‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿದ್ದರಾಮಯ್ಯ: ಝೈದ್ ಖಾನ್ ಹೇಳಿದ್ದಿಷ್ಟು..
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಾಗಿ ಬೆಂಗಳೂರಿನಲ್ಲಿ ‘ಕಲ್ಟ್’ ಚಿತ್ರದ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ಈ ಚಿತ್ರವನ್ನು ಸಿಎಂ ಸಿದ್ದರಾಮಯ್ಯ ಕೂಡ ನೋಡಿದ್ದಾರೆ. ಸಿನಿಮಾ ವೀಕ್ಷಿಸುವಾಗ ಮಗನನ್ನು ನೆನಪಿಸಿಕೊಂಡು ಸಿದ್ದರಾಮಯ್ಯ ಭಾವುಕರಾದರು. ಆ ಬಗ್ಗೆ ಝೈದ್ ಖಾನ್ ಮಾಹಿತಿ ನೀಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ..
ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗಾಗಿ ‘ಕಲ್ಟ್’ ಸಿನಿಮಾದ (Cult movie) ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಸಿನಿಮಾವನ್ನು ವೀಕ್ಷಿಸುವಾಗ ಮಗನನ್ನು ನೆನಪಿಸಿಕೊಂಡು ಸಿದ್ದರಾಮಯ್ಯ ಭಾವುಕರಾದರು. ಆ ಬಗ್ಗೆ ಝೈದ್ ಖಾನ್ (Zaid Khan) ಅವರು ಮಾಹಿತಿ ನೀಡಿದ್ದಾರೆ. ‘ಇವತ್ತು ಸಿದ್ದರಾಮಯ್ಯ ಸರ್ ನನ್ನ ಸಿನಿಮಾ ನೋಡಿದ್ದಕ್ಕೆ ಬಹಳ ಖುಷಿ ಆಗಿದೆ. ಅವರಿಗೆ ಸಿನಿಮಾ ನೋಡಲು ಕರೆಯಬೇಕೋ ಬೇಡವೋ ಅಂತ ಆಲೋಚನೆ ಇರಲಿಲ್ಲ. ಅವರೇ ನಮ್ಮ ತಂದೆಗೆ ಕರೆ ಮಾಡಿ ನಿಮ್ಮ ಮಗನ ಸಿನಿಮಾ ನೋಡಬೇಕು ಅಂದರು. ಹಂಪಿಯನ್ನು ಬಹಳ ಚೆನ್ನಾಗಿ ತೋರಿಸಿದ್ದರಿಂದ ಅವರಿಗೆ ಸಿನಿಮಾ ನೋಡಬೇಕು ಅನಿಸಿತ್ತು. ಅದಕ್ಕಾಗಿ ಅವರಿಗಾಗಿ ಶೋ ರೆಡಿ ಮಾಡಿದೆವು. ಅವರಿಗೆ ಈ ಸಿನಿಮಾ ಇಷ್ಟ ಆಗಿದೆ. ತುಂಬಾ ಹೊಗಳಿದರು. ಇದು ಫ್ಯಾಮಿಲಿ ಸಿನಿಮಾ. ತಂದೆ-ಮಗನ ಒಂದು ದೃಶ್ಯ ನೋಡುವಾಗ ಅವರು ಕಣ್ಣೀರು ಹಾಕಿದರು. ಮಗನ ನೆನಪು ಆಯಿತು ಎಂದರು. ಅದಕ್ಕಿಂತ ಇನ್ನೇನು ಬೇಕು’ ಎಂದು ಝೈದ್ ಖಾನ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಅನಂತ್ ನಾಗ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ: ಸಾರಾ ಗೋವಿಂದು ಪ್ರತಿಕ್ರಿಯೆ
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ: ಹಲವೆಡೆ ಎಂಟ್ರಿ-ಎಕ್ಸಿಟ್ ಕ್ಲೋಸ್
ನನ್ನ ಮಾತು ಎಷ್ಟು ನಡೆಯುತ್ತೆ? ಎಷ್ಟು ನಡೆಯಲ್ಲ ಅನ್ನೋದು ನನಗೆ ಗೊತ್ತು
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಸಂಪೂರ್ಣ ಸ್ಥಗಿತ, ರೈತರಲ್ಲಿ ಆತಂಕ

