Afghanistan: ಅಫ್ಘಾನಿಸ್ತಾನದ ಕಾಬೂಲ್ ನಗರದಲ್ಲಿ ಮತ್ತೊಂದು ಸ್ಫೋಟ
Kabul City: ಅಫ್ಘಾನಿಸ್ತಾನದ ಕಾಬೂಲ್ ನಗರದಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದೆ ಎಂದು ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ.

ಕಾಬೂಲ್: ಅಫ್ಘಾನಿಸ್ತಾನದ ಕಾಬೂಲ್ ನಗರದಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಎಚ್ಚರಿಕೆ ಬಳಿಕ ಮೊದಲ ಸ್ಫೋಟ ಸಂಭವಿಸಿದೆ. ಕಾಬೂಲ್‌ನ ಗುಲೈ ಏರಿಯಾದಲ್ಲಿ ರಾಕೆಟ್ ದಾಳಿ ಮಾಹಿತಿ ಲಭ್ಯವಾಗಿದೆ. ಕಾಬೂಲ್ ಏರ್‌ಪೋರ್ಟ್ ಹೊರಭಾಗದಲ್ಲಿ 3 ಬಾರಿ ಸ್ಫೋಟ ಗಟಿಸಿದೆ. ಕಳೆದ 4 ದಿನದಲ್ಲಿ ಏರ್‌ಪೋರ್ಟ್ ಹೊರಗೆ 3 ಬಾರಿ ಸ್ಫೋಟ ನಡೆದಿದೆ. ಗುರುವಾರ ನಡೆದ ದಾಳಿಯಲ್ಲಿ 183 ಜನ ಮೃತಪಟ್ಟಿದ್ದರು. ಅಮೆರಿಕದ 13 ಯೋಧರು ಸೇರಿ 183 ಜನ ಮೃತಪಟ್ಟಿದ್ದರು. ಇದೀಗ ಮತ್ತೆ ಸ್ಫೋಟ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ಘಟನೆಯಲ್ಲಿ ಸುಮಾರು 150 ಮಂದಿ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ದೊರಕಿದೆ. ಟೋಲೊ ಸುದ್ದಿವಾಚಕ ಟ್ವೀಟ್ ಮೂಲಕ ಈ ಬಗ್ಗೆ ಹೇಳಿದ್ದಾರೆ. ಈ ಕೃತ್ಯದ ಹಿಂದೆ ಐಸಿಸ್ ಸಂಚು ಇರುವ ಬಗ್ಗೆ ಮೂಲಗಳಿಂದ ಮಾಹಿತಿ ಲಭಿಸಿದೆ.
ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ನಲ್ಲಿ ಎರಡು ದಿನಗಳ ಹಿಂದೆ ಬಾಂಬ್ ಸ್ಫೋಟ ಸಂಭವಿಸಿತ್ತು. ಎರಡು ಆತ್ಮಾಹುತಿ ಬಾಂಬ್ಗಳು ಸ್ಫೋಟಿಸಿದ ನಂತರ ಫ್ರಾನ್ಸ್ ಪ್ರಜೆಯೊಬ್ಬರು ವಿಮಾನ ನಿಲ್ದಾಣದಿಂದ ದೂರ ಸರಿಯುವಂತೆ ಜನರನ್ನು ಎಚ್ಚರಿಸುತ್ತಿದ್ದರು. ಈ ವೇಳೆಯೇ ಅಲ್ಲಿ ಮತ್ತೊಂದು ಬಾಂಬ್ ಸ್ಫೋಟಿಸಿದ್ದು, ಜನರು ಭಯಭೀತರಾಗಿದ್ದರು. ವಿಮಾನ ನಿಲ್ದಾಣದಲ್ಲಿ ಮತ್ತೊಂದು ಬಾಂಬ್ ಸ್ಫೋಟಿಸುವ ಸಾಧ್ಯತೆಯಿದೆ. ಎಲ್ಲರೂ ವಿಮಾನ ನಿಲ್ದಾಣದ ಗೇಟ್ಗಳಿಂದ ದೂರ ಸರಿಯಿರಿ ಎಂದು ಫ್ರಾನ್ಸ್ ಪ್ರಜೆ ಜನರಿಗೆ ಎಚ್ಚರಿಕೆ ನೀಡುತ್ತಿದ್ದರು. ಈ ಎಚ್ಚರಿಕೆಯ ನಡುವೆಯೇ ಮತ್ತೊಂದು ಬಾಂಬ್ ಸ್ಫೋಟಿಸಿತ್ತು.
ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸಿ ಹಲವರ ಸಾವಿಗೆ ಕಾರಣವಾಗಿರುವ ಉಗ್ರರು ಮುಂದಿನ 24 ರಿಂದ 36 ಗಂಟೆಯೊಳಗೆ ಮತ್ತೊಮ್ಮೆ ದಾಳಿ ನಡೆಸುವ ಸಾಧ್ಯತೆ ದಟ್ಟವಾಗಿದೆ ಎಂದು ಈ ಮೊದಲೇ ಅಮೆರಿಕ ಅಂದಾಜಿಸಿತ್ತು. ಈ ಸೂಚನೆಯ ಬೆನ್ನಲ್ಲಿ ಅಮೆರಿಕ ರಾಯಭಾರ ಕಚೇರಿ ಬಳಿ ಯಾವ ಕಾರಣಕ್ಕೂ ತೆರಳಬೇಡಿ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆಯ ಮತ್ತು ಊಹೆಯ ಬೆನ್ನಲ್ಲಿ ಇದೀಗ ಮತ್ತೊಂದು ಬಾಂಬ್ ಸ್ಫೋಟವಾಗಿದೆ. ತಾಲಿಬಾನಿಗಳ ಕೈವಶವಾಗಿರುವ ಅಫ್ಘಾನಿಸ್ತಾನದಲ್ಲಿ ಐಸಿಸ್-ಕೆ ಉಗ್ರರ ಉಪಟಳ ಶುರುವಾಗಿರುವುದರಿಂದ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದ್ದು, ಯಾವ ಕ್ಷಣದಲ್ಲಿ ಏನು ಅನಾಹುತ ಆಗುವುದೋ ಎಂದು ಭಯದಲ್ಲೇ ಸಮಯ ಕಳೆಯುವ ಪರಿಸ್ಥಿತಿ ಉದ್ಭವಿಸಿದೆ.
ಜತೆಗೆ, ಐಸಿಸ್ ಉಗ್ರರ ವಿರುದ್ಧ ಪ್ರತೀಕಾರ ಮುಂದುವರೆಸುವ ಸೂಚನೆ ನೀಡಿದ ಜೋ ಬೈಡನ್, ಘೋರ ದಾಳಿಯಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡುವುದಿಲ್ಲ. ಉಗ್ರರ ಮೇಲಿನ ಡ್ರೋನ್ ಅಟ್ಯಾಕ್ ಇದೇ ಕೊನೆಯಲ್ಲ. ಇನ್ನೂ ಶಿಕ್ಷೆ ಎದುರಿಸುವುದು ಬಾಕಿ ಇದೆ. ಅಮೇರಿಕಾ ಸೇನೆಯನ್ನು ಟಾರ್ಗೆಟ್ ಮಾಡಿದವರು ತಕ್ಕ ಬೆಲೆ ತೆರಲೇಬೇಕು. ನಾವು ಉಗ್ರರ ಬೇಟೆಯಾಡುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು. ಒಟ್ಟಿನಲ್ಲಿ, ಅಭದ್ರ, ಆತಂಕ, ಅಸುರಕ್ಷಿತ ಸ್ಥಿತಿಯಲ್ಲಿ ಅಫ್ಘಾನಿಸ್ತಾನ ದಿನ ದೂಡುತ್ತಿದೆ.
ಇದನ್ನೂ ಓದಿ: Tv9 Exclusive: ಭಾರತ, ಕಾಶ್ಮೀರದ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದೆ: ತಾಲಿಬಾನ್ ವಕ್ತಾರ ಸುಹೇಲ್ ಶಾಹಿನ್ ಸಂದರ್ಶನ
Afghanistan: ತಾಲಿಬಾನ್ ವಶದಲ್ಲಿದೆ ಆಧುನಿಕ ಶಸ್ತ್ರಾಸ್ತ್ರಗಳು; ಅವುಗಳು ಯಾವುವು? ಬಳಕೆ ಹೇಗೆ? ಭಾರತಕ್ಕೆ ಏನು ಹಾನಿ?
(Afghanistan another bomb explosive blast took place near Kabul City)
Published On - 6:10 pm, Sun, 29 August 21