ಬಾಡಿಗಾರ್ಡ್ ಮೇಲೆ ಏಕಾಏಕಿ ಗರಂ ಆದ ಯಶ್; ಧರ್ಮಸ್ಥಳದಲ್ಲಿ ಅಂಥದ್ದೇನಾಯ್ತು?
ನಟ ಯಶ್ ಅವರು ಧರ್ಮಸ್ಥಳಕ್ಕೆ ಬಂದು ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಮಂಜುನಾಥ ಸ್ವಾಮಿಯ ಆಶೀರ್ವಾದ ಪಡೆದ ನಂತರ ಅವರರನ್ನು ನೋಡಲು ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಈ ವೇಳೆ ಸ್ವಲ್ಪ ನೂಕು ನುಗ್ಗಲು ಉಂಟಾಗಿದೆ. ಸೆಲ್ಫಿಗಾಗಿ ಮುಗಿಬೀಳುವ ಅಭಿಮಾನಿಗಳನ್ನು ನಿಭಾಯಿಸುವುದು ಸುಲಭವಲ್ಲ. ಧರ್ಮಸ್ಥಳದಲ್ಲೂ ಅದೇ ರೀತಿ ಆಗಿದೆ.
‘ರಾಕಿಂಗ್ ಸ್ಟಾರ್’ ಯಶ್ ಅವರು ಫ್ಯಾಮಿಲಿಗೆ ಹೆಚ್ಚು ಸಮಯ ನೀಡುತ್ತಾರೆ. ಇಂದು (ಆಗಸ್ಟ್ 6) ಅವರು ಕುಟುಂಬ ಸಮೇತರಾಗಿ ಧರ್ಮಸ್ಥಳಕ್ಕೆ ಬಂದಿದ್ದಾರೆ. ಮಂಜುನಾಥ ಸ್ವಾಮಿಯ ದರ್ಶನ ಪಡೆಯಲು ಆಗಮಿಸಿದ ಯಶ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ಅವರನ್ನು ಹತ್ತಿರದಿಂದ ನೋಡಬೇಕು, ಜೊತೆಗೊಂದು ಫೋಟೋ ತೆಗೆಸಿಕೊಳ್ಳಬೇಕು ಎಂಬುದು ಫ್ಯಾನ್ಸ್ ಆಸೆ. ಹಾಗಾಗಿ ಧರ್ಮಸ್ಥಳದಲ್ಲೂ ಯಶ್ ಜೊತೆ ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬಿದ್ದರು. ಈ ಸಂದರ್ಭದಲ್ಲಿ ಜನಜಂಗುಳಿ ನಿಭಾಯಿಸಲು ಕೆಲವರನ್ನು ಬಾಡಿಗಾರ್ಡ್ಸ್ ತಳ್ಳಿದರು. ಇದರಿಂದ ಯಶ್ ಅವರಿಗೆ ಸಡನ್ ಆಗಿ ಕೋಪ ಬಂತು. ಯಶ್ ಗರಂ ಆಗಿ ಪ್ರತಿಕ್ರಿಯಿಸಿದ ವಿಡಿಯೋ ಇಲ್ಲಿದೆ. ‘ಟಾಕ್ಸಿಕ್’ ಸಿನಿಮಾದ ಕೆಲಸಗಳಲ್ಲಿ ಯಶ್ ತೊಡಗಿಕೊಂಡಿದ್ದಾರೆ. ಅದರ ನಡುವೆ ಬಿಡುವು ಮಾಡಿಕೊಂಡು ಅವರು ದೇವಸ್ಥಾನಕ್ಕೆ ಬಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ

