AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಗೆ ಆ ಕಾಯಿಲೆ ಇಲ್ಲ ಎನ್ನುತ್ತಾ ಆಲ್ಝೈಮರ್ ಹೆಸರನ್ನೇ ಮರೆತ ಟ್ರಂಪ್

ಡೊನಾಲ್ಡ್ ಟ್ರಂಪ್ ತಮ್ಮ ತಂದೆಯ ಆಲ್ಝೈಮರ್ ಕಾಯಿಲೆ ಬಗ್ಗೆ ಮಾತನಾಡುತ್ತಾ ಅದರ ಹೆಸರನ್ನೇ ಮರೆತ ಘಟನೆ ನಡೆಯಿತು. ತನಗೆ ಈ ಕಾಯಿಲೆ ಇಲ್ಲ ಎಂದು ಅವರು ದೃಢಪಡಿಸಿದರು. ಈ ಲೇಖನದಲ್ಲಿ, ವಯಸ್ಕರಲ್ಲಿ ಕಾಣಿಸಿಕೊಳ್ಳುವ ಮರೆವಿನ ಕಾಯಿಲೆ ಆಲ್ಝೈಮರ್‌ನ ಲಕ್ಷಣಗಳು, ಕಾರಣಗಳು ಮತ್ತು ಅದು ದೈನಂದಿನ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ವಿವರವಾದ ಮಾಹಿತಿಯನ್ನು ನೀಡಲಾಗಿದೆ.

ತಮಗೆ ಆ ಕಾಯಿಲೆ ಇಲ್ಲ ಎನ್ನುತ್ತಾ ಆಲ್ಝೈಮರ್ ಹೆಸರನ್ನೇ ಮರೆತ ಟ್ರಂಪ್
ಡೊನಾಲ್ಡ್​ ಟ್ರಂಪ್Image Credit source: Rising Kashmir
ನಯನಾ ರಾಜೀವ್
|

Updated on: Jan 28, 2026 | 9:50 AM

Share

ವಾಷಿಂಗ್ಟನ್, ಜನವರಿ 28: ನನಗಂತೂ ಆ ಕಾಯಿಲೆ ಇಲ್ಲ ಎನ್ನುತ್ತಾ ‘ಆಲ್ಝೈಮರ್’ ಹೆಸರನ್ನೇ ಡೊನಾಲ್ಡ್​ ಟ್ರಂಪ್(Donald Trump) ಮರೆತ ಘಟನೆ ನಡೆದಿದೆ. ನ್ಯೂಯಾರ್ಕ್​ನ ಮ್ಯಾಗಜೀನ್​ಗೆ ನೀಡಿದ್ದ ಸಂದರ್ಶನವೊಂದರಲ್ಲಿ ಟ್ರಂಪ್ ತಮ್ಮ ತಂದೆಗೆ ಇದ್ದ ರೋಗ ಆಲ್ಝೈಮರ್ ಬಗ್ಗೆ ಚರ್ಚಿಸುತ್ತಿದ್ದರು. ಆ ವೇಳೆ ತನಗೆ ಆ ಕಾಯಿಲೆ ಇಲ್ಲ ಎಂದು ಹೇಳಿಕೊಂಡರು. ಆದರೆ ಕೊನೆವರೆಗೂ ಅದ್ಯಾವ ಕಾಯಿಲೆ ಎಂದು ಹೇಳಲು ಅವರಿಗೆ ಸಾಧ್ಯವಾಗಲಿಲ್ಲ. ಅದಕ್ಕೂ ಸ್ವಲ್ಪ ಮುನ್ನ ಟ್ರಂಪ್ ದಾವೋಸ್‌ನಲ್ಲಿ ಮಾಡಿದ ಭಾಷಣದ ಸಮಯದಲ್ಲಿ ಗ್ರೀನ್‌ಲ್ಯಾಂಡ್ ಅನ್ನು ಐಲ್ಯಾಂಡ್​ನೊಂದಿಗೆ ಸೇರಿಸಿದ್ದ ಘಟನೆಯೂ ನಡೆದಿತ್ತು.

ಆಲ್ಝೈಮರ್ ಎಂಬ ಪದವನ್ನು ನೆನಪಿಸಿಕೊಳ್ಳಲು ಕಷ್ಟಪಡುತ್ತಿದ್ದರು, ಆದರೂ ಅವರು ಸ್ಮರಣಶಕ್ತಿ ಮತ್ತು ಚಿಂತನಾ ಕೌಶಲ್ಯವನ್ನು ನಾಶಪಡಿಸುವ ನರವೈಜ್ಞಾನಿಕ ಕಾಯಿಲೆಯ ಬಗ್ಗೆ ಚಿಂತಿಸುತ್ತಿಲ್ಲ ಎಂದು ಹೇಳಿದರು. ಟ್ರಂಪ್ ತಮ್ಮ ತಂದೆ ಫ್ರೆಡ್ ಟ್ರಂಪ್ ಅವರ ಅನಾರೋಗ್ಯದ ಬಗ್ಗೆ ಉಲ್ಲೇಖಿಸುತ್ತಾ ಆಲ್ಝೈಮರ್ ಎಂಬ ಪದವನ್ನು ನೆನಪಿಸಿಕೊಳ್ಳಲು ಹೆಣಗಾಡಿದರು.

ಅಷ್ಟೇ ಅಲ್ಲದೆ ತಾನು ಆ ಕಾಯಿಲೆಯನ್ನು ಹೊಂದಿಲ್ಲ ತಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ ಎಂದು ಒತ್ತಿ ಹೇಳಿದರು. ತನ್ನ ತಂದೆಗೂ ಆಲ್ಝೈಮರ್ ಬಿಟ್ಟು ಬೇರೆ ಯಾವ ಕಾಯಿಲೆಯೂ ಇರಲಿಲ್ಲ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: ತಾನೊಬ್ಬ ಸರ್ವಾಧಿಕಾರಿ ಎಂದು ಒಪ್ಪಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್

ಸುಮಾರು 86, 87 ವರ್ಷ ವಯಸ್ಸಿನಲ್ಲಿ ಅವರಿಗೊಂದು ಸಮಸ್ಯೆ ಕಾಣಿಸಿಕೊಂಡಿತ್ತು, ಅದಕ್ಕೇನೆಂದು ಕರೀತಾರೆ ಎಂದು ಟ್ರಂಪ್ ತಲೆ ಕೆಡಿಸಿಕೊಂಡು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಕಡೆಗೆ ನೋಡುತ್ತಾ ಕೇಳಿದ್ದಾರೆ ಅದಕ್ಕೆ ಲೀವಿಟ್ ಆಲ್ಝೈಮರ್ ಎಂದು ಉತ್ತರಿಸಿದರು.ಅದು ನನಗೆ ಇಲ್ಲ ಎಂದು ಟ್ರಂಪ್ ಉತ್ತರಿಸಿದ್ದಾರೆ.

ನ್ಯೂಯಾರ್ಕ್‌ನ ಪ್ರಮುಖ ರಿಯಲ್ ಎಸ್ಟೇಟ್ ಡೆವಲಪರ್ ಫ್ರೆಡ್ ಟ್ರಂಪ್ ಅವರಿಗೆ 1990 ರ ದಶಕದ ಆರಂಭದಲ್ಲಿ ಆಲ್ಝೈಮರ್ ಕಾಯಿಲೆ ಇರುವುದು ಪತ್ತೆಯಾಯಿತು ಮತ್ತು ಹಲವಾರು ವರ್ಷಗಳ ಕಾಲ ಈ ಸ್ಥಿತಿಯೊಂದಿಗೆ ಬದುಕಿದ್ದರು ಮತ್ತು 1999 ರಲ್ಲಿ 93 ನೇ ವಯಸ್ಸಿನಲ್ಲಿ ನಿಧನರಾದರು.

ವಯಸ್ಸು ಹೆಚ್ಚುತ್ತಿದ್ದಂತೆ ಮರೆವು ಹೆಚ್ಚುತ್ತಲೇ ಹೋಗುತ್ತದೆ. ಅದು ಅತಿಯಾದರೆ ಜೀವನ ದುಸ್ತರವಾಗುತ್ತದೆ. ವಯಸ್ಕರಲ್ಲಿ ಕಂಡುಬರುವ ಮರೆವಿನ ಕಾಯಿಲೆಯೇ ಅಲ್ಜೈಮರ್‌ . ಕೊನೆಗಾಲದಲ್ಲಿ ಕಾಡುವ ದೀರ್ಘಕಾಲೀನ ಸಮಸ್ಯೆ ಇದು. ಸ್ಮರಣಶಕ್ತಿ, ಬುದ್ಧಿಶಕ್ತಿ, ಕಲಿಕೆ, ಕ್ರಿಯಾಶೀಲತೆ,ಭಾಷಾ ಸಾಮರ್ಥ್ಯ‌,ಗ್ರಹಿಕೆ ಹಾಗೂ ಕ್ಷೀಣಿಸಿದ ನಿರ್ಧಾರ,ವಿವೇಚನ ಶಕ್ತಿ ಭಾವನೆ ಮತ್ತು ನಡವಳಿಕೆಯಲ್ಲಿ ಬದಲಾವಣೆ ಆಗುತ್ತದೆ.

ಅರೆಕ್ಷಣದಲ್ಲಿ ಈ ಹಿಂದೆ ಮಾಡಿದ್ದನ್ನು, ಮಾತಾಡಿದ್ದನ್ನು, ಹೇಳಿದ್ದನಿನು ಮರೆತು ಬಿಡುತ್ತಾರೆ. ವಸ್ತುವನ್ನು ಎಲ್ಲಿಯೋ ಇಟ್ಟು ಹುಡುಕಾಡುವುದು. ಹತ್ತಿರದವರ ಹೆಸರನ್ನು ಸಹ ಮರೆಯುವುದು. ಪದೇ ,ಪದೇಪದೆ ಕೇಳಿದ್ದನ್ನೆ ಕೇಳುವುದು. ದಾರಿ ತಪ್ಪಿ ಎಲ್ಲಿಯೋ ಹೋಗಿ ಬಿಡುವುದು.

ದಿನನಿತ್ಯದ ಕೆಲಸದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುವುದು, ಪದೇಪದೆ ಬದಲಾಗುವ ಮಾನಸಿಕ ಸ್ಥಿತಿ, ಶಬ್ದ ಮತ್ತು ದೃಶ್ಯಗಳನ್ನು ಗೃಹಿಸುವಿಕೆಯಲ್ಲಿ ತೊಂದರೆ, ಸರಿಯಾಗಿ ಮಾತನಾಡಲು ಆಗದೆ ಇರುವುದು, ನಿದ್ರೆ ಮತ್ತು ಹಸಿವೆಯಲ್ಲಿ ಬದಲಾವಣೆಗಳು ಆಗುತ್ತವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ