Sign In

By signing in or creating an account, you agree with Associated Broadcasting Company's Terms & Conditions and Privacy Policy.

Bangladesh Durga Puja violence: ಬಾಂಗ್ಲಾದೇಶದಲ್ಲಿ ಮುಂದುವರಿದ ಗಲಭೆ; ಅಲ್ಪಸಂಖ್ಯಾತರಿಂದ ದೇಶದಾದ್ಯಂತ ಉಪವಾಸ ಮುಷ್ಕರಕ್ಕೆ ಕರೆ

ಬಾಂಗ್ಲಾದೇಶದ ಹಲವಾರು ಭಾಗಗಳಲ್ಲಿ ದುರ್ಗಾ ಪೂಜಾ ಪೆಂಡಲ್ ಮೇಲೆ ದಾಳಿ ನಡೆದುದ್ದನ್ನು ಖಂಡಿಸಿ ಪ್ರತಿಭಟನೆ ನಡೆಯುತ್ತಿರುವಾಗಲೇ ಶನಿವಾರ ಢಾಕಾದಿಂದ ಸುಮಾರು 157 ಕಿಮೀ ದೂರದಲ್ಲಿರುವ ಫೆನಿ ಎಂಬಲ್ಲಿ ಹಿಂದೂ ದೇವಾಲಯ ಮತ್ತು ಅಂಗಡಿಗಳ ಮೇಲೆ ದಾಳಿ ಮತ್ತು ದರೋಡೆ ನಡೆದಿದೆ.

Bangladesh Durga Puja violence: ಬಾಂಗ್ಲಾದೇಶದಲ್ಲಿ ಮುಂದುವರಿದ ಗಲಭೆ; ಅಲ್ಪಸಂಖ್ಯಾತರಿಂದ ದೇಶದಾದ್ಯಂತ ಉಪವಾಸ ಮುಷ್ಕರಕ್ಕೆ ಕರೆ
ಢಾಕಾದಲ್ಲಿ ಮುಸ್ಲಿಂ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Oct 17, 2021 | 6:33 PM

ಢಾಕಾ: ದುರ್ಗಾ ಪೂಜೆಯ ಸಂದರ್ಭದಲ್ಲಿ ಧರ್ಮನಿಂದೆ ಆರೋಪಿಸಿ ಅಲ್ಪಸಂಖ್ಯಾತ ಸಮುದಾಯದ ಆರಾಧನಾ ಸ್ಥಳಗಳ ಮೇಲೆ ದಾಳಿ ಮಾಡಿದ ಅಪರಿಚಿತ ಮುಸ್ಲಿಂ ಧರ್ಮಾಂಧರು ನಡೆಸಿದ ಹಿಂಸಾಚಾರದ ನಡುವೆಯೇ ಬಾಂಗ್ಲಾದೇಶದಲ್ಲಿ ಮತ್ತೊಂದು ದೇವಾಲಯದ ಮೇಲೆ ದಾಳಿ ನಡೆದಿದೆ. ಈ ಕೃತ್ಯವನ್ನು ಖಂಡಿಸಿ ದೇಶದಾದ್ಯಂತ ಉಪವಾಸ ಮುಷ್ಕರ ನಡೆಸಲು ಅಲ್ಪ ಸಂಖ್ಯಾತರು ಭಾನವಾರ ಕರೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಬಾಂಗ್ಲಾದೇಶದ ಹಲವಾರು ಭಾಗಗಳಲ್ಲಿ ದುರ್ಗಾ ಪೂಜಾ ಪೆಂಡಲ್ ಮೇಲೆ ದಾಳಿ ನಡೆದುದ್ದನ್ನು ಖಂಡಿಸಿ ಪ್ರತಿಭಟನೆ ನಡೆಯುತ್ತಿರುವಾಗಲೇ ಶನಿವಾರ ಢಾಕಾದಿಂದ ಸುಮಾರು 157 ಕಿಮೀ ದೂರದಲ್ಲಿರುವ ಫೆನಿ ಎಂಬಲ್ಲಿ ಹಿಂದೂ ದೇವಾಲಯ ಮತ್ತು ಅಂಗಡಿಗಳ ಮೇಲೆ ದಾಳಿ ಮತ್ತು ದರೋಡೆ ನಡೆದಿದೆ ಎಂದು ಢಾಕಾ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ. ಘರ್ಷಣೆಯಲ್ಲಿ ಫೆನಿ ಮಾದರಿ ಪೊಲೀಸ್ ಠಾಣೆಯ ಅಧಿಕಾರಿ ನಿಜಾಮುದ್ದೀನ್ ಸೇರಿದಂತೆ ಕನಿಷ್ಠ 40 ಜನರು ಗಾಯಗೊಂಡಿದ್ದಾರೆ.  ಶನಿವಾರ ರಾತ್ರಿ ಅಧಿಕಾರಿಗಳು ಹೆಚ್ಚುವರಿ ಪೊಲೀಸ್ ಪಡೆಗಳನ್ನು ಮತ್ತು ಅರೆಸೇನಾ ಪಡೆ – ಬಾಂಗ್ಲಾದೇಶ (BGB) ಯನ್ನು ನಿಯೋಜಿಸಲಾಗಿದೆ. ಹಿಂದೂಗಳ ಹಲವಾರು ದೇವಾಲಯಗಳು ಮತ್ತು ಅಂಗಡಿ ಗಳನ್ನು ಧ್ವಂಸಗೊಳಿಸಲಾಯಿತು. ಸಂಜೆ 4:30 ರಿಂದ (ಸ್ಥಳೀಯ ಸಮಯ) ಮಧ್ಯರಾತ್ರಿಯವರೆಗೆ ನಡೆದ ಘರ್ಷಣೆಯಲ್ಲಿ ದರೋಡೆ ಮಾಡಲಾಯಿತು ಎಂದು ವರದಿ ಹೇಳಿದೆ.

ಇಲ್ಲಿಂದ ಸುಮಾರು 40 ಕಿಮೀ ದೂರದಲ್ಲಿರುವ ಮುನ್ಶಿಗಂಜ್‌ನ ಸಿರಾಜದಿಖಾನ್ ಉಪಜಿಲ್ಲಾದ   ರಶೂನಿಯಾ ಒಕ್ಕೂಟದ ದನಿಯಾಪರ ಮಹಾ ಶೋಷನ್ ಕಾಳಿ ಮಂದಿರದಲ್ಲಿ ಕೆಲವು ದುಷ್ಕರ್ಮಿಗಳು ಶನಿವಾರ ಆರು ವಿಗ್ರಹಗಳನ್ನು ಧ್ವಂಸ ಮಾಡಿದ್ದಾರೆ ಎಂದು ವರದಿ ಹೇಳಿದೆ.

ದುರ್ಗಾಪೂಜೆ ಆಚರಣೆಯ ಸಂದರ್ಭದಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ ಮತ್ತು ವಿಧ್ವಂಸಕತೆಯ ವಿರುದ್ಧದ ಪ್ರತಿಭಟನೆಗಳು ದೇಶಾದ್ಯಂತ ಶನಿವಾರವೂ ಮುಂದುವರಿದಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಏತನ್ಮಧ್ಯೆ, ದೇಶದ ಆಗ್ನೇಯ ಬಂದರು ನಗರವಾದ ಚಿತ್ತಗಾಂಗ್‌ನಲ್ಲಿ, ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಯೂನಿಟಿ ಕೌನ್ಸಿಲ್ ದುರ್ಗಾ ಪೂಜೆ ಆಚರಣೆಯ ಸಮಯದಲ್ಲಿ ದಾಳಿಗಳನ್ನು ವಿರೋಧಿಸಿ ಅಕ್ಟೋಬರ್ 23 ರಿಂದ ಧರಣಿ ಮತ್ತು ಉಪವಾಸ ಸತ್ಯಾಗ್ರಹವನ್ನು ಘೋಷಿಸಿತು.

ಪ್ರತಿಭಟನಾ ಕಾರ್ಯಕ್ರಮಗಳು ಢಾಕಾದ ಶಹಬಾಗ್ ಮತ್ತು ಚಿತ್ತಗಾಂಗ್‌ನ ಅಂದರ್ಕಿಲ್ಲಾದಲ್ಲಿ ನಡೆಯಲಿದೆ ಎಂದು ಕೌನ್ಸಿಲ್‌ನ ಪ್ರಧಾನ ಕಾರ್ಯದರ್ಶಿ ವಕೀಲ ರಾಣಾ ದಾಸ್‌ಗುಪ್ತಾ ಚಿತ್ತಗಾಂಗ್ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಘೋಷಣೆ ಮಾಡುವ ಮೊದಲು ಶನಿವಾರ ಚಿತ್ತಗಾಂಗ್‌ನಲ್ಲಿ ಆರು ಗಂಟೆಗಳ ಮುಷ್ಕರವನ್ನು ನಡೆಸಲಾಗಿದೆ. ಬಾಂಗ್ಲಾದೇಶ ಪೂಜಾ ಉದಜಪನ ಪರಿಷತ್ ದುರ್ಗಾಪೂಜೆ ಆಚರಣೆಯ ಸಂದರ್ಭದಲ್ಲಿ ಸಂಭವಿಸಿದ ವಿಧ್ವಂಸಕ ಕೃತ್ಯ, ಹಿಂಸೆ ಮತ್ತು ಅನಾಹುತದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದೆ. ವೇದಿಕೆಯ ಅಧ್ಯಕ್ಷ ಮಿಲನ್ ಕಾಂತಿ ದತ್ತಾ, ಸರ್ಕಾರವು ಅವರ ಬೇಡಿಕೆಗೆ ಕಿವಿಗೊಡದಿದ್ದರೆ ಕಠಿಣ ಚಳುವಳಿಯನ್ನು ಆರಂಭಿಸುವುದಾಗಿ ಹೇಳಿದರು.

“ಗೃಹ ಮಂತ್ರಿಯಿಂದ ಹಿಡಿದು ಆಡಳಿತ ಪಕ್ಷದ ಪ್ರಧಾನ ಕಾರ್ಯದರ್ಶಿ ಒಬೈದುಲ್ ಕ್ವಾಡರ್ ವರೆಗೆ, ಪ್ರತಿಯೊಬ್ಬರೂ ನಮಗೆ ಎಲ್ಲದರ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ನಮಗೆ ಭರವಸೆ ನೀಡಿದ್ದಾರೆ. ನಿಮಗೆ ಎಲ್ಲವೂ ತಿಳಿದಿದ್ದರೆ, ನೀವು ಯಾಕೆ ಅಪರಾಧಿಗಳನ್ನು ಶಿಕ್ಷಿಸುತ್ತಿಲ್ಲ? ಎಂದು ದತ್ತಾ ಪ್ರಶ್ನಿಸಿದ್ದಾರೆ.

ಇಸ್ಕಾನ್ ಬಾಂಗ್ಲಾದೇಶದ ಪ್ರಧಾನ ಕಾರ್ಯದರ್ಶಿ ಚಾರು ಚಂದ್ರ ದಾಸ್ ಬ್ರಹ್ಮಚಾರಿ, ಸಮುದಾಯಗಳು ಮೌನವಾಗಿ ಕುಳಿತು ದಾಳಿ ನಡೆಯುವುದನ್ನು ನೋಡುವುದಿಲ್ಲ ಎಂದು ಎಚ್ಚರಿಸಿದರು.

ಮೂಲಭೂತವಾದಿಗಳ ಗುಂಪು ಧಾರ್ಮಿಕ ಸಾಮರಸ್ಯವನ್ನು ಕೆಡಿಸಲು ಇಂತಹ ದ್ವೇಷವನ್ನು ಆರಂಭಿಸುತ್ತಿದೆ ಎಂದು ನಾವು ನಂಬುತ್ತೇವೆ. ಆಡಳಿತ ಪಕ್ಷದ ಕೆಲವು ಕಾರ್ಯಕರ್ತರು ಇಂತಹ ಘೋರ ಅಪರಾಧಗಳೊಂದಿಗೆ ಕೆಲವು ಸ್ಥಳಗಳಲ್ಲಿ ಸಂಬಂಧ ಹೊಂದಿದ್ದಾರೆ ಎಂದು ನಮಗೆ ತಿಳಿದಿದೆ. ದುರ್ಬಲರಾಗಬೇಡಿ ಅವರ ವಿರುದ್ಧವೂ ಕ್ರಮ ಕೈಗೊಳ್ಳಿ ಎಂದು ನಾನು ಪ್ರಧಾನಿಯವರಲ್ಲಿ ಒತ್ತಾಯಿಸುತ್ತಿದ್ದೇನೆ ಎಂದು ಬ್ರಹ್ಮಚಾರಿ ಅವರು ಹೇಳಿದ್ದಾರೆ.

ವೇದಿಕೆಯ ನಾಯಕರು ರಕ್ಷಣಾ ಕಾನೂನು ಮತ್ತು ರಾಷ್ಟ್ರೀಯ ಅಲ್ಪಸಂಖ್ಯಾತ ಮಂಡಳಿಯನ್ನು ಜಾರಿಗೆ ತರಲು ಒತ್ತಾಯಿಸಿದರು.

ಏತನ್ಮಧ್ಯೆ, ಢಾಕಾ ವಿಶ್ವವಿದ್ಯಾಲಯದ ಆಡಳಿತಾರೂಢ ಅವಾಮಿ ಲೀಗ್ ಬೆಂಬಲಿತ ಬ್ಲೂ ಪ್ಯಾನಲ್ ಶಿಕ್ಷಕರು ಭಾನುವಾರ ದೇಶದಾದ್ಯಂತ ಹಲವಾರು ದುರ್ಗಾ ಪೂಜಾ ಸ್ಥಳಗಳು ಮತ್ತು ವಿಗ್ರಹಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ತೀವ್ರವಾಗಿ ಖಂಡಿಸಿದರು. ಮಾಹಿತಿ ಮತ್ತು ಪ್ರಸಾರ ಸಚಿವ ಹಸನ್ ಮಹ್ಮದ್ ಶನಿವಾರ ನಡೆದ ಹಿಂಸಾಚಾರಕ್ಕೆ ಬಾಂಗ್ಲಾದೇಶ ರಾಷ್ಟ್ರೀಯವಾದಿ ಪಕ್ಷವನ್ನು (BNP)ಕಾರಣ ಎಂದು ದೂರಿದ್ದಾರೆ. ಬಿಎನ್​​ಪಿ -ಜಮಾತ್ ಕೋಮು ಪ್ರಚೋದನೆಯಲ್ಲಿ ತೊಡಗಿದೆ. ಬಿಎನ್ಪಿ-ಜಮಾತ್ ರಾಜಕೀಯವಾಗಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಎದುರಿಸಲು ವಿಫಲವಾಗಿ ವಿವಿಧ ಪಿತೂರಿಗಳ ಹಾದಿಯನ್ನು ಆರಿಸಿಕೊಂಡಿದೆ. ಕೋಮಿಲ್ಲಾದಲ್ಲಿ ನಡೆದ ಘಟನೆಯ ಹಿಂದೆ ರಾಜಕೀಯ ಉದ್ದೇಶವಿದ್ದು ಅದು ದೇಶಾದ್ಯಂತ ಕೋಮು ಆಕ್ರೋಶವನ್ನು ಹುಟ್ಟುಹಾಕಿದೆ ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: ISKCON: ಬಾಂಗ್ಲಾದೇಶದ ಇಸ್ಕಾನ್ ದೇವಸ್ಥಾನದ ಮೇಲೆ ದಾಳಿ; ಹಲವರಿಗೆ ಗಾಯ, ಓರ್ವ ಭಕ್ತನ ಹತ್ಯೆ