AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕ್ ಸ್ವಾತಂತ್ರ್ಯ ದಿನದಂದು ನೂರಾರು ಮಂದಿ ಹಲ್ಲೆ ನಡೆಸಿ ಬಟ್ಟೆ ಹರಿದು ಹಾಕಿದರು: ಮಹಿಳಾ ಟಿಕ್ ಟಾಕರ್ ದೂರು

"ಅವರು ಹೆಚ್ಚಿನ ಸಂಖ್ಯೆಯಲ್ಲಿದ್ದು ನಮ್ಮ ಕಡೆಗೆ ಬರುತ್ತಿದ್ದರು. ಅವರು ನನ್ನನ್ನು ತಳ್ಳಿ ಎಳೆದಾಡಿ ನನ್ನ ಬಟ್ಟೆ ಹರಿದುಹೋಗುವಂತೆ ಮಾಡಿದರು. ಹಲವಾರು ಜನರು ನನಗೆ ಸಹಾಯ ಮಾಡಲು ಪ್ರಯತ್ನಿಸಿದರು. ಆದರೆ ಅವರ ಕಡೆ ಹೆಚ್ಚಿನ ಜನರಿದ್ದು. ನನ್ನನ್ನು ಗಾಳಿಯಲ್ಲಿ ಎತ್ತಿ ಬಿಸಾಡುತ್ತಿದ್ದರು ಎಂದು ಮಹಿಳೆ ಹೇಳಿದ್ದಾರೆ

ಪಾಕ್ ಸ್ವಾತಂತ್ರ್ಯ ದಿನದಂದು ನೂರಾರು ಮಂದಿ ಹಲ್ಲೆ ನಡೆಸಿ ಬಟ್ಟೆ ಹರಿದು ಹಾಕಿದರು: ಮಹಿಳಾ ಟಿಕ್ ಟಾಕರ್ ದೂರು
ಪ್ರಾತಿನಿಧಿಕ ಚಿತ್ರ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Aug 18, 2021 | 11:26 AM

Share

ಲಾಹೋರ್: ತನ್ನ ಬಟ್ಟೆ ಹರಿದು ಹಾಕಿ ನೂರಾರು ಜನ ನನ್ನನ್ನು ಎತ್ತಿ ಎಸೆದಿದ್ದಾರೆ. ಈ ಘಟನೆ ಸ್ವಾತಂತ್ರ್ಯ ದಿನದಂದು ನಡೆದಿದೆ ಎಂದು ಪಾಕಿಸ್ತಾನದ ಟಿಕ್ ಟಾಕರ್ (Tiktoker) ಆಗಿರುವ ಮಹಿಳೆಯೊಬ್ಬರು ಆರೋಪಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಲಾರಿ ಅಡ್ಡ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ (FIR) ಪ್ರಕಾರ ಮಹಿಳೆ ಆರು ಗೆಳೆಯರೊಂದಿಗೆ ಶನಿವಾರ ಸ್ವಾತಂತ್ರ್ಯ ದಿನಾಚರಣೆಯಂದು ಮಿನಾರ್-ಇ-ಪಾಕಿಸ್ತಾನದ (Minar-e-Pakistan) ಬಳಿ ವಿಡಿಯೊ ಚಿತ್ರೀಕರಣ ಮಾಡುತ್ತಿದ್ದರು. ಆಗ ಸುಮಾರು 300-400 ಮಂದಿ ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಮಹಿಳೆ ದೂರಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.

ಆಕೆ ಮತ್ತು ಆಕೆಯ ಗೆಳೆಯರು ಗುಂಪಿನಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ ಎಂದು ದೂರು ನೀಡಿರುವ ಮಹಿಳೆ ಹೇಳಿದ್ದಾರೆ. “ಅವರು ಹೆಚ್ಚಿನ ಸಂಖ್ಯೆಯಲ್ಲಿದ್ದು ನಮ್ಮ ಕಡೆಗೆ ಬರುತ್ತಿದ್ದರು. ಅವರು ನನ್ನನ್ನು ತಳ್ಳಿ ಎಳೆದಾಡಿ ನನ್ನ ಬಟ್ಟೆ ಹರಿದುಹೋಗುವಂತೆ ಮಾಡಿದರು. ಹಲವಾರು ಜನರು ನನಗೆ ಸಹಾಯ ಮಾಡಲು ಪ್ರಯತ್ನಿಸಿದರು. ಆದರೆ ಅವರ ಕಡೆ ಹೆಚ್ಚಿನ ಜನರಿದ್ದು. ನನ್ನನ್ನು ಗಾಳಿಯಲ್ಲಿ ಎತ್ತಿ ಬಿಸಾಡುತ್ತಿದ್ದರು ಎಂದು ಮಹಿಳೆ ಹೇಳಿದ್ದಾರೆ.ಅದೇ ವೇಳೆ ಆಕೆಯ ಗೆಳೆಯರ ಮೇಲೂ ಹಲ್ಲೆ ಮಾಡಲಾಯಿತು ಎಂದು ದೂರಿದ್ದಾರೆ.

ಲಾಹೋರ್ ಪೊಲೀಸರು ಮಂಗಳವಾರ ಸ್ವಾತಂತ್ರ್ಯ ದಿನಾಚರಣೆಯಂದು ನಗರದ ಗ್ರೇಟರ್ ಇಕ್ಬಾಲ್ ಪಾರ್ಕ್ ನಲ್ಲಿ ಟಿಕ್ ಟೋಕರ್ ಮಹಿಳೆ ಮತ್ತು ಆಕೆಯ ಗೆಳೆಯರ ಮೇಲೆ ಹಲ್ಲೆ ಮತ್ತು ಕಳವು ಆರೋಪದ ಮೇಲೆ ನೂರಾರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಆಕೆಯ ಉಂಗುರ ಮತ್ತು ಕಿವಿಯೋಲೆಗಳನ್ನು “ಬಲವಂತವಾಗಿ ತೆಗೆದುಕೊಳ್ಳಲಾಗಿದೆ”. ಆಕೆಯ ಗೆಳೆಯರೊಬ್ಬರ ಮೊಬೈಲ್ ಫೋನ್, ಆತನ ಗುರುತಿನ ಚೀಟಿ ಮತ್ತು ₹ 15,000 ದೋಚಲಾಗಿದೆ ಎಂದು ವರದಿಯಲ್ಲಿ ಹೇಳಿದೆ. “ಅಪರಿಚಿತ ವ್ಯಕ್ತಿಗಳು ನಮ್ಮ ಮೇಲೆ ದೌರ್ಜನ್ಯ ನಡೆಸಿದ್ದಾರೆ” ಎಂದು ದೂರುದಾರರು ತಿಳಿಸಿದ್ದಾರೆ.

ಲಾಹೋರ್ ಡಿಐಜಿ ಕಾರ್ಯಾಚರಣೆ ಸಾಜಿದ್ ಕಿಯಾನಿ ಘಟನೆಯಲ್ಲಿ ಭಾಗಿಯಾದ ಶಂಕಿತರ ವಿರುದ್ಧ “ತಕ್ಷಣದ ಕಾನೂನು ಕ್ರಮ” ಕೈಗೊಳ್ಳುವಂತೆ ಎಸ್ ಪಿಗೆ ಆದೇಶಿಸಿದರು.

“ಮಹಿಳೆಯರ ಗೌರವಕ್ಕೆ ಚ್ಯುತಿಯುಂಟು ಮಾಡಿದ ಮತ್ತು ಕಿರುಕುಳ ನೀಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ಹೇಳಿದರು. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಾಗರಿಕರು ವಿಡಿಯೊದಲ್ಲಿನ ವ್ಯಕ್ತಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತನ್ನ ವೇದಿಕೆಯಲ್ಲಿ “ಸೂಕ್ತವಲ್ಲದ ವಿಷಯ” ವನ್ನು ಅನುಮತಿಸಿದ ಆರೋಪದ ಮೇಲೆ ಜನಪ್ರಿಯ ಕಿರು ವಿಡಿಯೊ ಆಪ್ ಟಿಕ್ ಟಾಕ್ ನ್ನು ಅನ್ನು ಪಾಕಿಸ್ತಾನದಲ್ಲಿ ಹಲವು ಬಾರಿ ನಿಷೇಧಿಸಲಾಗಿದೆ.

ಇದನ್ನೂ ಓದಿ: ICC T20 World Cup Schedule: ಬಹುನಿರೀಕ್ಷಿತ ಐಸಿಸಿ ಟಿ-20 ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಭಾರತ-ಪಾಕ್ ಪಂದ್ಯ ಯಾವಾಗ?

ಇದನ್ನೂ ಓದಿ: BV Nagarathna: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ಕರ್ನಾಟಕದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹೆಸರು ಶಿಫಾರಸು

(A woman TikToker in Pakistan alleges that her clothes were torn and she was thrown into the air on Independence Day)