Central Mexico: ಮೆಕ್ಸಿಕೋದಲ್ಲಿ ಭೀಕರ ಅಪಘಾತ; ಬಸ್ನಲ್ಲಿದ್ದ 19 ಮಂದಿ ಸ್ಥಳದಲ್ಲೇ ದುರ್ಮರಣ
Bus Crash: ಮಧ್ಯ ಮೆಕ್ಸಿಕೋದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಕನಿಷ್ಠ 19 ಮಂದಿ ಪ್ರಯಾಣಿಕರು ಅಸುನೀಗಿದ್ದಾರೆ.

ಮೆಕ್ಸಿಕೋ: ಮಧ್ಯ ಮೆಕ್ಸಿಕೋದ (Central Mexico) ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಬಸ್ ಒಂದು ಭೀಕರ ಅಪಘಾತಕ್ಕೀಡಾಗಿದೆ. ಬಸ್ ಮನೆಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 19 ಮಂದಿ ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೆಕ್ಸಿಕೋ ರಾಜ್ಯದ ಸ್ಥಳೀಯ ಧಾರ್ಮಿಕ ಮಂದಿರಕ್ಕೆ ತೆರಳುತ್ತಿದ್ದ ಬಸ್‌ನ ಬ್ರೇಕ್ ವಿಫಲವಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ. ಅಪಘಾತದ ಸಂಭವನೀಯ ಕಾರಣಗಳನ್ನು ರಾಜ್ಯ ಅಧಿಕಾರಿಗಳು ಇದುವರೆಗೆ ಬಹಿರಂಗಪಡಿಸಿಲ್ಲ.

ಅಪಘಾತಕ್ಕೀಡಾಗಿರುವ ಬಸ್ ಅನ್ನು ನೋಡುತ್ತಿರುವ ಸ್ಥಳೀಯರು (Credits: Reuters)

ಅಪಘಾತಕ್ಕೀಡಾಗಿರುವ ಬಸ್ನಲ್ಲಿ ತೆರವು ಕಾರ್ಯಾಚರಣೆ (Credits: Reuters)
ಗಾಯಾಳುಗಳನ್ನು ವಿಮಾನದ ಮೂಲಕ ಆಸ್ಪತ್ರೆಗಳಿಗೆ ವರ್ಗಾಯಿಸಲಾಗಿದೆ ಎಂದು ಸಹಾಯಕ ರಾಜ್ಯ ಆಂತರಿಕ ಕಾರ್ಯದರ್ಶಿ ರಿಕಾರ್ಡೊ ಡೆ ಲಾ ಕ್ರೂಜ್ ಮುಸಲೆಮ್ ಹೇಳಿದ್ದಾರೆ. 10 ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿವೆ ಎಂದು ರಾಜ್ಯ ರೆಡ್‌ಕ್ರಾಸ್ ಹೇಳಿದೆ.
ಇದನ್ನೂ ಓದಿ:
MPI: ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ ದೇಶದ ಅತ್ಯಂತ ಬಡ ರಾಜ್ಯಗಳು; ಕರ್ನಾಟಕಕ್ಕೆ ಎಷ್ಟನೇ ಸ್ಥಾನ? ಇಲ್ಲಿದೆ ಮಾಹಿತಿ
ಬಿಗ್ ಬಾಸ್ ನಿರೂಪಕರ ಬದಲಾವಣೆ; ಹೊಸ ಜವಾಬ್ದಾರಿ ಹೊತ್ತುಕೊಂಡ ನಟಿ ರಮ್ಯಾ ಕೃಷ್ಣ




