ದುರ್ಗಾ ಪೂಜೆ ವೇಳೆ ಹಿಂಸಾಚಾರ; ಬಾಂಗ್ಲಾದೇಶದಲ್ಲಿ 29 ಹಿಂದೂ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ: ವರದಿ

Bangladesh Violence ಬಾಂಗ್ಲಾದೇಶದ ಚಿತ್ತಗಾಂಗ್ ವಿಭಾಗದ ಕುಮಿಲಾದ ದುರ್ಗಾ ಪೂಜಾ ಸ್ಥಳದಲ್ಲಿ ಧರ್ಮನಿಂದೆಯ ಆರೋಪವೆದ್ದ ಬೆನ್ನಲ್ಲೇ  ಆರಂಭವಾದ ಕೋಮು ಉದ್ವಿಗ್ನತೆಯ ಸಮಯದಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ ಮತ್ತು ಪೊಲೀಸರ ನಡುವೆ ಘರ್ಷಣೆಗೆ ಕಾರಣವಾಗಿದೆ.

ದುರ್ಗಾ ಪೂಜೆ ವೇಳೆ ಹಿಂಸಾಚಾರ; ಬಾಂಗ್ಲಾದೇಶದಲ್ಲಿ 29 ಹಿಂದೂ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ: ವರದಿ
ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯ ಬೆಂಕಿಗಾಹುತಿಯಾಗಿರುವುದು (ಕೃಪೆ ಟ್ವಿಟರ್/ಇಸ್ಕಾನ್)
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Oct 18, 2021 | 6:44 PM

ಢಾಕಾ: ಧರ್ಮನಿಂದನೆ ಮಾಡಲಾಗಿದೆ ಎಂಬ ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟ್​ನಿಂದಾಗಿ ಬಾಂಗ್ಲಾದೇಶದಲ್ಲಿ ಕಳೆದ ವಾರ ದುರ್ಗಾ ಪೂಜೆಯ ಸಂದರ್ಭದಲ್ಲಿ ದೇವಾಲಯದ ಮೇಲೆ ದಾಳಿ ನಡೆದಿದ್ದು ಈವರೆಗೆ ಕನಿಷ್ಠ 29 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ರಾಜಧಾನಿ ಢಾಕಾದಿಂದ ಸುಮಾರು 255 ಕಿಮೀ ದೂರದಲ್ಲಿರುವ ಹಳ್ಳಿಯಲ್ಲಿ ಭಾನುವಾರ ತಡರಾತ್ರಿ ಬೆಂಕಿ ಹಚ್ಚಲಾಗಿದೆ ಎಂದು bdnews24.com ವರದಿ ಮಾಡಿದೆ. ಫೇಸ್‌ಬುಕ್ ಪೋಸ್ಟ್‌ನಲ್ಲಿ ಹಳ್ಳಿಯ ಹಿಂದೂ ಯುವಕ “ಧರ್ಮವನ್ನು ಅವಹೇಳನ ಮಾಡಿದ್ದಾರೆ” ಎಂಬ ವದಂತಿಯಿಂದ ಉದ್ವಿಗ್ನತೆ ಹೆಚ್ಚಾದ ಕಾರಣ ಪೊಲೀಸರು ಮೀನುಗಾರರ ಕಾಲೋನಿಗೆ ಧಾವಿಸಿದರು ಎಂದು ಪೊಲೀಸ್ ಸುಪರಿಟೆಂಡೆಟ್ ಮೊಹಮ್ಮದ್ ಖಮರುಜ್ಜಮನ್ ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆ ವ್ಯಕ್ತಿಯ ಮನೆಯ ಸುತ್ತಲೂ ಪೊಲೀಸರು ಕಾವಲು ಕಾಯುತ್ತಿದ್ದಂತೆ, ದಾಳಿಕೋರರು ಹತ್ತಿರದ ಇತರ ಮನೆಗಳಿಗೆ ಬೆಂಕಿ ಹಚ್ಚಿದರು ಎಂದು ವರದಿ ಹೇಳಿದೆ. ಅಗ್ನಿಶಾಮಕ ಸೇವಾ ನಿಯಂತ್ರಣ ಕೊಠಡಿ ಪ್ರಕಾರ 29 ವಸತಿ ಮನೆಗಳು, ಎರಡು ಅಡುಗೆಕೋಣೆಗಳು, ಎರಡು ಕೊಟ್ಟಿಗೆಗಳು ಮತ್ತು ಮಾಜಿಪಾರದಲ್ಲಿ 15 ವಿವಿಧ ಜನರಿಗೆ ಸೇರಿದ 20 ಒಣಹುಲ್ಲುಗಳ ರಾಶಿ ಸುಟ್ಟುಹೋಗಿದೆ. ಅಲ್ಲಿದ್ದ ಜನರ ಗುಂಪು ಈ ಬೆಂಕಿ ಹಚ್ಚಿದೆ ಎಂದು ಶಂಕಿಸಲಾಗಿದೆ .

ಅಗ್ನಿಶಾಮಕ ದಳವು ರಾತ್ರಿ 8:45 ಕ್ಕೆ ಬೆಂಕಿ ಹಚ್ಚಿರುವ ಸಂಗತಿ ತಿಳಿದು ಬೆಳಗ್ಗೆ 4:10ಕ್ಕೆ ಅದನ್ನು ನಂದಿಸಿತು ಎಂದು ವರದಿ ಹೇಳಿದೆ. ಯಾವುದೇ ಸಾವುನೋವುಗಳ ಬಗ್ಗೆ ತಕ್ಷಣದ ವರದಿಗಳಿಲ್ಲ.

ಬಾಂಗ್ಲಾದೇಶದ ಚಿತ್ತಗಾಂಗ್ ವಿಭಾಗದ ಕುಮಿಲಾದ ದುರ್ಗಾ ಪೂಜಾ ಸ್ಥಳದಲ್ಲಿ ಧರ್ಮನಿಂದೆಯ ಆರೋಪವೆದ್ದ ಬೆನ್ನಲ್ಲೇ  ಆರಂಭವಾದ ಕೋಮು ಉದ್ವಿಗ್ನತೆಯ ಸಮಯದಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ ಮತ್ತು ಪೊಲೀಸರ ನಡುವೆ ಘರ್ಷಣೆಗೆ ಕಾರಣವಾಗಿದೆ. ಕುಮಿಲಾ, ಚಾಂದಪುರ, ಚಟ್ಟೋಗ್ರಾಮ್, ಕಾಕ್ಸ್ ಬಜಾರ್, ಬಂದರ್ಬನ್, ಮೌಲ್ವಿಬಜಾರ್, ಗಾಜಿಪುರ, ಚಪೈನವಾಬ್ಗಂಜ್, ಫೆನಿ ಮತ್ತು ಇತರ ಜಿಲ್ಲೆಗಳಲ್ಲಿ ಈ ಗಲಭೆ ನಡೆದಿದೆ.

ದಾಳಿಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಕೋಮು ದ್ವೇಷದ ಹರಡುವಿಕೆಗೆ ಸಂಬಂಧಿಸಿದಂತೆ ಹತ್ತಾರು ಜನರನ್ನು ಬಂಧಿಸಲಾಗಿದೆ ಎಂದು ವರದಿ ಹೇಳಿದೆ.

ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಯೂನಿಟಿ ಕೌನ್ಸಿಲ್, ಚಾಂದ್‌ಪುರ್ ಮತ್ತು ನೋಖಾಲಿಯಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ ನಾಲ್ಕು ಹಿಂದೂ ಭಕ್ತರು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದೆ.

ಏತನ್ಮಧ್ಯೆ, ಗಣ್ಯ ಅಪರಾಧ ವಿರೋಧಿ ಪಡೆ ರಾಪಿಡ್ ಆಕ್ಷನ್ ಬೆಟಾಲಿಯನ್ (RAB) ಢಾಾಕಾದಿಂದ ಸುಮಾರು 155 ಕಿಮೀ ದೂರದಲ್ಲಿರುವ ಫೆನಿಯಲ್ಲಿರುವ ಹಿಂದೂ ಸಮುದಾಯಕ್ಕೆ ಸೇರಿದ ದೇವಸ್ಥಾನಗಳು ಮತ್ತು ಅಂಗಡಿಗಳ ಲೂಟಿ ಮತ್ತು ಧ್ವಂಸಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರನ್ನು ಬಂಧಿಸಿದೆ.

“ಕೋಮುಗಲಭೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಜನರನ್ನು ಪ್ರಚೋದಿಸಿದ ಕಾರಣ ಅವರನ್ನು ಬಂಧಿಸಲಾಗಿದೆ. ಅವರನ್ನು ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ” ಎಂದು ಅರೆಸೇನಾ ಪಡೆಯ ಕಾನೂನು ಮತ್ತು ಮಾಧ್ಯಮ ವಿಭಾಗದ ಸಹಾಯಕ ನಿರ್ದೇಶಕ ಇಮ್ರಾನ್ ಖಾನ್ ಹೇಳಿದರು. ಬಾಂಗ್ಲಾದೇಶದ ಪ್ರಮುಖ ಹಕ್ಕುಗಳ ಗುಂಪನ್ನು ಉಲ್ಲೇಖಿಸಿ ಐನ್ ಓ ಸಲೀಶ್ ಕೇಂದ್ರ (ASK), ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೇಲೆ 3,679 ದಾಳಿಗಳು ಜನವರಿ 2013 ಮತ್ತು ಈ ವರ್ಷದ ಸೆಪ್ಟೆಂಬರ್ ನಡುವೆ ನಡೆದಿದೆ ಎಂದು ಹೇಳಿರುವುದಾಗಿ bdnews24.com ವರದಿ ಮಾಡಿದೆ.

ಈ ದಾಳಿಗಳಲ್ಲಿ ಹಿಂದೂ ಸಮುದಾಯದ 559 ಮನೆಗಳು ಮತ್ತು 442 ಅಂಗಡಿಗಳು ಮತ್ತು ವ್ಯಾಪಾರಸಂಸ್ಥೆಗಳ ಮೇಲೆ ದಾಂಧಲೆ ನಡೆದಿದೆ. ಇದೇ ಅವಧಿಯಲ್ಲಿ ಕನಿಷ್ಠ 1,678 ವಿಧ್ವಂಸಕ ಕೃತ್ಯ ಮತ್ತು ಹಿಂದೂ ದೇವಾಲಯಗಳು, ವಿಗ್ರಹಗಳು ಮತ್ತು ಪೂಜಾ ಸ್ಥಳಗಳ ಮೇಲೆ ಬೆಂಕಿ ಹಚ್ಚಿದ ಪ್ರಕರಣಗಳು ವರದಿಯಾಗಿವೆ ಎಂದು ಅದು ಹೇಳಿದೆ. ಈ ಘಟನೆಗಳಲ್ಲಿ ಹಿಂದೂ ಸಮುದಾಯದ 11 ನಾಗರಿಕರು ಸಾವನ್ನಪ್ಪಿದ್ದರೆ, ಇನ್ನೂ 862 ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ಹೇಳಿದೆ.

ಗುರುವಾರ ಪ್ರಧಾನಮಂತ್ರಿ ಶೇಖ್ ಹಸೀನಾ ಹಿಂಸಾಚಾರದ ಹಿಂದೆ ಇರುವ ಆರೋಪಿಗಳನ್ನು ಕಾನೂನಿನ ಮುಂದೆ ತರುವುದಾಗಿ ಭರವಸೆ ನೀಡಿದರು. ಅದೇ ವೇಳೆ ಹಿಂದೂ ದೇವಾಲಯಗಳು ಮತ್ತು ದುರ್ಗಾ ಪೂಜಾ ವೇದಿಕೆಗಳ ಮೇಲೆ ದಾಳಿ ನಡೆಸುವ ಯಾರನ್ನೂ ರಕ್ಷಿಸುವುದಿಲ್ಲ ಎಂದು ಹೇಳಿದರು.

“ಕುಮಿಲಾದಲ್ಲಿನ ಘಟನೆಗಳನ್ನು ಕೂಲಂಕಷವಾಗಿ ತನಿಖೆ ಮಾಡಲಾಗುತ್ತಿದೆ. ಯಾರನ್ನೂ ಬಿಡುವುದಿಲ್ಲ. ಅವರು ಯಾವ ಧರ್ಮಕ್ಕೆ ಸೇರಿದವರು ಎಂಬುದು ಮುಖ್ಯವಲ್ಲ. ಅವರನ್ನು ಪತ್ತೆ ಹಚ್ಚಿ ಶಿಕ್ಷಿಸಲಾಗುವುದು” ಎಂದು ಅವರು ಧಾಕೇಶ್ವರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Bangladesh Durga Puja violence: ಬಾಂಗ್ಲಾದೇಶದಲ್ಲಿ ಮುಂದುವರಿದ ಗಲಭೆ; ಅಲ್ಪಸಂಖ್ಯಾತರಿಂದ ದೇಶದಾದ್ಯಂತ ಉಪವಾಸ ಮುಷ್ಕರಕ್ಕೆ ಕರೆ

ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ