AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಲಿಬಾನ್​ನ 25 ಉಗ್ರರನ್ನು ಹೊಡೆದುರುಳಿಸಿದ ಬಗ್ಗೆ ಪ್ರಿನ್ಸ್ ಹ್ಯಾರಿ ತಮ್ಮ ಆತ್ಮಚರಿತ್ರೆ ‘ಸ್ಪೇರ್​‘ನಲ್ಲಿ ಬರೆದುಕೊಂಡಿದ್ದಾರೆ

‘ನಾನಂದುಕೊಳ್ಳುವ ಹಾಗೆ ನನ್ನಿಂದ ಹತರಾದವರು 25 ಜನ. ಈ ಸಂಖ್ಯೆ ನನ್ನಲ್ಲಿ ಸಂತೃಪ್ತಿಯ ಭಾವವೇನೂ ಮೂಡಿಸಿಲ್ಲ ಮತ್ತು ಅದು ನನ್ನಲ್ಲಿ ಮುಜುಗುರವನ್ನೂ ಉಂಟು ಮಾಡಿಲ್ಲ,’ ಎಂದು ಹ್ಯಾರಿ ಬರೆದುಕೊಂಡಿದ್ದಾರೆ.

ತಾಲಿಬಾನ್​ನ 25 ಉಗ್ರರನ್ನು ಹೊಡೆದುರುಳಿಸಿದ ಬಗ್ಗೆ ಪ್ರಿನ್ಸ್ ಹ್ಯಾರಿ ತಮ್ಮ ಆತ್ಮಚರಿತ್ರೆ ‘ಸ್ಪೇರ್​‘ನಲ್ಲಿ ಬರೆದುಕೊಂಡಿದ್ದಾರೆ
ಅಪಘಾನಿಸ್ತಾನದಲ್ಲಿ ಪ್ರಿನ್ಸ್ ಹ್ಯಾರಿ
TV9 Web
| Edited By: |

Updated on: Jan 06, 2023 | 5:45 PM

Share

ಅಪಘಾನಿಸ್ತಾನದಲ್ಲಿ ತಾಲಿಬಾನಿ ಉಗ್ರರನ್ನು (Taliban Terrorists) ತಾನು ಬೇಟೆಯಾಡುವಾಗ ಕನಿಷ್ಟ 25 ರಷ್ಟು ಜನರನ್ನು ಕೊಂದಿರುವುದಾಗಿ ಪ್ರಿನ್ಸ್ ಹ್ಯಾರಿ (Prince Harry) ತಮ್ಮ ಆತ್ಮ ಚರಿತ್ರೆ ಸ್ಪೇರ್ ನಲ್ಲಿ (Spare) ಬರೆದುಕೊಂಡಿದ್ದಾರೆ. ಪುಸ್ತಕದ ಭಾಗವೊಂದನ್ನು ಪಡೆದುಕೊಂಡಿರುವ ದಿ ಟೆಲಿಗ್ರಾಫ್ ವರದಿಯ ಪ್ರಕಾರ, ತಾಲಿಬಾನ್ ಸದಸ್ಯರನ್ನು ಜನಸಾಮಾನ್ಯರಂತೆ ಪರಿಗಣಿಸಬಾರದು ಎಂದು ಸೇನೆ ತನಗೆ ತರಬೇತಿ ನೀಡಿತ್ತು ಎಂದು ಹ್ಯಾರಿ ಹೇಳಿದ್ದಾರೆ. ಅಪಾಚೆ ದಾಳಿ ಹೆಲಿಕಾಪ್ಟರ್ ನ ಪೈಲಟ್ ಸಾಮರ್ಥ್ಯದಲ್ಲಿ ಅವರ ಹತ್ಯೆಗಳನ್ನು ಮಾಡಿದ್ದು ತನ್ನಲ್ಲಿ ಹೆಮ್ಮೆಯ ಭಾವ ಮೂಡಿಸಿಲ್ಲ ಅಥವಾ ವಿಷಾದವನ್ನೂ ಉಂಟು ಮಾಡಿಲ್ಲ ಎಂದು ಅವರು ಹೇಳಿದ್ದಾರೆ.

‘ಅಪಾಚೆ ಮತ್ತು ಲಾಪ್ ಟಾಪ್ ಗಳ ಈ ಯುಗದಲ್ಲಿ ಕೊಂದ ವೈರಿಗಳ ಸಂಖ್ಯೆಯನ್ನು ನಿಖರವಾಗಿ ಹೇಳಬಹುದು. ನಡೆದ ಹತ್ಯೆಗಳ ಬಗ್ಗೆ ವಿಚಲಿತನಾಗಬಾರದು ಎಂಬ ಅಂಶವನ್ನು ನಾನು ಕಂಡುಕೊಂಡಿದ್ದೇನೆ,’ ಎಂದು ಹ್ಯಾರಿ ಹೇಳಿದ್ದಾರೆ. ಸಸ್ಸೆಕ್ಸ್ ನ ರಾಜಕುಮಾರನಾಗಿರುವ 38-ವರ್ಷ-ವಯಸ್ಸಿನ ಹ್ಯಾರಿ, 2007-2008 ರಿಂದ ಬ್ರಿಟಿಷ್ ರಾಯಲ್ ಆರ್ಮಿಯ ಏರ್ ಕಂಟ್ರೋಲರ್ ಆಗಿ ಮತ್ತು 2012-2013 ರ ನಡುವೆ ಅಟ್ಯಾಕ್ ಹೆಲಿಕಾಪ್ಟರ್ ಪೈಲಟ್ ಅಗಿ ಸೇವೆ ಸಲ್ಲಿಸಿದ್ದಾರೆ, ಎಂದು ಅಲ್ ಜಜೀರಾ ವರದಿ ಮಾಡಿದೆ.

ಇದನ್ನೂ ಓದಿ:  Swadesh Darshan: ಸ್ವದೇಶ್ ದರ್ಶನ್ ಯೋಜನೆಗೆ ಕರ್ನಾಟಕದಿಂದ ಹಂಪಿ, ಮೈಸೂರು ಆಯ್ಕೆ

‘ನಾನಂದುಕೊಳ್ಳುವ ಹಾಗೆ ನನ್ನಿಂದ ಹತರಾದವರು 25 ಜನ. ಈ ಸಂಖ್ಯೆ ನನ್ನಲ್ಲಿ ಸಂತೃಪ್ತಿಯ ಭಾವವೇನೂ ಮೂಡಿಸಿಲ್ಲ ಮತ್ತು ಅದು ನನ್ನಲ್ಲಿ ಮುಜುಗುರವನ್ನೂ ಉಂಟು ಮಾಡಿಲ್ಲ,’ ಎಂದು ಹ್ಯಾರಿ ಬರೆದುಕೊಂಡಿದ್ದಾರೆ. ತಾನು ಹೋರಾಡುತ್ತಿರುವ ತಾಲಿಬಾನ್ ಉಗ್ರರು ಕೇವಲ ಚದುರಂಗದ ಪೇದೆಗಳಂತೆ ಎಂಬ ಅಂಶವನ್ನು ಸೇನೆ ತನ್ನ ತಲೆಯಲ್ಲಿ ತುಂಬಿತ್ತು ಎಂದು ಹ್ಯಾರಿ ಹೇಳಿದ್ದಾರೆ.

‘ನನ್ನ ಉದ್ದೇಶ ಮತ್ತು ಗುರಿ ಸ್ಪಷ್ಟವಾಗಿತ್ತು, ರಾತ್ರಿ ಮಲಗಲು ಹೋಗುವಾಗ ತಲೆಯಲ್ಲಿ ಯಾವುದೇ ರೀತಿಯ ಗೊಂದಲ ಇರಬಾರದೆಂದು ನಿಶ್ಚಯಿಸಿಕೊಂಡಿದ್ದೆ. ನಾಗರಿಕರು ಇಲ್ಲದ ಸ್ಥಳದಲ್ಲಿ ಮಾತ್ರ ತಾಲಿಬಾನ್ ಉಗ್ರರೆಡೆ ಗುಂಡು ಹಾರಿಸುವುದು ನನ್ನ ಉದ್ದೇಶವಾಗಿರುತಿತ್ತು. ಜೀವಂತವಾಗಿ ಮತ್ತು ಯಾವುದೇ ಊನಗಳಿಲ್ಲದೆ ಗ್ರೇಟ್ ಬ್ರಿಟನ್ ಗೆ ವಾಪಸ್ಸು ಹೋಗುವುದು ನನ್ನ ಗುರಿಯಾಗಿತ್ತು ಮತ್ತು ಅದಕ್ಕೂ ಮಿಗಿಲಾಗಿ ನನ್ನಲ್ಲಿ ಯಾವುದೇ ಅಪರಾಧೀ ಭಾವಕ್ಕೆ ಸ್ಥಳ ನೀಡಬಾರದು ಎಂದು ನಿಶ್ಚಯಿಸಿಕೊಂಡಿದ್ದೆ,’ ಎಂದು ಹ್ಯಾರಿ ಬರೆದುಕೊಂಡಿದ್ದಾರೆ.

ಪ್ರಿನ್ಸ್ ಹ್ಯಾರಿ ಅವರ ಆತ್ಮಚರಿತ್ರೆ ‘ಸ್ಪೇರ್’ ಮುಂದಿನ ವಾರವಷ್ಟೇ ಬಿಡುಗಡೆಯಾಗಲಿದೆ. ಆದರೆ ಪುಸ್ತಕದ ಸ್ಪ್ಯಾನಿಶ್ ಅವೃತ್ತಿ ಪ್ರಮಾದದಿಂದಾಗಿ ಮಾರುಕಟ್ಟೆಗಳಲ್ಲಿ ಲಭ್ಯವಾಗಿದ್ದು ದೊಡ್ಡ ಸುದ್ದಿಯಾಗಿತ್ತು. ಕೂಡಲೇ ಪುಸ್ತಕಗಳನ್ನು ವಾಪಸ್ಸು ತರಿಸಲಾಯಿತಾದರೂ ಆದಾಗಲೇ ಅವುಗಳನ್ನು ಖರೀದಿಸಿದ್ದ ಮಾಧ್ಯಮಗಳು ಪುಸ್ತಕದ ಪುಟಗಳನ್ನು ತಡಕಾಡಿ ಅದರಲ್ಲಿನ ಕುತೂಹಲಕಾರಿ ಸಂಗತಿಗಳನ್ನು ಚರ್ಚೆ ಮಾಡಲಾರಂಭಿಸಿವೆ.

ಇದನ್ನೂ ಓದಿ:  Foreign Universities: ಭಾರತದಲ್ಲಿ ಪ್ರತಿಷ್ಠಿತ ವಿದೇಶಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಒಂದು ಹೆಜ್ಜೆ ಮುಂದಿಟ್ಟ ಪ್ರಧಾನಿ ಮೋದಿ

ಅವುಗಳಲ್ಲಿ ಒಂದೆಂದರೆ ಪ್ರಿನ್ಸ್ ಹ್ಯಾರಿಯ ಪತ್ನಿ ಮೇಘನ್ ಮಾರ್ಕ್ಲೆ ವಿಷಯಕ್ಕೆ ಸಂಬಂಧಿಸಿದಂತೆ ಹಿರಿಯ ಸಹೋದರ ಪ್ರಿನ್ಸ್ ವಿಲಿಯಮ್ ಅವರು ಹ್ಯಾರಿಯ ಮೇಲೆ ಹಲ್ಲೆ ನಡೆಸಿದ್ದ ವಿಷಯ. ಮೇಘನ್ ಬಗ್ಗೆ ವಿಲಿಯಂ ಬೈಗುಳದ ಭಾಷೆ ಬಳಸಿದ್ದಕ್ಕೆ ತಮ್ಮಿಬ್ಬರ ನಡುವೆ ಜಗಳವಾಗಿತ್ತು ಅಂತ ಹ್ಯಾರಿ ಬರೆದಿದ್ದಾರೆ.

ತನ್ನ ತಂದೆ ಕಿಂಗ್ 3ನೇ ಚಾರ್ಲ್ಸ್ ಅವರೊಂದಿಗಿದ್ದ ಕಳಂಕಿತ ಸಂಬಂಧದ ಬಗ್ಗೆಯೂ ಹ್ಯಾರಿ ಬರೆದುಕೊಂಡಿದ್ದಾರಲ್ಲದೆ ತನ್ನ ತಾಯಿ ರಾಜಕುಮಾರಿ ಡಯಾನ 1997ರಲ್ಲಿ ಕಾರು ದುರಂತದಲ್ಲಿ ಸತ್ತಿದ್ದನ್ನು ತನಗೆ ಹೇಗೆ ಹೇಳಲಾಗಿತ್ತು ಅನ್ನೋದನ್ನು ಸಹ ಅವರು ಬರೆದುಕೊಂಡಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್