ಕಾಬೂಲ್: ಆಫ್ಘಾನಿಸ್ತಾನದಲ್ಲಿ ಬಾಂಬ್ ದಾಳಿ, ಸಾವು ಹೊಸದಲ್ಲ. ಆದರೆ ಈ ಬಾರಿ ಘಜನಿ ಪ್ರಾಂತ್ಯದ ಗಿಲಾನ್ ಜಿಲ್ಲೆಯಲ್ಲಿ ಮಕ್ಕಳನ್ನು ಗುರಿಯಾಗಿಸಿಕೊಂಡು ನಡೆದ ಭೀಕರ ಬಾಂಬ್ ದಾಳಿಯಲ್ಲಿ 11 ಮಕ್ಕಳು ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇಂದು ಮಧ್ಯಾಹ್ನ ಹೊತ್ತಲ್ಲಿ ಆಟೊರಿಕ್ಷಾವೊಂದರ ಮೇಲೆ ಬಾಂಬ್ ದಾಳಿ ನಡೆದಿದೆ. ಮಕ್ಕಳಿಗೆ ಅಗತ್ಯ ಇರುವ ಕೆಲವು ವಸ್ತುಗಳಿದ್ದ ಆಟೊರಿಕ್ಷಾವನ್ನು ಮಕ್ಕಳು ಸುತ್ತುವರಿದಿದ್ದರು. ಆ ಹೊತ್ತಲ್ಲೇ ಬಾಂಬ್ ದಾಳಿಯಾಗಿದ್ದು, 11 ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ಘಜನಿ ಪ್ರಾಂತ್ಯದ ರಾಜ್ಯಪಾಲರ ಕಚೇರಿ ಕಚೇರಿ ವಕ್ತಾರ ವಾಹಿದುಲ್ಲಾ ಜುಮಾಝಾಡಾ ತಿಳಿಸಿದ್ದಾರೆ.
ಸಾವಿನ ಸಂಖ್ಯೆ ಇನ್ನಷ್ಟು ಏರಬಹುದು. ಸದ್ಯಕ್ಕೆ ಯಾವ ಉಗ್ರಸಂಘಟನೆಗಳೂ ದಾಳಿ ಹೊಣೆಯನ್ನು ಹೊತ್ತುಕೊಂಡಿಲ್ಲ. ಮಕ್ಕಳನ್ನೇ ಗುರಿಯಾಗಿಸಿಕೊಂಡು ಯಾಕೆ ಬಾಂಬ್ ದಾಳಿ ನಡೆಸಲಾಯಿತು ಎಂಬ ಬಗ್ಗೆ ತನಿಖೆ ಪ್ರಾರಂಭವಾಗಿದೆ ಎಂದು ವಾಹಿದುಲ್ಲಾ ತಿಳಿಸಿದ್ದಾರೆ.
ಶಾಂತಿಸ್ಥಾಪನೆಗಾಗಿ ತಾಲಿಬಾನಿಗಳು ಮತ್ತ ಅಫ್ಗಾನಿಸ್ತಾನ ಸರ್ಕಾರದ ನಡುವೆ ಮಾತುಕತೆ ನಡೆಯುತ್ತಿದೆ. ಹಿಂಸಾಚಾರ ಕಡಿಮೆ ಮಾಡಲು ಎಲ್ಲ ಪ್ರಯತ್ನಗಳು ನಡೆಯುತ್ತಿದ್ದರೂ ಇತ್ತೀಚಿನ ದಿನಗಳಲ್ಲಿ ಬಾಂಬ್ ದಾಳಿ, ಹಿಂಸೆ ಮತ್ತಷ್ಟು ಹೆಚ್ಚಾಗಿದೆ.
ಅಮೆರಿಕ ರಕ್ಷಣಾ ಕಾಯ್ದೆಗೇ ಕೊಕ್ಕೆ ಹಾಕಿ ಕುಳಿತ ಟ್ರಂಪ್: ಭಾರತದ ಮೇಲೇನು ಪರಿಣಾಮ?