ತಮಾಷೆಗಾಗಿ ಸೂಪರ್ ಮಾರ್ಕೆಟ್‌ನಲ್ಲಿ ಕೂಲ್ ಡ್ರಿಂಕ್ಸ್ಗೆ ಮೂತ್ರ ಹಾಕಿ ಮಾರಾಟ!
ತಾನು ಸೂಪರ್ ಮಾರ್ಕೆಟ್‌ನಲ್ಲಿ ಮೂತ್ರ ಮಿಶ್ರಿತ ತಂಪು ಪಾನೀಯಗಳನ್ನು ಇರಿಸಿದ್ದಾಗಿ 63 ವರ್ಷದ ವ್ಯಕ್ತಿ ಹಾಂಗ್ ಕಾಂಗ್ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ. ಫ್ರಾಂಕ್ಲಿನ್ ಲೋ ಕಿಂಗೈ ಎಂಬ ವ್ಯಕ್ತಿ ಕೋಕಾ-ಕೋಲಾ ಪ್ಲಸ್ ಮತ್ತು 7-ಅಪ್ ಬಾಟಲಿಗಳಲ್ಲಿ ಮೂತ್ರ ಹಾಕಿಟ್ಟು ವೆಲ್‌ಕಮ್ ಮತ್ತು ಪಾರ್ಕ್ನ್‌ಶಾಪ್ ಔಟ್‌ಲೆಟ್‌ಗಳಲ್ಲಿ ಇತರ ವಸ್ತುಗಳ ಜೊತೆಗೆ ಇಟ್ಟಿದ್ದಾಗಿ ಒಪ್ಪಿಕೊಂಡಿದ್ದಾರೆ.

ನವದೆಹಲಿ, ಜನವರಿ 28: ತಾನು ಕೆಲಸ ಮಾಡುವ ಸೂಪರ್ ಮಾರ್ಕೆಟ್‌ನಲ್ಲಿ ತಂಪು ಪಾನೀಯಗಳಿಗೆ ಮೂತ್ರ ಹಾಕಿ ಮಾರಾಟ ಮಾಡುತ್ತಿದ್ದ ಪ್ರಕರಣವೊಂದು ಹಾಂಗ್ಕಾಂಗ್ನಲ್ಲಿ (Hong Kong) ನಡೆದಿದೆ. 63 ವರ್ಷದ ಮಾಜಿ ಆಸ್ತಿ ಏಜೆಂಟ್ ಹಾಂಗ್ ಕಾಂಗ್ ನ್ಯಾಯಾಲಯದಲ್ಲಿ ಕಲುಷಿತ ತಂಪು ಪಾನೀಯಗಳನ್ನು ಮಾರಾಟ ಮಾಡುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾನೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಆ ವ್ಯಕ್ತಿ ಸೂಪರ್ ಮಾರ್ಕೆಟ್ ಗಳಲ್ಲಿ ಮೂತ್ರ ಹಾಕಿದ ತಂಪು ಪಾನೀಯಗಳ ಬಾಟಲಿಗಳನ್ನು ಇಟ್ಟಿದ್ದ ಎಂದು ವರದಿ ತಿಳಿಸಿದೆ.
1 ವರ್ಷಕ್ಕೂ ಹೆಚ್ಚು ಕಾಲ ಆತ ಈ ರೀತಿ ಸೂಪರ್ ಮಾರ್ಕೆಟ್ಗಳಲ್ಲಿ ಇತರ ವಸ್ತುಗಳ ಜೊತೆಗೆ ಮೂತ್ರ ಹಾಕಿದ ತಂಪು ಪಾನೀಯಗಳನ್ನು ಇರಿಸಿದ್ದ. ಈ ವಿಷಯ ಬಯಲಾಗುತ್ತಿದ್ದಂತೆ ಆತನ ವಿರುದ್ಧ ಕೇಸ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಆ ವ್ಯಕ್ತಿ ಹಾಂಗ್ ಕಾಂಗ್ ನ್ಯಾಯಾಲಯದ ಮುಂದೆ ಹಾಜರಾಗಿದ್ದು, ತನ್ನ ನಿವೃತ್ತಿ ಮತ್ತು ವಿಚ್ಛೇದನದ ಖಿನ್ನತೆಯಿಂದಾಗಿ ಈ ರೀತಿ ಮಾಡಿದ್ದಾಗಿ ತಿಳಿಸಿದ್ದಾನೆ.
ಇದನ್ನೂ ಓದಿ: ಹಿಮಪಾತದಿಂದ ಯಜಮಾನ ಸತ್ತರೂ 3 ದಿನ ಹೆಣದ ಬಳಿಯೇ ನಿಂತು ಕಾದ ಸಾಕುನಾಯಿ!
ಫ್ರಾಂಕ್ಲಿನ್ ಲೋ ಕಿಂಗೈ ಎಂಬ ವ್ಯಕ್ತಿ ಸೂಪರ್ ಮಾರ್ಕೆಟ್ ಸಿಬ್ಬಂದಿಯ ಬಗ್ಗೆ ಅತೃಪ್ತಿ ಹೊಂದಿದ್ದ. ನಂತರ ಮೂತ್ರ ಹಾಕಿದ ಬಾಟಲಿಗಳನ್ನು ಇಡಲು ಪ್ರಾರಂಭಿಸಿದನು. ಅವರು ಕೋಕಾ-ಕೋಲಾ ಪ್ಲಸ್ ಮತ್ತು 7-ಅಪ್ ಪಾನೀಯಗಳಿಗೆ ಮೂತ್ರವನ್ನು ಸೇರಿಸಿ ವೆಲ್ಕಮ್ ಮತ್ತು ಪಾರ್ಕ್ನ್‌ಶಾಪ್ ಔಟ್‌ಲೆಟ್‌ಗಳಲ್ಲಿ ಇರಿಸಿದರು. ಈ ಘಟನೆ 2024ರ ಜುಲೈ 21 ಮತ್ತು ಕಳೆದ ವರ್ಷ ಆಗಸ್ಟ್ 6ರ ನಡುವೆ ನಡೆದಿದೆ.
ತಮ್ಮ ತಪ್ಪನ್ನು ಅವರು ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದಾರೆ. ಆ ವ್ಯಕ್ತಿ ಮಾಡಿದ ಅಪರಾಧಕ್ಕೆ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಆ ವ್ಯಕ್ತಿ ವಿಚ್ಛೇದನದ ನಂತರ ಖಿನ್ನತೆಗೆ ಒಳಗಾಗಿದ್ದರು. ಅವರಿಗೆ ಯಾವುದೇ ಭಾವನಾತ್ಮಕ ಬೆಂಬಲ ಇರಲಿಲ್ಲ. ಅವರ ಮಾಜಿ ಪತ್ನಿ ಮತ್ತು ಮಗ ವಿದೇಶಕ್ಕೆ ಸ್ಥಳಾಂತರಗೊಂಡಿದ್ದರು. ಅವರಿಬ್ಬರ ಜೊತೆ ಆ ವ್ಯಕ್ತಿಗೆ ಯಾವುದೇ ಸಂಪರ್ಕವೂ ಇರಲಿಲ್ಲ. ಅವರು ತಮ್ಮ ಪೋಷಕರನ್ನು ಸಹ ಕಳೆದುಕೊಂಡಿದ್ದರು. ಅಲ್ಲದೆ, ಶಾಪ್ನ ಸಿಬ್ಬಂದಿಯ ಬಗ್ಗೆಯೂ ಅವರು ಅತೃಪ್ತಿ ಹೊಂದಿದ್ದರು. ಹೀಗಾಗಿ, ಖಿನ್ನತೆಯಿಂದ ಬಳಲುತ್ತಿದ್ದ ಅವರು ಈ ಕೃತ್ಯ ಎಸಗಿದ್ದಾರೆ ಎಂದು ಅವರ ಪರ ವಕೀಲರು ಕೋರ್ಟ್ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಮೋದಿ ಜತೆಗಿನ ಒಂದೇ ಒಂದು ಮಾತು: ಪಾಕ್ನ ಮಹತ್ವ ಯೋಜನೆ ಭಾರತಕ್ಕೆ ತಂದ ಯುಎಇ
ಹಲವಾರು ವೆಲ್‌ಕಮ್ ಮತ್ತು ಪಾರ್ಕ್‌ಶಾಪ್ ಔಟ್‌ಲೆಟ್‌ಗಳಲ್ಲಿ ಮೂತ್ರ ಹಾಕಿದ ತಂಪು ಪಾನೀಯಗಳ ಬಗ್ಗೆ ಹಲವಾರು ವರದಿಗಳು ಬಂದ ನಂತರ ಜನರಿಗೆ ಅದರ ಬಗ್ಗೆ ತಿಳಿದುಬಂದಿತು. ಜುಲೈ 2025ರಲ್ಲಿ ಮಾಂಗ್ ಕೋಕ್‌ನ ಯೂನಿಯನ್ ಪಾರ್ಕ್ ಸೆಂಟರ್‌ನಲ್ಲಿರುವ ವೆಲ್‌ಕಮ್ ಶಾಖೆಯಿಂದ ಮೂತ್ರ ಮಿಶ್ರಿತ ತಂಪು ಪಾನೀಯಗಳ ಬಾಟಲಿಯ ಕೂಲ್ ಡ್ರಿಂಕ್ಸ್ ಸೇವಿಸಿದ ನಂತರ 9 ವರ್ಷದ ಬಾಲಕನೊಬ್ಬ ಅಸ್ವಸ್ಥನಾಗಿದ್ದ. ಅವನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆತ ಚೇತರಿಸಿಕೊಂಡ. ಆದರೆ, ಆ ಘಟನೆಯ ಬಳಿಕ ಈ ಸುದ್ದಿ ಹೆಚ್ಚು ಪ್ರಚಲಿತಕ್ಕೆ ಬಂದಿತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
