AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಗ್​ನಲ್ಲಿ ರೈಫಲ್, ಊಟದ ಡಬ್ಬಿಯಲ್ಲಿ ಮದ್ದುಗುಂಡುಗಳು ಪತ್ತೆ, ಹೈಸ್ಕೂಲ್ ವಿದ್ಯಾರ್ಥಿಯ ಬಂಧನ

ಬ್ಯಾಗ್​ನಲ್ಲಿ ರೈಫಲ್, ಊಟದ ಬಾಕ್ಸ್​ನಲ್ಲಿ ಮದ್ದುಗುಂಡುಗಳನ್ನು ತಂದಿದ್ದ ಶಾಲಾ ವಿದ್ಯಾರ್ಥಿಯನ್ನು ಬಂಧಿಸಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

ಬ್ಯಾಗ್​ನಲ್ಲಿ ರೈಫಲ್, ಊಟದ ಡಬ್ಬಿಯಲ್ಲಿ ಮದ್ದುಗುಂಡುಗಳು ಪತ್ತೆ,  ಹೈಸ್ಕೂಲ್ ವಿದ್ಯಾರ್ಥಿಯ ಬಂಧನ
ರೈಫಲ್​Image Credit source: NDTV
ನಯನಾ ರಾಜೀವ್
|

Updated on:May 23, 2023 | 9:10 AM

Share

ಬ್ಯಾಗ್​ನಲ್ಲಿ ರೈಫಲ್, ಊಟದ ಬಾಕ್ಸ್​ನಲ್ಲಿ ಮದ್ದುಗುಂಡುಗಳನ್ನು ತಂದಿದ್ದ ಶಾಲಾ ವಿದ್ಯಾರ್ಥಿಯನ್ನು ಬಂಧಿಸಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. AR-15 ಅರೆ-ಸ್ವಯಂಚಾಲಿತ ರೈಫಲ್ ಮತ್ತು ಮದ್ದುಗುಂಡುಗಳನ್ನು ಊಟದ ಬಾಕ್ಸ್‌ನಲ್ಲಿ ಬಚ್ಚಿಟ್ಟ ಆರೋಪದ ಮೇಲೆ US ಫೀನಿಕ್ಸ್‌ನಲ್ಲಿರುವ ಪ್ರೌಢಶಾಲಾ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ ಎಂದು CNN ವರದಿ ಮಾಡಿದೆ.

ಶಾಲಾ ಶಿಕ್ಷಕರು ಮಾಹಿತಿ ಮೇರೆಗೆ ವಿದ್ಯಾರ್ಥಿಯಿಂದ ಪೊಲೀಸತು ರೈಫಲ್ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಶಾಲೆಯ ಆವರಣದಲ್ಲಿ ರೈಫಲ್ ಇದೆ ಎನ್ನುವ ವಿಷಯ ತಿಳಿಯುತ್ತಿದ್ದಂತೆ ಶಾಲೆಯನ್ನು ಮುಚ್ಚಲಾಯಿತು. ಗಂಟೆಗಳಿಗೂ ಕಾಲ ಹೊರಗಿನಿಂದ ಯಾರೂ ಬರದಂತೆ ಶಾಲೆಯಿಂದ ಯಾರೂ ಹೊರಹೋಗದಂತೆ ನೋಡಿಕೊಳ್ಳಲಾಯಿತು.

ಮತ್ತಷ್ಟು ಓದಿ:ಬಂದೂಕಿನೊಂದಿಗೆ ಆಟ, ಮಾಜಿ ಬಿಗ್​ಬಾಸ್ ಸ್ಪರ್ಧಿ ವಿರುದ್ಧ ಪ್ರಕರಣ ದಾಖಲು

ಶಾಲೆಗೆ ರೈಫಲ್ ತಂದಿದ್ದಕ್ಕಾಗಿ ವಿದ್ಯಾರ್ಥಿಯನ್ನು ಬಂಧಿಸಲಾಯಿತು, ಊಟದ ಡಬ್ಬಿಯಲ್ಲಿ ಮದ್ದುಗುಂಡುಗಳು ಕೂಡ ಇದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ನಂತರ ಶಾಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಬಾಲಕನಿಗೆ ರೈಫಲ್ ಹೇಗೆ ಸಿಕ್ಕಿತು, ಅದನ್ನು ಶಾಲೆಗೆ ತಂದ ಉದ್ದೇಶ ಏನು ಎಂಬುದರ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:09 am, Tue, 23 May 23