ಕಾರ್ಬನ್ ಮಾನಾಕ್ಸೈಡ್ ವಿಷದಿಂದಾಗಿ ಜಾರ್ಜಿಯಾದ ರೆಸಾರ್ಟ್‌ನಲ್ಲಿ 11 ಭಾರತೀಯರ ಸಾವು
ಜಾರ್ಜಿಯಾದ ಗುಡೌರಿ ಮೌಂಟೇನ್ ರೆಸ್ಟೋರೆಂಟ್‌ನಲ್ಲಿ ಕಾರ್ಬನ್ ಮಾನಾಕ್ಸೈಡ್ ವಿಷದಿಂದ 12 ಜನರು ದುರಂತವಾಗಿ ಸಾವನ್ನಪ್ಪಿದ್ದಾರೆ. ಈ 12 ಜನರಲ್ಲಿ 11 ಮಂದಿ ಭಾರತದ ಪಂಜಾಬ್ನವರು ಎಂದು ಮೂಲಗಳು ತಿಳಿಸಿವೆ. ಜಾರ್ಜಿಯಾದ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಟಿಬಿಲಿಸಿಯಲ್ಲಿನ ಭಾರತೀಯ ಮಿಷನ್ ಮೃತಪಟ್ಟವರ ಕುಟುಂಬಗಳಿಗೆ ನೆರವು ನೀಡುತ್ತಿದೆ. ಮೂಲಗಳ ಪ್ರಕಾರ, ಕಾರ್ಬನ್ ಮಾನಾಕ್ಸೈಡ್ ವಿಷ ಸೇವನೆಯಿಂದ ಅವರೆಲ್ಲರೂ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ನವದೆಹಲಿ: ಜಾರ್ಜಿಯಾದ ಮೌಂಟೇನ್ ರೆಸಾರ್ಟ್‌ನಲ್ಲಿ ಭಾರತದ 11 ಜನರು ಸೇರಿದಂತೆ ಒಟ್ಟು 12 ಮಂದಿಯ ಶವಗಳು ಪತ್ತೆಯಾಗಿವೆ. ಗುಡೌರಿಯ ರೆಸ್ಟೋರೆಂಟ್‌ನ ಎರಡನೇ ಮಹಡಿಯಲ್ಲಿನ ಮಲಗುವ ಕೋಣೆಗಳಲ್ಲಿ 12 ಶವಗಳು ಪತ್ತೆಯಾಗಿವೆ ಎಂದು ದೃಢಪಡಿಸಿದೆ. ಮೃತಪಟ್ಟವರೆಲ್ಲರೂ ಅದೇ ಭಾರತೀಯ ರೆಸ್ಟೋರೆಂಟ್‌ನ ಉದ್ಯೋಗಿಗಳು. ಕಾರ್ಬನ್ ಮಾನಾಕ್ಸೈಡ್ ವಿಷದಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇದು ಮಲಗುವ ಕೋಣೆಗಳ ಬಳಿ ಮುಚ್ಚಿದ ಜಾಗದಲ್ಲಿ ವಿದ್ಯುತ್ ಜನರೇಟರ್ ಇದ್ದುದರಿಂದ ಉಂಟಾಗಿರಬಹುದು. ಶುಕ್ರವಾರ ರಾತ್ರಿ ವಿದ್ಯುತ್ ಸಂಪರ್ಕ ಕಡಿತಗೊಂಡ ನಂತರ ಜನರೇಟರ್ ಆನ್ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಗಳು ಹೇಳಿವೆ.
ಗುಡೌರಿಯ ಮೌಂಟೇನ್ ರೆಸಾರ್ಟ್‌ನಲ್ಲಿರುವ ರೆಸ್ಟಾರೆಂಟ್‌ನಲ್ಲಿ ಶವವಾಗಿ ಪತ್ತೆಯಾದ 12 ಜನರಲ್ಲಿ 11 ಭಾರತೀಯ ಪ್ರಜೆಗಳು ಸೇರಿದ್ದಾರೆ ಎಂದು ಜಾರ್ಜಿಯಾದಲ್ಲಿನ ಭಾರತೀಯ ಮಿಷನ್ ದೃಢಪಡಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಕಾರ್ಬನ್ ಮಾನಾಕ್ಸೈಡ್ ವಿಷದಿಂದ ಸಾವು ಸಂಭವಿಸಿರಬಹುದು ಎನ್ನಲಾಗಿದೆ. ಆರಂಭಿಕ ತಪಾಸಣೆಯಲ್ಲಿ ಯಾವುದೇ ಗಾಯಗಳು ಅಥವಾ ಹಿಂಸಾಚಾರದ ಚಿಹ್ನೆಗಳು ಪತ್ತೆಯಾಗಿಲ್ಲ ಎಂದು ಜಾರ್ಜಿಯಾದ ಆಂತರಿಕ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಜಸ್ಟಿನ್ ಟ್ರುಡೊಗೆ ದೊಡ್ಡ ಹೊಡೆತ; ಕೆನಡಾ ಉಪ ಪ್ರಧಾನಿ ರಾಜೀನಾಮೆ
ಪೊಲೀಸರು ಜಾರ್ಜಿಯಾದ ಕ್ರಿಮಿನಲ್ ಕೋಡ್‌ನ ಆರ್ಟಿಕಲ್ 116ರ ಅಡಿಯಲ್ಲಿ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಇದು ನಿರ್ಲಕ್ಷ್ಯದ ನರಹತ್ಯೆಯನ್ನು ಒಳಗೊಂಡಿದೆ. ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಫೋರೆನ್ಸಿಕ್ ವೈದ್ಯಕೀಯ ಪರೀಕ್ಷೆಗೆ ಆದೇಶಿಸಲಾಗಿದೆ. ತನಿಖೆಗಳು ನಡೆಯುತ್ತಿವೆ.
Embassy of India in Georgia issues a statement on the death of 11 Indian Nationals in Gudauri, Georgia. pic.twitter.com/iuUZuPADEu
— ANI (@ANI) December 16, 2024
ಗುಡೌರಿಯಲ್ಲಿ 11 ಭಾರತೀಯ ಪ್ರಜೆಗಳು ದುರದೃಷ್ಟಕರವಾಗಿ ನಿಧನರಾದ ಬಗ್ಗೆ ತಿಳಿದು ದುಃಖವಾಯಿತು. ಅವರ ಕುಟುಂಬಗಳಿಗೆ ತನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸಿದೆ ಎಂದು ಟಿಬಿಲಿಸಿಯಲ್ಲಿರುವ ಭಾರತೀಯ ಮಿಷನ್ ಹೇಳಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ