Abortion Rights: ಸಾಂವಿಧಾನಿಕವಾಗಿ ಗರ್ಭಪಾತದ ಹಕ್ಕನ್ನು ಪಡೆದ ವಿಶ್ವದ ಮೊದಲ ದೇಶ ಫ್ರಾನ್ಸ್
ಗರ್ಭಪಾತದ ಹಕ್ಕನ್ನು ಸಾಂವಿಧಾನಿಕವಾಗಿ ಪಡೆದ ವಿಶ್ವದ ಮೊದಲ ದೇಶ ಫ್ರಾನ್ಸ್. ಮಹಿಳಾ ಹಕ್ಕುಗಳ ಸಂಘಟನೆಗಳು ಈ ಕ್ರಮವನ್ನು ಐತಿಹಾಸಿಕ ಎಂದು ಬಣ್ಣಿಸಿದ್ದರೆ, ಗರ್ಭಪಾತ ವಿರೋಧಿ ಸಂಘಟನೆಗಳು ಕಟುವಾಗಿ ಟೀಕಿಸಿವೆ.

ಗರ್ಭಪಾತ(Abortion)ಕ್ಕೆ ಸಾಂವಿಧಾನಿಕ ಹಕ್ಕಿನ ಸ್ಥಾನಮಾನ ನೀಡಿದ ವಿಶ್ವದ ಮೊದಲ ದೇಶ ಎನ್ನುವ ಖ್ಯಾತಿಗೆ ಫ್ರಾನ್ಸ್(France) ಪಾತ್ರವಾಗಿದೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್(Emmanual Macron) ಕರೆದ ಉಭಯ ಸದನಗಳ ವಿಶೇಷ ಅಧಿವೇಶನದಲ್ಲಿ ಗರ್ಭಪಾತಕ್ಕೆ ಸಾಂವಿಧಾನಿಕ ಹಕ್ಕಿನ ಸ್ಥಾನಮಾನವನ್ನು ನೀಡಲಾಗಿದೆ.
ಫ್ರೆಂಚ್ ಸಂಸತ್ತು ಈ ಪ್ರಸ್ತಾಪದ ಪರವಾಗಿ ಮತ ಹಾಕಿದೆ. ಮಸೂದೆಗೆ 780-72 ಮತಗಳಿಂದ ಅನುಮೋದನೆ ದೊರೆತಿದೆ. ಈ ಹಿಂದೆ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರು ಮಹಿಳೆಯರಿಗೆ ಗರ್ಭಪಾತದ ಸಾಂವಿಧಾನಿಕ ಹಕ್ಕನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಗರ್ಭಪಾತದ ಹಕ್ಕು ಈ ದೇಶದಲ್ಲಿ ವ್ಯಾಪಕವಾಗಿ ಸ್ವೀಕೃತವಾಗಿದ್ದು, ಗರ್ಭಪಾತವನ್ನು ಕಾನೂನುಬದ್ಧಗೊಳಿಸುವ ಕ್ರಮವನ್ನು ಫ್ರಾನ್ಸ್‌ನ ಶೇ. 80ರಷ್ಟು ಮಂದಿ ಬೆಂಬಲಿಸಿದ್ದಾರೆ.
ಪ್ರಧಾನಿ ಗೇಬ್ರಿಯಲ್ ಅಟಲ್ ಹೇಳಿದ್ದೇನು? ಧಾನಿ ಗೇಬ್ರಿಯಲ್ ಅಟಲ್ ಅವರು ನಾವು ಎಲ್ಲಾ ಮಹಿಳೆಯರಿಗೆ ಸಂದೇಶವನ್ನು ಕಳುಹಿಸುತ್ತಿದ್ದೇವೆ ಎಂದು ಹೇಳಿದರು. ಹೆಣ್ಣಿನ ದೇಹ ಅವರದ್ದು, ಅವರ ಪರವಾಗಿ ಯಾರೂ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರು.
ಮತ್ತಷ್ಟು ಓದಿ: 12 ವರ್ಷದ ಅಪ್ರಾಪ್ತ ಬಾಲಕಿಯ ಗರ್ಭಪಾತ ಮಾಡಲು ಅನುಮತಿ ನಿರಾಕರಿಸಿದ ಕೇರಳ ಹೈಕೋರ್ಟ್: ವರದಿ
ಫ್ರಾನ್ಸ್‌ನ 80 ಪ್ರತಿಶತ ಜನಸಂಖ್ಯೆಯ ಬೆಂಬಲ ಅಮೆರಿಕ ಮತ್ತು ಇತರ ಹಲವು ದೇಶಗಳಿಗೆ ಹೋಲಿಸಿದರೆ, ಫ್ರಾನ್ಸ್‌ನಲ್ಲಿ ಗರ್ಭಪಾತದ ಹಕ್ಕುಗಳು ಹೆಚ್ಚು ಅಂಗೀಕರಿಸಲ್ಪಟ್ಟಿವೆ ಎಂದು ತಿಳಿದಿದೆ. ಫ್ರೆಂಚ್ ಜನಸಂಖ್ಯೆಯ ಸುಮಾರು 80 ಪ್ರತಿಶತದಷ್ಟು ಜನರು ತಮ್ಮ ದೇಶದಲ್ಲಿ ಗರ್ಭಪಾತ ಕಾನೂನುಬದ್ಧವಾಗಿದೆ ಎಂಬ ಅಂಶವನ್ನು ಬೆಂಬಲಿಸುತ್ತಾರೆ.
1974 ರ ಕಾನೂನು ಪ್ರಕಾರ ಫ್ರಾನ್ಸ್‌ನಲ್ಲಿ ಮಹಿಳೆಯರು ಗರ್ಭಪಾತಕ್ಕೆ ಕಾನೂನುಬದ್ಧ ಹಕ್ಕನ್ನು ಹೊಂದಿದ್ದಾರೆ – ಆ ಸಮಯದಲ್ಲಿ ಅನೇಕರು ಇದನ್ನು ಕಟುವಾಗಿ ಟೀಕಿಸಿದ್ದರು. ಗರ್ಭಪಾತದ ಹಕ್ಕನ್ನು ಸಂವಿಧಾನಕ್ಕೆ ಸೇರಿಸುವ ಅಗತ್ಯವಿಲ್ಲ ಎಂದು ಮೊರಿನಿಯರ್ ಹೇಳಿದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ