Afghanistan Updates: ತಾಲಿಬಾನ್​ ಸಂಘಟನೆಯ ಹುಟ್ಟೂರು ಕಂದಹಾರ್​ನಲ್ಲೇ ತಾಲಿಬಾನಿಗಳ ವಿರುದ್ಧ ಜನಾಕ್ರೋಶ

ತಾಲಿಬಾನ್ ಸಂಘಟನೆಯಲ್ಲಿ ಇರುವ ನಾಯಕರಲ್ಲಿ ಬಹುತೇಕರು ಕಂದಹಾರ್ ಮೂಲದವರು. ಆದರೆ, ಈಗ ತಾಲಿಬಾನ್ ಹುಟ್ಟೂರಿನಲ್ಲಿ ತಾಲಿಬಾನ್‌ ಸಂಘಟನೆಯ ದಬ್ಬಾಳಿಕೆ, ದೌರ್ಜನ್ಯ ಮಿತಿಮೀರಿ ಹೋಗಿದೆ. ಇದೆಲ್ಲವನ್ನೂ ವಿಶ್ವ ಸಮುದಾಯ ಮೂಕ ಪ್ರೇಕ್ಷಕನಾಗಿ ನೋಡುತ್ತಾ ಕುಳಿತಿದೆ.

Afghanistan Updates: ತಾಲಿಬಾನ್​ ಸಂಘಟನೆಯ ಹುಟ್ಟೂರು ಕಂದಹಾರ್​ನಲ್ಲೇ ತಾಲಿಬಾನಿಗಳ ವಿರುದ್ಧ ಜನಾಕ್ರೋಶ
ತಾಲಿಬಾನ್ (ಸಾಂದರ್ಭಿಕ ಚಿತ್ರ)
Follow us
S Chandramohan
| Updated By: ganapathi bhat

Updated on: Sep 15, 2021 | 6:39 PM

ದೆಹಲಿ: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಗರವನ್ನು ತಾಲಿಬಾನ್ ಉಗ್ರರು ತಮ್ಮ ವಶಕ್ಕೆ ತೆಗೆದುಕೊಂಡು ಇಂದಿಗೆ ಒಂದು ತಿಂಗಳು ಪೂರ್ತಿಯಾಗಿದೆ. ಒಂದು ತಿಂಗಳಲ್ಲಿ ತಾಲಿಬಾನಿಗಳ ಹಂಗಾಮಿ ಸರ್ಕಾರ ಆಸ್ತಿತ್ವಕ್ಕೆ ಬಂದಿದೆ. ಜೊತೆಗೆ ತಾಲಿಬಾನಿಗಳ ಅಂಧಾದುಂದಿ ದರ್ಬಾರ್ ಮುಂದುವರಿದಿದೆ. ಕಂದಹಾರ್​ನಲ್ಲಿ ಈಗ ಜನರನ್ನು ಮನೆ ಖಾಲಿ ಮಾಡುವಂತೆ ತಾಲಿಬಾನ್ ಕಟ್ಟಪ್ಪಣೆ ಹೊರಡಿಸಿದೆ. ಇದರ ವಿರುದ್ಧ ಜನರು ತಿರುಗಿಬಿದ್ದಿದ್ದಾರೆ. ಅಂತಾರಾಷ್ಟ್ರೀಯ ನೆರವಿಗಾಗಿ ತಾಲಿಬಾನ್ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಂಧಾ ದರ್ಬಾರ್ ಶುರುವಾಗಿ ಇಂದಿಗೆ ಒಂದು ತಿಂಗಳು ಪೂರ್ತಿಯಾಗಿದೆ. ಆಗಸ್ಟ್ 15ರ ಮಧ್ಯಾಹ್ನ ತಾಲಿಬಾನ್ ಉಗ್ರರು ರಾಜಧಾನಿ ಕಾಬೂಲ್‌ ಪ್ರವೇಶಿಸಿ ಪ್ರೆಸಿಡೆನ್ಸಿಯಲ್ ಪ್ಯಾಲೇಸ್ ಅನ್ನೇ ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ದಿಕ್ಕು ಕಾಣದಂತಾದ ಅಧ್ಯಕ್ಷ ಅಶ್ರಫ್ ಘನಿ ದಿಢೀರನೇ ದೇಶ ಬಿಟ್ಟು ಪಲಾಯನ ಮಾಡಿದ್ದರು. ಈ ಕರಾಳ ದಿನಕ್ಕೆ ಈಗ ಒಂದು ತಿಂಗಳು ಪೂರ್ತಿಯಾಗಿದೆ. ಈ ಒಂದು ತಿಂಗಳಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಕ್ರೂರ ಮುಖವನ್ನು ಜಗತ್ತು 20 ವರ್ಷಗಳ ಬಳಿಕ ಮತ್ತೊಮ್ಮೆ ನೋಡುತ್ತಿದೆ. ನಡು ರಸ್ತೆಯಲ್ಲಿ ಹತ್ಯೆ, ಕಲ್ಲು ಹೊಡೆದು ಸಾಯಿಸುವುದು, ಸಾರ್ವಜನಿಕವಾಗಿ ಜನರನ್ನು ನೇಣು ಹಾಕೋದು, ಶವಗಳ ಮೇಲೂ ಗುಂಡಿನ ಸುರಿಮಳೆಗೈಯುವ ವಿಕೃತಿಯನ್ನು ತಾಲಿಬಾನಿಗಳು ಕಳೆದೊಂದು ತಿಂಗಳಲ್ಲಿ ಪ್ರದರ್ಶಿಸಿದ್ದಾರೆ. ಮಹಿಳೆಯರ ಹಕ್ಕುಗಳನ್ನು ದಮನ ಮಾಡಿದ್ದಾರೆ. ಮಹಿಳೆಯರಿಗೆ ಸರ್ಕಾರದಲ್ಲಿ ಪ್ರಾತಿನಿಧ್ಯ ನೀಡಿಲ್ಲ. ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಯುವಕ- ಯುವತಿಯರ ಮಧ್ಯೆ ಪರದೆ ಹಾಕಿದೆ. ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಬರಲು ಭಯಪಡುತ್ತಿದ್ದಾರೆ. ಆರೋಗ್ಯ, ಶಿಕ್ಷಣ, ಏರ್ ಪೋರ್ಟ್ ಸೇರಿದಂತೆ ಕೆಲ ಇಲಾಖೆಗಳಲ್ಲಿ ಮಾತ್ರವೇ ಮಹಿಳೆಯರು ಉದ್ಯೋಗಕ್ಕೆ ವಾಪಸ್ ಬಂದಿದ್ದಾರೆ. ಮಹಿಳಾ ಹಕ್ಕುಗಳ ದಮನದ ವಿರುದ್ಧ ಮಹಿಳೆಯರೇ ಬೀದಿಗಿಳಿದು ಹೋರಾಟ ಮಾಡಿದ್ದಾರೆ.

ಈಗ ಕಂದಹಾರ್​ನಲ್ಲಿ ಜನರೆಲ್ಲಾ ತಮ್ಮ ಮನೆಗಳನ್ನು ಖಾಲಿ ಮಾಡಬೇಕೆಂದು ತಾಲಿಬಾನ್ ಉಗ್ರರು ಕಟ್ಟಪ್ಪಣೆ ಹೊರಡಿಸಿದ್ದಾರೆ. ಜನರು ಮನೆ ಖಾಲಿ ಮಾಡಿದರೆ, ಆ ಮನೆಗಳಿಗೆ ತಮ್ಮ ಕುಟುಂಬಸ್ಥರನ್ನು ತಂದು ಇರಿಸುವುದು ತಾಲಿಬಾನ್ ಉಗ್ರರ ಯೋಚನೆ ಆಗಿದೆ. ಜನರನ್ನು ಮನೆಗಳಿಂದ ಖಾಲಿ ಮಾಡಿಸಿ, ನಡುಬೀದಿಗೆ ತಳ್ಳುವ ಹೀನಕೃತ್ಯಕ್ಕೆ ತಾಲಿಬಾನ್ ಮುಂದಾಗಿದೆ. ಇದು ಕಂದಹಾರ್ ಜನರನ್ನು ರೊಚ್ಚಿಗೇಳಿಸಿದೆ. ತಾಲಿಬಾನ್ ಕಟ್ಟಪ್ಪಣೆಯ ವಿರುದ್ಧ ಇಂದು ಕಂದಹಾರ್ ಜನರೇ ಬೀದಿಗಿಳಿದು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಮನೆಗಳನ್ನು ಖಾಲಿ ಮಾಡಲ್ಲ ಎಂದು ಘೋಷಣೆ ಕೂಗಿದ್ದಾರೆ. ಕಂದಹಾರ್ ನಗರ ತಾಲಿಬಾನ್ ಉಗ್ರಗಾಮಿ ಸಂಘಟನೆಯ ಹುಟ್ಟೂರು. ತಾಲಿಬಾನ್ ಸಂಘಟನೆಯಲ್ಲಿ ಇರುವ ನಾಯಕರಲ್ಲಿ ಬಹುತೇಕರು ಕಂದಹಾರ್ ಮೂಲದವರು. ಆದರೆ, ಈಗ ತಾಲಿಬಾನ್ ಹುಟ್ಟೂರಿನಲ್ಲಿ ತಾಲಿಬಾನ್‌ ಸಂಘಟನೆಯ ದಬ್ಬಾಳಿಕೆ, ದೌರ್ಜನ್ಯ ಮಿತಿಮೀರಿ ಹೋಗಿದೆ. ಇದೆಲ್ಲವನ್ನೂ ವಿಶ್ವ ಸಮುದಾಯ ಮೂಕ ಪ್ರೇಕ್ಷಕನಾಗಿ ನೋಡುತ್ತಾ ಕುಳಿತಿದೆ.

ಮತ್ತೊಂದೆಡೆ ಅಫ್ಘನ್ ರಾಜಧಾನಿ ಕಾಬೂಲ್‌ನಲ್ಲಿ ಜನರು ಈ ಮೊದಲು ತಮ್ಮ ಮನೆಯ ಸಾಮಗ್ರಿಗಳನ್ನ ಮಾರಾಟಕ್ಕಿಟ್ಟಿದ್ದರು. ಆದರೆ ಈಗ ಮನೆಗಳನ್ನು ಮಾರಾಟಕ್ಕಿಟ್ಟಿದ್ದಾರೆ. ಆದರೆ, ಮನೆಗಳ ಬೆಲೆಯೇ ಕುಸಿದು ಹೋಗಿದೆ. ಮನೆಗಳನ್ನು ಮಾರಾಟಕ್ಕಿಟ್ಟಿದ್ದರೂ ಖರೀದಿ ಮಾಡುವವರೇ ಇಲ್ಲ. ಬ್ಯಾಂಕ್​ಗಳಲ್ಲಿ ವಾರಕ್ಕೆ 20 ಸಾವಿರ ಅಫ್ಘನಿ ಹಣವನ್ನು ಮಾತ್ರ ಪಡೆಯಲು ಅವಕಾಶ ಇದೆ. ಬ್ಯಾಂಕ್‌ಗೆ ಹೋದರೂ ಹಣ ವಾಪಸ್ ಸಿಗುತ್ತಿಲ್ಲ. ಹಣ ಇಲ್ಲದೇ, ಜನರು ಪರದಾಡುತ್ತಿದ್ದಾರೆ.

ಅಫ್ಘನ್​ನಲ್ಲಿ ಆಹಾರದ ತುರ್ತು ಪರಿಸ್ಥಿತಿ! ಅಫ್ಘಾನಿಸ್ತಾನದಲ್ಲಿ ಈಗ ಆಹಾರದ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು 40 ಲಕ್ಷ ಜನರು ಆಹಾರದ ಕೊರತೆ ಎದುರಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಆಹಾರದ ಕೊರತೆ ಎದುರಾಗಿದೆ. ಜಾನುವಾರಗಳಿಗೂ ಆಹಾರದ ಕೊರತೆ ಎದುರಾಗಿದೆ. ಅಫ್ಘಾನಿಸ್ತಾನದ 34 ಪ್ರಾಂತ್ಯಗಳಲ್ಲಿ ಶೇಕಡಾ 25 ರಷ್ಟು ಬರಗಾಲ ಇದೆ. ಶೇಕಡಾ 70 ರಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸ ಮಾಡುತ್ತಿದ್ದಾರೆ. ಈ ಜನರು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಆತಂಕ ಇದೆ ಎಂದು ವಿಶ್ವಸಂಸ್ಥೆ ಹೇಳಿದೆ. ಅಫ್ಘಾನಿಸ್ತಾನಕ್ಕೆ ತುರ್ತಾಗಿ 36 ಮಿಲಿಯನ್ ಡಾಲರ್ ಹಣದ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಕಾಬೂಲ್​ನಲ್ಲಿ ಭಾರತೀಯನ ಕಿಡ್ನ್ಯಾಪ್ ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್​ನಲ್ಲಿ ಭಾರತ ಮೂಲದ ಬನ್ಸರಿ ಲಾಲ್ ಎಂಬಾತನನ್ನು ತಾಲಿಬಾನಿಗಳು ಕಿಡ್ನ್ಯಾಪ್ ಮಾಡಿದ್ದಾರೆ. ಇಂದು ಬೆಳಿಗ್ಗೆ ಮನೆಯಿಂದ ಕಚೇರಿಗೆ ಹೋಗುತ್ತಿದ್ದಾಗ, ಬನ್ಸರಿ ಲಾಲ್ ಕಾರಿಗೆ ಡಿಕ್ಕಿ ಹೊಡೆಯಲಾಗಿದೆ. ಬಳಿಕ ಗನ್ ಪಾಯಿಂಟ್​ನಲ್ಲಿ ಬನ್ಸರಿ ಲಾಲ್ ಎಂಬವರನ್ನು ಕಿಡ್ನ್ಯಾಪ್ ಮಾಡಲಾಗಿದೆ. ಈ ಬಗ್ಗೆ ದೂರು ದಾಖಲಾಗಿದೆ. ಇದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ತಾಲಿಬಾನ್ ಹೇಳಿದೆ.

ಅಹಮದ್ ಮಸೂದ್‌ಗೆ ಯೂರೋಪ್‌ ಆಹ್ವಾನ ಪಂಜಶೀರ್ ಪ್ರಾಂತ್ಯದ ನಾಯಕ, ರೆಸಿಸ್ಟೆನ್ಸ್ ಫ್ರಂಟ್ ಕಮ್ಯಾಂಡರ್ ಅಹಮದ್ ಮಸೂದ್‌ಗೆ ಯೂರೋಪಿಯನ್ ಯೂನಿಯನ್ ಪಾರ್ಲಿಮೆಂಟ್ ಭಾಷಣ ಮಾಡಲು ಆಹ್ವಾನ ನೀಡಿದೆ. ಯೂರೋಪಿಯನ್ ಯೂನಿಯನ್ ಪಾರ್ಲಿಮೆಂಟ್, ಲೇಟ್ ಕಾಮ್ರೇಡ್ ಮಸೂದ್‌ ಶೌರ್ಯ, ಹೋರಾಟವನ್ನು ಶ್ಲಾಘಿಸಿದೆ. ಪುತ್ರ ಅಹಮದ್ ಮಸೂದ್‌ಗೆ ಯೂರೋಪಿಯನ್ ಯೂನಿಯನ್ ಪಾರ್ಲಿಮೆಂಟ್ ಹಾಗೂ ಕೌನ್ಸಿಲ್​ಗೆ ಭೇಟಿ ನೀಡಿ ಭಾಷಣ ಮಾಡಲು ಆಹ್ವಾನ ನೀಡಿದೆ.

ತಾಲಿಬಾನ್-ಚೀನಾ ಮಾತುಕತೆ ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವ ಅಮೀರ್ ಖಾನ್ ಮುಟ್ಟಾಕಿಯನ್ನು ಅಫ್ಘಾನಿಸ್ತಾನದ ಚೀನಾ ರಾಯಭಾರಿ ವಾಂಗ್ ಯೂ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಚೀನಾ ದೇಶವು ಅಫ್ಘಾನಿಸ್ತಾನಕ್ಕೆ 15 ಮಿಲಿಯನ್ ಡಾಲರ್ ನೆರವು ನೀಡುವ ಬಗ್ಗೆ ಇಬ್ಬರೂ ಚರ್ಚೆ ನಡೆಸಿದ್ದಾರೆ. ಚೀನಾ ದೇಶವು ಅಫ್ಘಾನಿಸ್ತಾನಕ್ಕೆ ತನ್ನ ಸಹಕಾರ ನೀಡುವುದನ್ನು ಮುಂದುವರಿಸಲಿದೆ ಎಂದು ಚೀನಾ ರಾಯಭಾರಿ ವಾಂಗ್ ಯೂ ಹೇಳಿದ್ದಾರೆ. ಜೊತೆಗೆ ತಾಲಿಬಾನ್ ವಿದೇಶಾಂಗ ಮಂತ್ರಿ ಅಮೀರ್ ಖಾನ್ ಮುಟ್ಟಾಕಿ, ಅಫ್ಘಾನಿಸ್ತಾನದಲ್ಲಿರುವ ಪಾಕಿಸ್ತಾನದ ರಾಯಭಾರಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾನೆ.

ವಿಶೇಷ ವರದಿ: ಎಸ್. ಚಂದ್ರಮೋಹನ್, ನೇಷನಲ್ ಬ್ಯೂರೋ ಮುಖ್ಯಸ್ಥರು, ಟಿವಿ9 ಕನ್ನಡ

ಇದನ್ನೂ ಓದಿ: ಅಫ್ಘಾನ್ ಆರ್ಥಿಕತೆಗೆ ತೀವ್ರ ಹೊಡೆತ; ಅಮರುಲ್ಲಾ ಸಲೇಹ್ ನಿವಾಸದಿಂದ ಹಣ, ಚಿನ್ನ ವಶಪಡಿಸಿಲ್ಲ ಎಂದ ತಾಲಿಬಾನ್

ಇದನ್ನೂ ಓದಿ: ಮುಲ್ಲಾ ಬರಾದಾರ್ ಹತ್ಯೆ ಸುದ್ದಿಯನ್ನು ಅಲ್ಲಗಳೆದ ತಾಲಿಬಾನ್; ಪುರಾವೆಗೆ ಆಡಿಯೋ ಮೆಸೇಜ್ ಬಿಡುಗಡೆ

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ