಂದರು. ಅಂಬೇಡ್ಕರ್ ಜಯಂತಿಯಲ್ಲಿ ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಜಾತಿಗೆ ಸೇರಿದ 10-12 ಸಾವಿರ ಜನ ಸೇರಿದ್ದರು.
ಹಾಗೇಯೇ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 30 ಕ್ಕೂ ಹೆಚ್ಚು ಕಡೆಗಳಲ್ಲಿ ಬಸವ ಜಯಂತಿ ಅಚರಿಸಲಾಯಿತು ಎಂದು ಎಮ್ ಪಿ ರೇಣುಕಾಚಾರ್ಯ ಹೇಳಿದರು.
ಇದನ್ನೂ ಓದಿ: ಅಮಿತ್ ಶಾ ದೆಹಲಿ ಹೋದ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತಾಡುತ್ತೇವೆ ಎಂದಿದ್ದಾರೆ -ಸಿಎಂ ಬಸವರಾಜ ಬೊಮ್ಮಾಯಿ