ನಾಲ್ಕನೇ ಮಗುವಿಗೆ ತಾಯಿಯಾಗಲಿದ್ದಾರೆ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪತ್ನಿ ಉಷಾ
ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ (JD Vance)ಪತ್ನಿ ಉಷಾ ವ್ಯಾನ್ಸ್(Usha Vance) ನಾಲ್ಕನೇ ಮಗುವಿಗೆ ತಾಯಿಯಾಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಕುರಿತು ಉಷಾ ವ್ಯಾನ್ಸ್ ಖುದ್ದಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ತಾವು ಗಂಡು ಮಗುವಿನ ಪೋಷಕರಾಗಲಿದ್ದು, ಜುಲೈನಲ್ಲಿ ಹೆರಿಗೆಯಾಗಲಿರುವುದಾಗಿ ಹೇಳಿಕೊಂಡಿದ್ದಾರೆ. ಉಷಾ ಮತ್ತು ಮಗು ಚೆನ್ನಾಗಿದ್ದಾರೆ ಮತ್ತು ಜುಲೈ ಅಂತ್ಯದಲ್ಲಿ ಮಗುವನ್ನು ಸ್ವಾಗತಿಸಲು ನಾವೆಲ್ಲರೂ ಎದುರು ನೋಡುತ್ತಿದ್ದೇವೆ.

ವಾಷಿಂಗ್ಟನ್, ಜನವರಿ 21: ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ (JD Vance)ಪತ್ನಿ ಉಷಾ ವ್ಯಾನ್ಸ್(Usha Vance) ನಾಲ್ಕನೇ ಮಗುವಿಗೆ ತಾಯಿಯಾಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಕುರಿತು ಉಷಾ ವ್ಯಾನ್ಸ್ ಖುದ್ದಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ತಾವು ಗಂಡು ಮಗುವಿನ ಪೋಷಕರಾಗಲಿದ್ದು, ಜುಲೈನಲ್ಲಿ ಮಗುವನ್ನು ಬರಮಾಡಿಕೊಳ್ಳಲಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಉಷಾ ಮತ್ತು ಮಗು ಚೆನ್ನಾಗಿದ್ದಾರೆ ಮತ್ತು ಜುಲೈ ಅಂತ್ಯದಲ್ಲಿ ಮಗುವನ್ನು ಸ್ವಾಗತಿಸಲು ನಾವೆಲ್ಲರೂ ಎದುರು ನೋಡುತ್ತಿದ್ದೇವೆ.
ಈ ರೋಮಾಂಚಕಾರಿ ಮತ್ತು ಒತ್ತಡದ ಸಮಯದಲ್ಲಿ, ನಮ್ಮ ಕುಟುಂಬವನ್ನು ಅತ್ಯುತ್ತಮವಾಗಿ ನೋಡಿಕೊಳ್ಳುವ ಮಿಲಿಟರಿ ವೈದ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದಿದ್ದಾರೆ. ಜೆಡಿ ವ್ಯಾನ್ಸ್ ದಂಪತಿಗೆ ಈಗಾಗಲೇ ಮೂವರು ಮಕ್ಕಳಿದ್ದಾರೆ. ಮಕ್ಕಳ ಹೆಸರು ಇವಾನ್, ವಿವೇಕ್ ಮತ್ತು ಮಿರಾಬೆಲ್. ಉಷಾಗೆ 40 ವರ್ಷ ವಯಸ್ಸು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಮಾರು 60 ದೇಶಗಳ ಮೇಲೆ ವ್ಯಾಪಕ ಸುಂಕ ವಿಧಿಸಿ ವಿರಾಮಗೊಳಿಸಿದ ನಂತರ ವ್ಯಾನ್ಸ್ ಭಾರತಕ್ಕೆ ಭೇಟಿ ನೀಡಿದ್ದರು. ಜೆಡಿ ವ್ಯಾನ್ಸ್ ಪತ್ನಿ ಉಷಾ ಚಿಲುಕುರಿ ವ್ಯಾನ್ಸ್ ಆಂಧ್ರದವರು. ಉಷಾ ವ್ಯಾನ್ಸ್ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋದಲ್ಲಿ ಹುಟ್ಟಿದ್ದಾರೆ. ಅವರು ಯೇಲ್ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಬಿಎ ಪದವಿ ಪಡೆದರು ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಸ್ಕಾಲರ್ ಆಗಿದ್ದರು.
ಮತ್ತಷ್ಟು ಓದಿ: ಅಮೆರಿಕ ಉಪಾಧ್ಯಕ್ಷ ಜೆ.ಡಿ. ವಾನ್ಸ್ ಹಾಗು ಕುಟುಂಬದಿಂದ 4 ದಿನ ಭಾರತ ಪ್ರವಾಸ; ಏನಿದೆ ಅವರ ಅಜೆಂಡಾ?
ಅವರು ಆರಂಭಿಕ ಆಧುನಿಕ ಇತಿಹಾಸದಲ್ಲಿ ಎಂಫಿಲ್ ಪಡೆದರು. ವ್ಯಾನ್ಸ್ ಅವರ ತಾಯಿ ಆಣ್ವಿಕ ಜೀವಶಾಸ್ತ್ರಜ್ಞರಾಗಿದ್ದರೆ, ಅವರ ತಂದೆ ಮೆಕ್ಯಾನಿಕಲ್ ಎಂಜಿನಿಯರ್.
ಉಷಾ ವ್ಯಾನ್ಸ್ ತಂದೆ ಮತ್ತು ಅಜ್ಜ ಇಬ್ಬರೂ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ (ಐಐಟಿ) ಕೆಲಸ ಮಾಡಿದ್ದರು. ಅವರ ತಂಗಿ ಸ್ಯಾನ್ ಡಿಯಾಗೋದಲ್ಲಿ ಸೆಮಿಕಂಡಕ್ಟರ್ ಕಂಪನಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದಾರೆ. ಉಷಾ ವ್ಯಾನ್ಸ್ ಅವರ ಪೋಷಕರು 1970 ರ ದಶಕದ ಉತ್ತರಾರ್ಧದಲ್ಲಿ ಆಂಧ್ರಪ್ರದೇಶದಿಂದ ಅಮೆರಿಕಕ್ಕೆ ತೆರಳಿದ್ದರು.
ಉಷಾ ವ್ಯಾನ್ಸ್ ಜೆಡಿ ವ್ಯಾನ್ಸ್ ಅವರನ್ನು ಹೇಗೆ ಭೇಟಿಯಾದರು? ಉಷಾ 2010 ರಲ್ಲಿ ಯೇಲ್ ಕಾನೂನು ಶಾಲೆಯ ವಿದ್ಯಾರ್ಥಿನಿಯಾಗಿದ್ದಾಗ ಜೆಡಿ ವ್ಯಾನ್ಸ್ ಅವರನ್ನು ಭೇಟಿಯಾದರು. ಒಂದು ಡೇಟ್ ನಂತರ ತಾನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದರು. 2015 ರಲ್ಲಿ, ಉಷಾ ವ್ಯಾನ್ಸ್ ಅಮೆರಿಕದ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರೊಂದಿಗೆ ಕೆಲಸ ಮಾಡುತ್ತಿದ್ದರು.
ನಂತರ ಅವರು ಲಾಸ್ ಏಂಜಲೀಸ್, ಸ್ಯಾನ್ ಫ್ರಾನ್ಸಿಸ್ಕೊ ಮತ್ತು ವಾಷಿಂಗ್ಟನ್, ಡಿಸಿಯಲ್ಲಿ ಕಚೇರಿಗಳನ್ನು ಹೊಂದಿರುವ ಕಾನೂನು ಸಂಸ್ಥೆಯಾದ ಯುಎಸ್ ಕಾನೂನು ಸಂಸ್ಥೆ ಮುಂಗರ್, ಟೋಲೆಸ್ ಓಲ್ಸನ್ ಎಲ್ ಎಲ್ ಪಿ ಯಲ್ಲಿ ವಕೀಲರಾದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
