ಉತ್ತರ ಜಪಾನ್‌ನ ಫುಕುಶಿಮಾ ಕರಾವಳಿಯಲ್ಲಿ 7.3 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ

ಭೂಕಂಪವು ಸಮುದ್ರದಿಂದ 60 ಕಿಲೋಮೀಟರ್ (36 ಮೈಲಿ) ಆಳದಲ್ಲಿ ಸಂಭವಿಸಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ಹೇಳಿದೆ. ಈ ಪ್ರದೇಶವು ಉತ್ತರ ಜಪಾನ್‌ನ ಭಾಗವಾಗಿದೆ.

ಉತ್ತರ ಜಪಾನ್‌ನ ಫುಕುಶಿಮಾ ಕರಾವಳಿಯಲ್ಲಿ 7.3 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ
ಸಾಂಕೇತಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Mar 16, 2022 | 9:04 PM

ಟೋಕಿಯೊ: ಉತ್ತರ ಜಪಾನ್‌ನ ಫುಕುಶಿಮಾ ( Fukushima) ಕರಾವಳಿಯಲ್ಲಿ ಬುಧವಾರ ಸಂಜೆ 7.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ(tsunami) ಎಚ್ಚರಿಕೆ ನೀಡಲಾಗಿದೆ. ಭೂಕಂಪವು ಸಮುದ್ರದಿಂದ 60 ಕಿಲೋಮೀಟರ್ (36 ಮೈಲಿ) ಆಳದಲ್ಲಿ ಸಂಭವಿಸಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ಹೇಳಿದೆ. ಈ ಪ್ರದೇಶವು ಉತ್ತರ ಜಪಾನ್‌ನ ಭಾಗವಾಗಿದೆ. ಇದು  9.0 ತೀವ್ರತೆಯ ಭೂಕಂಪ ಮತ್ತು ಸುನಾಮಿಯಿಂದ ಧ್ವಂಸಗೊಂಡಿತ್ತು. ಅಂದಹಾಗೆ ಪ್ರಾಣಹಾನಿ ಅಥವಾ ಹಾನಿಯ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಮಿಯಾಗಿ ಮತ್ತು ಫುಕುಶಿಮಾ ಪ್ರಾಂತ್ಯಗಳ ಭಾಗಗಳಲ್ಲಿ ಒಂದು ಮೀಟರ್ (3-ಅಡಿ) ವರೆಗೆ ಸಮುದ್ರ ಉಲ್ಬಣಗೊಂಡಿದ್ದು ಹವಾಮಾನ ಸಂಸ್ಥೆಯು ಸುನಾಮಿ ಎಚ್ಚರಿಕೆ ನೀಡಿದೆ. ಎನ್ಎಚ್​​ಕೆ ರಾಷ್ಟ್ರೀಯ ದೂರದರ್ಶನವು ಸುನಾಮಿ ಈಗಾಗಲೇ ಕೆಲವು ಪ್ರದೇಶಗಳನ್ನು ತಲುಪಿರಬಹುದು ಎಂದು ಹೇಳಿದೆ. 2011 ರ ಭೂಕಂಪ ಮತ್ತು ಸುನಾಮಿಯ ನಂತರ ಅನೇಕ ಕರಗುವಿಕೆಗಳನ್ನು ಅನುಭವಿಸಿದ ಫುಕುಶಿಮಾ ಡೈಚಿ ಪರಮಾಣು ಸ್ಥಾವರವನ್ನು ನಿರ್ವಹಿಸುವ ಟೋಕಿಯೊ ಎಲೆಕ್ಟ್ರಿಕ್ ಪವರ್ ಕಂಪನಿ ಹೋಲ್ಡಿಂಗ್ಸ್(TEPCO) , ತಮ್ಮ ಕಾರ್ಮಿಕರು ಯಾವುದೇ ಸಂಭವನೀಯ ಹಾನಿಗಳ ಬಗ್ಗೆ ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದೆ.

ಟೋಕಿಯೊ ಸೇರಿದಂತೆ ಪೂರ್ವ ಜಪಾನ್‌ನ ದೊಡ್ಡ ಭಾಗಗಳಲ್ಲಿ ಭೂಕಂಪ ಸಂಭವಿಸಿದ್ದು, ಕಟ್ಟಡಗಳು ಕಂಪನ ಅನುಭವಿಸಿವೆ ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ.

ಟೋಕಿಯೊದಲ್ಲಿ 700,000 ಸೇರಿದಂತೆ ಎರಡು ದಶಲಕ್ಷಕ್ಕೂ ಹೆಚ್ಚು ಮನೆಗಳು ವಿದ್ಯುತ್ ಇಲ್ಲದೆ ಉಳಿದಿವೆ ಎಂದು ವಿದ್ಯುತ್ ಪೂರೈಕೆದಾರ ಟೆಪ್ಕೊ  ಹೇಳಿದೆ.

ಜಪಾನ್ ಪೆಸಿಫಿಕ್ “ರಿಂಗ್ ಆಫ್ ಫೈರ್” ಮೇಲೆ ಕುಳಿತಿದೆ, ಇದು ಆಗ್ನೇಯ ಏಷ್ಯಾದ ಮೂಲಕ ಮತ್ತು ಪೆಸಿಫಿಕ್ ಜಲಾನಯನದಾದ್ಯಂತ ವ್ಯಾಪಿಸಿರುವ ತೀವ್ರವಾದ ಭೂಕಂಪನ ಚಟುವಟಿಕೆಯ ಪ್ರದೇಶವಾಗಿದೆ. ದೇಶವು ನಿಯಮಿತವಾಗಿ ಭೂಕಂಪಗಳಿಂದ ಹಾನಿಗೊಳಗಾಗುತ್ತದೆ ಮತ್ತು ಕಟ್ಟಡಗಳು ಬಲವಾದ ಕಂಪನಗಳನ್ನು ತಡೆದುಕೊಳ್ಳಬಲ್ಲವು ಎಂದು ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಾದ ನಿರ್ಮಾಣ ನಿಯಮಗಳನ್ನು ಹೊಂದಿದೆ. ಆದರೆ ಈಶಾನ್ಯ ಜಪಾನ್‌ನಲ್ಲಿ 2011 ರಲ್ಲಿ ಸಮುದ್ರದೊಳಗಿನ ಭೂಕಂಪವು ಮಾರಣಾಂತಿಕ ಸುನಾಮಿಯನ್ನು ಪ್ರಚೋದಿಸಿತ್ತು. ಈ ಸುನಾಮಿಯಲ್ಲಿ ಸುಮಾರು 18,500 ಮಂದಿ ಸಾವಿಗೀಡಾಗಿದ್ದರು.

ಇದನ್ನೂ ಓದಿ: ಆಟ ಇನ್ನೂ ಮುಗಿದಿಲ್ಲ: ರಾಷ್ಟ್ರಪತಿ ಚುನಾವಣೆ ಬಗ್ಗೆ ಬಿಜೆಪಿಗೆ ಮಮತಾ ಬ್ಯಾನರ್ಜಿ ಸಂದೇಶ

Published On - 8:44 pm, Wed, 16 March 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ