ಸ್ವಾಮೀಜಿಗಳು ಇಲ್ಲದೇ ಹೋಗಿದ್ರೆ ಸಿಎಂ ಆಗ್ತಿದ್ರಾ ದೇವೇಗೌಡ್ರು? ಕುಮಾರಸ್ವಾಮಿಗೆ ಡಿಕೆ ಶಿವಕುಮಾರ್ ಟಾಂಗ್
ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯ ಜೊತೆ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕುಮಾರಸ್ವಾಮಿ ಸರ್ಕಾರ ಉಳಿಸಲು ನಿಷ್ಠೆಯಿಂದ ಪ್ರಯತ್ನಿಸಿದ್ದಾಗಿ ಹೇಳಿದ್ದಾರೆ. ಸ್ವಾಮೀಜಿಗಳ ಬೆಂಬಲದ ಕುರಿತು ಹೆಚ್‌ಡಿ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದ್ದು, ಸ್ವಾಮೀಜಿ ಇಲ್ಲದೆ ದೇವೇಗೌಡರು ಸಿಎಂ ಆಗ್ತಿದ್ರಾ? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು, ನವೆಂಬರ್ 30: ಡಿಸಿಎಂ ಡಿಕೆ ಶಿವಕುಮಾರ್ಗೆ ಒಕ್ಕಲಿಗ ಸ್ವಾಮೀಜಿಗಳ ಬೆಂಬಲ ಹಿನ್ನೆಲೆ ಸ್ವಾಮೀಜಿಗಳ ನಡೆಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆಕ್ಷೇಪಿಸಿದ್ದರು. ಸದ್ಯ ವಿಚಾರವಾಗಿ ನಗರದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಪಾಪ ಕುಮಾರಣ್ಣನಿಗೆ ಎರಡನೇ ಮಠ ಹೇಗಾಯ್ತು? ಸ್ವಾಮೀಜಿಗಳು ಇಲ್ಲದೇ ಹೋಗಿದ್ದರೆ ಸಿಎಂ ಆಗ್ತಿದ್ರಾ ದೇವೇಗೌಡ್ರು? ಅವತ್ತು ಸ್ವಾಮೀಜಿ ರಸ್ತೆಗಿಳಿಲಿಲ್ವಾ? ಡಿವಿಎಸ್ಗೆ ತೊಂದರೆಯಾದಾಗ ಸ್ವಾಮೀಜಿ ಸುಮ್ನೆ ಕುಳಿತಿದ್ರಾ? ಕೆಲವು ಸಂದರ್ಭದಲ್ಲಿ ಸ್ವಾಮೀಜಿಗಳು ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
