AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Horoscope: ನಿಮ್ಮ ರಾಶಿಗನುಗುಣವಾಗಿ ಈ ವಾರದ ಭವಿಷ್ಯ ಇಲ್ಲಿ ತಿಳಿಯಿರಿ

Weekly Horoscope: ನಿಮ್ಮ ರಾಶಿಗನುಗುಣವಾಗಿ ಈ ವಾರದ ಭವಿಷ್ಯ ಇಲ್ಲಿ ತಿಳಿಯಿರಿ

ಅಕ್ಷತಾ ವರ್ಕಾಡಿ
|

Updated on: May 24, 2026 | 11:56 AM

Share

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 2026ರ ಮೇ 25 ರಿಂದ ಮೇ 31ರ ವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯವನ್ನು ನೀಡಿದ್ದಾರೆ. ಗ್ರಹಗಳ ಸಂಚಾರ, ಶುಭ-ಅಶುಭ ಫಲಗಳು, ಆರ್ಥಿಕ ಸ್ಥಿತಿ, ಆರೋಗ್ಯ, ವೃತ್ತಿ ಮತ್ತು ಪ್ರೀತಿ-ಪ್ರೇಮದ ಕುರಿತು ವಿವರಣೆ ನೀಡಿ, ಪ್ರತಿಯೊಂದು ರಾಶಿಯವರಿಗೆ ಸೂಕ್ತ ಪರಿಹಾರಗಳು ಮತ್ತು ಮಂತ್ರಗಳನ್ನು ಸಹ ತಿಳಿಸಿದ್ದಾರೆ.

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿಯವರು 2026ರ ಮೇ 25 ರಿಂದ ಮೇ 31ರ ವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯವನ್ನು ವಿವರಿಸಿದ್ದಾರೆ. ಈ ವಾರದಲ್ಲಿ ಗ್ರಹಗಳ ಸ್ಥಾನಗಳು ರಾಶಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಶನಿ ಗ್ರಹ ಮೀನ ರಾಶಿಯಲ್ಲಿ, ಕುಜ ಮೇಷ ರಾಶಿಯಲ್ಲಿ, ರವಿ ವೃಷಭ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದು, ಗುರು, ಶುಕ್ರ ಮತ್ತು ಬುಧ ಗ್ರಹಗಳು ಮಿಥುನ ರಾಶಿಯಲ್ಲಿ ಸಂಚರಿಸಲಿವೆ. ಮೇ 29 ರಂದು ಬುಧ ಗ್ರಹ ವೃಷಭ ರಾಶಿಯಿಂದ ಮಿಥುನ ರಾಶಿಗೆ ಪ್ರವೇಶಿಸಲಿದೆ.

ಈ ವಾರದಲ್ಲಿ ಕೊಕ್ಕಡ ಪುತ್ತಿಗೆ ವರ್ದಂತಿ, ಸರ್ವತ್ರ ಏಕಾದಶಿ, ಸೌರ ನರಸಿಂಹ ಜಯಂತಿ ಮತ್ತು ಪ್ರದೋಷದಂತಹ ಶುಭ ದಿನಗಳು ಇವೆ. ಪ್ರತಿಯೊಂದು ರಾಶಿಯವರಿಗೆ ಆರ್ಥಿಕ ಸ್ಥಿತಿ, ಉದ್ಯೋಗ, ಆರೋಗ್ಯ, ಸಂಬಂಧಗಳು ಮತ್ತು ಪ್ರಯಾಣದ ಯೋಗಗಳ ಬಗ್ಗೆ ಸೂಕ್ತ ಸಲಹೆಗಳನ್ನು ಡಾ. ಬಸವರಾಜ ಗುರೂಜಿ ನೀಡಿದ್ದಾರೆ. ಅಲ್ಲದೆ, ಪ್ರತಿಯೊಂದು ರಾಶಿಯವರಿಗೆ ನಿರ್ದಿಷ್ಟ ದೇವಸ್ಥಾನಗಳಿಗೆ ಭೇಟಿ, ದಾನ, ಮಂತ್ರ ಜಪ ಮತ್ತು ಅದೃಷ್ಟ ಸಂಖ್ಯೆ, ದಿಕ್ಕು, ಬಣ್ಣಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಈ ವಾರದಲ್ಲಿ ಜನ್ಮದಿನ ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವವರಿಗೆ ಗುರೂಜಿ ಶುಭ ಹಾರೈಕೆಗಳನ್ನು ಸಲ್ಲಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More