
ಜಿಝಾನ್: ಸೌದಿ ಅರೇಬಿಯಾದ ಜಿಝಾನ್ ನಗರದ ಕಿಂಗ್ ಅಬ್ದುಲ್ಲಾ ವಿಮಾನ ನಿಲ್ದಾಣದಲ್ಲಿ ಸ್ಫೋಟಕಗಳನ್ನು ತುಂಬಿದ ಡ್ರೋನ್ ದಾಳಿ ನಡೆಸಲಾಗಿದೆ. ಈ ಘಟನೆಯಲ್ಲಿ 10 ಜನರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ 6 ಜನರು ಸೌದಿ ಅರೇಬಿಯಾ ಪ್ರಜೆಗಳಾಗಿದ್ದು, ಮೂವರು ಬಾಂಗ್ಲಾದೇಶದವಾಗಿದ್ದಾರೆ. ಇನ್ನೊಬ್ಬರು ಸುಡಾನ್ ಪ್ರಜೆಯಾಗಿದ್ದಾರೆ.
ಇಂದು ಮುಂಜಾನೆ ಸೌದಿ ಏರ್ಪೋರ್ಟ್ನಲ್ಲಿ ಡ್ರೋನ್ ದಾಳಿ ನಡೆದಿದ್ದು, ಸ್ಫೋಟದ ತೀವ್ರತೆಗೆ ಕಿಂಗ್ ಅಬ್ದುಲ್ಲಾ ವಿಮಾನ ನಿಲ್ದಾಣದ ಕಿಟಕಿಗಳು ಛಿದ್ರವಾಗಿವೆ. ದಾಳಿ ನಡೆಸಿದ ಹೌತಿ ಬಂಡಾಯಕಾರರು ಗಲ್ಫ್ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಈ ರೀತಿ ಆಗಾಗ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸುತ್ತಿರುತ್ತಾರೆ ಎಂದು ಸೌದಿ ಅರೇಬಿಯಾದ ವಕ್ತಾರರು ತಿಳಿಸಿದ್ದಾರೆ.
ಈ ದಾಳಿಯಿಂದ ಹೆಚ್ಚೇನೂ ಅಪಾಯಗಳು, ಹಾನಿ ಆಗಿಲ್ಲ. ವಿಮಾನ ನಿಲ್ದಾಣದ ಕೆಲವು ಕಿಟಕಿಗಳ ಗಾಜುಗಳು ಒಡೆದು ಹೋಗಿವೆ. ಕೆಲವು ವಸ್ತುಗಳು ಛಿದ್ರವಾಗಿವೆ. ಯೆಮೆನಿ ಗಡಿಯಿಂದ 6 ಕಿ.ಮೀ ದೂರದಲ್ಲಿರುವ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಹೌತಿ ಉಗ್ರರು ಸೌದಿಯಲ್ಲಿ ನಡೆಸಿರುವ ಡ್ರೋನ್ ದಾಳಿಯನ್ನು ಪಾಕಿಸ್ತಾನ ಬಲವಾಗಿ ಖಂಡಿಸಿದೆ.
ಇದನ್ನೂ ಓದಿ: Pakistan Earthquake: ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪ; 20 ಜನ ಸಾವು, 200ಕ್ಕೂ ಹೆಚ್ಚು ಮಂದಿಗೆ ಗಾಯ