ಜಾನಪದ ಹಾಡಿಗೆ ಮೆಕ್ಸಿಕೋದ 900 ನೃತ್ಯಗಾರರು ಹೆಜ್ಜೆ ಹಾಕಿದರು! ನೃತ್ಯ ಗಿನ್ನಿಸ್ ದಾಖಲೆ ಸೇರಿತು
ಮೆಕ್ಸಿಕೋದ 900 ಕ್ಕೂ ಹೆಚ್ಚು ನೃತ್ಯಗಾರರು ಒಟ್ಟಿಗೆ ಮೆಕ್ಸಿಕೋದ ಜಾನಪದ ಹಾಡಿಗೆ ನೃತ್ಯ ಮಾಡುವ ಮೂಲಕ ಗಿನ್ನಿಸ್ ದಾಖಲೆ ಮಾಡಿದ್ದಾರೆ.
ಮೆಕ್ಸಿಕೋ: ಮೆಕ್ಸಿಕೋದ (Mexico) 900 ಕ್ಕೂ ಹೆಚ್ಚು ನೃತ್ಯಗಾರರು (Dancers) ಒಟ್ಟಿಗೆ ಮೆಕ್ಸಿಕೋದ ಜಾನಪದ (Folk) ಹಾಡಿಗೆ ನೃತ್ಯ (Dance) ಮಾಡುವ ಮೂಲಕ ಗಿನ್ನಿಸ್ (Guinness Record) ದಾಖಲೆ ಮಾಡಿದ್ದಾರೆ. ವರದಿಗಳ ಪ್ರಕಾರ “ಜುವಾನ್ ಕೊಲೊರಾಡೋ” ಹಾಡಿನ ಲೈವ್ ಆವೃತ್ತಿಗೆ ಸಾಂಪ್ರದಾಯಿಕ ಜಾನಪದ ನೃತ್ಯ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ. ಹಿಂದೆ 2019 ರಲ್ಲಿ ಜಲಿಸ್ಕೋ ರಾಜ್ಯದಲ್ಲಿ 882 ನೃತ್ಯಗಾರರು ಒಟ್ಟಿಗೆ ನೃತ್ಯ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದರು. ಈ ದಾಖಲೆಯನ್ನು ಸರಿಗಟ್ಟುವ 954 ನೃತ್ಯಗಾರರು ಒಟ್ಟಿಗೆ ನೃತ್ಯ ಮಾಡಿದ್ದಾರೆ.
ಈ ದಾಖಲೆಯನ್ನು ನಿರ್ಮಿಸಲು ಜೂನ್ 26ರಂದು ಆರ್ಟಿಸನಲ್, ಟೂರಿಸ್ಟಿಕ್, ಕಲ್ಚರಲ್ ಮತ್ತು ಆಗ್ರೋ-ಇಂಡಸ್ಟ್ರಿಯಲ್ ಗ್ರೂಪ್ ಆಫ್ ಬ್ಯೂಟಿಫುಲ್ ಮೈಕೋಕಾನ್ ಸಂಸ್ಥೆಗಳು, ಮೊರೆಲಿಯಾದ ಪುರಸಭೆಯ ಆಶ್ರಯದಲ್ಲಿ ಕೂಟವನ್ನು ಆಯೋಜಿಸಿದ್ದವು. ಕೂಟದಲ್ಲಿ 945 ನೃತ್ಯಗಾರರು ನೃತ್ಯ ಮಾಡುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ. ಈ ಸಂಬಂಧ ಮಾತನಾಡಿದ ಮೆಕ್ಸಿಕೋದ ಸಂಸ್ಕೃತಿ ಸಚಿವ ಫಾತಿಮಾ ಚಾವೆಜ್ ಅಲ್ಕರಾಜ್ ಎಲ್ಲರಿಗೂ ಧನ್ಯವಾದಗಳು ನಿಮ್ಮ ಈ ಅಭೂತ ಪೂರ್ವ ಕಾರ್ಯದಿಂದ ಗಿನ್ನಿಸ್ ರೆಕಾರ್ಡ್ ಮಾಡಿದ್ದೇವೆ ಎಂದು ಹೇಳಿದ್ದಾರೆ.
Esto fue un poco de lo que se vivió esta tarde en #Morelia, en busca de establecer el Récord Guiness del mayor baile folclórico mexicano con "Juan Colorado"
Video: Erick Martínez/MiMorelia.com pic.twitter.com/0rodbRYHSB
— MiMorelia.com (@mimorelia) June 27, 2022