ಕಾಬೂಲ್‌ನಲ್ಲಿ ಬಂದೂಕು ತೋರಿಸಿ ಭಾರತ ಮೂಲದ ವ್ಯಕ್ತಿಯ ಅಪಹರಣ

"ಅಫ್ಘಾನ್-ಹಿಂದೂ ಸಿಖ್ ಸಮುದಾಯದಿಂದ ಬನ್ಸ್ರಿ ಲಾಲ್ ಅರೆಂದೆಹ್ ಅವರನ್ನು ನಿನ್ನೆ ಬೆಳಿಗ್ಗೆ 8 ಗಂಟೆಗೆ ತನ್ನ ಅಂಗಡಿಯ ಸಮೀಪದಿಂದ ಅಪಹರಿಸಲಾಗಿದೆ ಎಂದು ಅವರು ನನಗೆ ಮಾಹಿತಿ ನೀಡಿದ್ದಾರೆ. ಅವರು ಔಷಧ ಉತ್ಪನ್ನಗಳ ವ್ಯಾಪಾರದಲ್ಲಿ ನಿರತರಾಗಿದ್ದು ಮುನ್ನ ಅಂಗಡಿಯಲ್ಲಿ ತನ್ನ ಸಿಬ್ಬಂದಿಯೊಂದಿಗೆ ಇದ್ದಾಗ ಅಪಹರಣಕ್ಕೊಳಗಾಗಿದ್ದಾರೆ ಎಂದು ಚಾಂದೋಕ್ ಹೇಳಿದ್ದಾರೆ

ಕಾಬೂಲ್‌ನಲ್ಲಿ ಬಂದೂಕು ತೋರಿಸಿ ಭಾರತ ಮೂಲದ ವ್ಯಕ್ತಿಯ ಅಪಹರಣ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Sep 15, 2021 | 1:09 PM

ಕಾಬೂಲ್: ಅಫ್ಘಾನಿಸ್ತಾನದಲ್ಲಿರುವ ಭಾರತದ ಪ್ರಜೆ, 50ರ ಹರೆಯದ ಬನ್ಸ್ರಿ ಲಾಲ್ ಅರೆಂದೆಹ್ (Bansri Lal Arendeh) ಎಂಬಾತನನ್ನು ಕಾಬೂಲ್‌ನಲ್ಲಿ ಬಂದೂಕು ತೋರಿಸಿ ಅಪಹರಿಸಲಾಗಿದೆ ಎಂದು ಇಂಡಿಯನ್ ವರ್ಲ್ಡ್ ಫೋರಂ (Indian World Forum) ಅಧ್ಯಕ್ಷ ಪುನೀತ್ ಸಿಂಗ್ ಚಾಂದೋಕ್ ಹೇಳಿದ್ದಾರೆ. “ನಾನು ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮಾಹಿತಿ ನೀಡಿದ್ದೇನೆ ಮತ್ತು ಈ ನಿಟ್ಟಿನಲ್ಲಿ ಅವರ ತಕ್ಷಣದ ಮಧ್ಯಸ್ಥಿಕೆ ಮತ್ತು ಸಹಾಯವನ್ನು ಕೋರಿದ್ದೇನೆ” ಎಂದು ಪುನೀತ್ ಸಿಂಗ್ ಚಾಂದೋಕ್ ಹೇಳಿದರು.

“ಅಫ್ಘಾನ್-ಹಿಂದೂ ಸಿಖ್ ಸಮುದಾಯದಿಂದ ಬನ್ಸ್ರಿ ಲಾಲ್ ಅರೆಂದೆಹ್ ಅವರನ್ನು ನಿನ್ನೆ ಬೆಳಿಗ್ಗೆ 8 ಗಂಟೆಗೆ ತನ್ನ ಅಂಗಡಿಯ ಸಮೀಪದಿಂದ ಅಪಹರಿಸಲಾಗಿದೆ ಎಂದು ಅವರು ನನಗೆ ಮಾಹಿತಿ ನೀಡಿದ್ದಾರೆ. ಅವರು ಔಷಧ ಉತ್ಪನ್ನಗಳ ವ್ಯಾಪಾರದಲ್ಲಿ ನಿರತರಾಗಿದ್ದು ಮುನ್ನ ಅಂಗಡಿಯಲ್ಲಿ ತನ್ನ ಸಿಬ್ಬಂದಿಯೊಂದಿಗೆ ಇದ್ದಾಗ ಅಪಹರಣಕ್ಕೊಳಗಾಗಿದ್ದಾರೆ ಎಂದು ಚಾಂದೋಕ್ ಹೇಳಿದ್ದಾರೆ.

ಅವರು ತನ್ನ ಸಿಬ್ಬಂದಿಯೊಂದಿಗೆ ಅಪಹರಿಸಲ್ಪಟ್ಟಿದ್ದು ಅವರ ಜತೆ ಇದ್ದ ಸಿಬ್ಬಂದಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅವರನ್ನು ಅಪಹರಣಕಾರರು ನಿಷ್ಕರುಣೆಯಿಂದ ಥಳಿಸಿದರು. ಕಾಬೂಲ್‌ನ 11 ನೇ ಪೊಲೀಸ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ಪುನೀತ್ ಸಿಂಗ್ ಚಾಂದೋಕ್ ಹೇಳಿದ್ದಾರೆ.

ಬನ್ಸ್ರಿ ಲಾಲ್ ಅರೆಂದೆಹ್ ಅವರ ಕುಟುಂಬ ದೆಹಲಿ ಎನ್‌ಸಿಆರ್‌ನಲ್ಲಿ ವಾಸಿಸುತ್ತಿದೆ. ಸ್ಥಳೀಯ ಸಮುದಾಯವು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದ್ದು ಸ್ಥಳೀಯ ತನಿಖಾ ಸಂಸ್ಥೆಗಳೊಂದಿಗೆ ಪ್ರಕರಣವನ್ನು ದಾಖಲಿಸಲಾಗಿದೆ. ಅರೆಂದೆಹ್ ಪತ್ತೆಗಾಗಿ ಆತನ ಸ್ನೇಹಿತರು ವಿವಿಧ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಕಳ್ಳರ ಕೈ ಕಟ್, ಕಾನೂನು ಬಾಹಿರ ಸಂಭೋಗ ಮಾಡಿದವರ ಮೇಲೆ ಕಲ್ಲೆಸೆತ: ಶಿಕ್ಷೆ ರೂಪಿಸಲೆಂದೇ ಸಚಿವಾಲಯ

(Afghanistan-origin Indian national abducted at gunpoint in Kabul)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ