ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಗಲ್ಫ್ ಇಸ್ಲಾಮಿಕ್ ಹೂಡಿಕೆ ಕಚೇರಿ: ಭಾರತ-ಯುಎಇ ಹೂಡಿಕೆ ಸಂಬಂಧ ಸುಧಾರಣೆ

‌ಕಳೆದ ಮೂರು ದಿನಗಳಿಂದ ಸಚಿವ ಮುರುಗೇಶ್ ನಿರಾಣಿ ಅವರು ಯುಎಇಯಲ್ಲಿ ಹಲವು ಉದ್ಯಮಿಗಳನ್ನು ಭೇಟಿ ಮಾಡಿ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಗಲ್ಫ್ ಇಸ್ಲಾಮಿಕ್ ಹೂಡಿಕೆ ಕಚೇರಿ: ಭಾರತ-ಯುಎಇ ಹೂಡಿಕೆ ಸಂಬಂಧ ಸುಧಾರಣೆ
ದುಬೈನ ಹಲವು ಉದ್ಯಮಿಗಳನ್ನು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಭೇಟಿ ಮಾಡಿ, ಕರ್ನಾಟಕದಲ್ಲಿ ಹೂಡಿಕೆಗೆ ಆಹ್ವಾನಿಸಿದರು.
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 18, 2021 | 10:56 PM

ದುಬೈ: ಭಾರತ ಹಾಗೂ‌ ಅರಬ್ ಸಂಯುಕ್ತ ಸಂಸ್ಥಾನಗಳ (ಯುಎಇ) ನಡುವೆ ಹೂಡಿಕೆ ಸಂಬಂಧಗಳನ್ನು ಭವಿಷ್ಯದಲ್ಲಿ ಮತ್ತಷ್ಟು ಬಲಪಡಿಸಲು ಗಲ್ಫ್ ಇಸ್ಲಾಮಿಕ್ ಹೂಡಿಕೆ ಸಂಸ್ಥೆಯು ತನ್ನ ಕಚೇರಿಯನ್ನು ಕರ್ನಾಟಕದ ರಾಜಧಾನಿ ‌ಬೆಂಗಳೂರಿನಲ್ಲಿ ತೆರೆಯಲು ಮುಂದೆ ‌ಬಂದಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹಾಗೂ ಐಟಿ ಮತ್ತು ಬಿಟಿ ಸಚಿವ ಸಿ.ಎನ್.ಅಶ್ವತ್ಥ ನಾರಾಯಣ ಅವರು ದುಬೈ ‌ಎಕ್ಸ್‌ಪೋ 2020 ಸಮಾವೇಶದಲ್ಲಿ ಸ್ಥಾಪಿಸಿರುವ ಕರ್ನಾಟಕ ವಸ್ತು ಪ್ರದರ್ಶನ ಕೇಂದ್ರದಲ್ಲಿ ಪ್ರಮುಖ ಉದ್ಯಮಿಗಳ ಜೊತೆ ನಡೆಸಿದ ಮಾತುಕತೆಯು ಫಲ ನೀಡಿದ್ದು, ಐಟಿ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ‌ಗಲ್ಫ್ ಇಸ್ಲಾಮಿಕ್ ಹೂಡಿಕೆ ಕಚೇರಿಯನ್ನು ಆರಂಭಿಸಲು ಹಸಿರು ನಿಶಾನೆ ಸಿಕ್ಕಿದೆ.

ಮುಂದಿನ 3 ವರ್ಷಗಳಲ್ಲಿ ಭಾರತದಲ್ಲಿ 50 ಕೋಟಿ ಅಮೆರಿಕನ್ ಡಾಲರ್ (₹ 3,500 ಕೋಟಿ) ಮೊತ್ತದಷ್ಟು ಹೂಡಿಕೆ ಮಾಡಲು ಜಿಐಐ ಯೋಜಿಸಿದ್ದು, ಇದರಿಂದಾಗಿ ‌ಸಾವಿರಾರು ಉದ್ಯೋಗಗಳು ‌ಸೃಷ್ಟಿಯಾಗುವ ನಿರೀಕ್ಷೆಯಿದೆ. ಗಲ್ಫ್ ಇಸ್ಲಾಮಿಕ್ ಇನ್ವೆಸ್ಟ್‌ಮೆಂಟ್ ಯುಎಇ ಮೂಲದ ಪ್ರಮುಖ ಷರಿಯಾ ನಿರ್ಬಂಧದ ಅನುಗುಣವಾಗಿ ಕಾರ್ಯನಿರ್ವಹಿಸುವ ಹಣಕಾಸು ಸೇವೆಗಳ ಸಂಸ್ಥೆಯಾಗಿದ್ದು, 2 ಲಕ್ಷ ಕೋಟಿ ರೂಪಾಯಿ ಮೌಲ್ಯಕ್ಕೂ ಹೆಚ್ಚಿನ ಆಸ್ತಿಗಳನ್ನು ನಿರ್ವಹಿಸುತ್ತಿದೆ.

ಜಿಐಎಯು ಮಧ್ಯಪ್ರಾಚ್ಯ ವಿಸ್ತರಣಾ ಯೋಜನೆಗಳನ್ನು ಹೆಚ್ಚಿಸಲು ಭಾರತೀಯ ಸ್ಟಾರ್ಟ್ಅಪ್‌ಗಳೊಂದಿಗೆ ಸಹಯೋಗವನ್ನು ಪಡೆಯುವ ಯೋಜನೆಯನ್ನೂ ಹಾಕಿಕೊಂಡಿದೆ. ಇದೇ ಸಂದರ್ಭದಲ್ಲಿ ‌ಹೂಡಿಕೆಗಳನ್ನು ಆಕರ್ಷಿಸಲು ಮತ್ತು ವ್ಯಾಪಾರವನ್ನು ಉತ್ತೇಜಿಸಲು ಕರ್ನಾಟಕ ಸರ್ಕಾರವು ಜಿಐಐ ಸಮೂಹಗಳೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ‘ಬೆಂಗಳೂರಿನಲ್ಲಿ ಕಚೇರಿ ತೆರೆಯಲು ಜಿಐಐ ತೆಗೆದುಕೊಂಡಿರುವ ನಿರ್ಧಾರವು ಭಾರತ ಮತ್ತು ಯುಎಇ ನಡುವಿನ ಹೂಡಿಕೆ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತದೆ’ ಎಂದು ಸಂತಸ ವ್ಯಕ್ತಪಡಿಸಿದರು.

ನಮ್ಮ ರಾಜ್ಯವು ಹೂಡಿಕೆ ಮಾಡಲು ಸೂಕ್ತ ತಾಣವಾಗಿದೆ. ಏಕೆಂದರೆ, ನಾವು ಉದ್ಯಮ-ವಹಿವಾಟು ‌ನಡೆಸಲು ಸುಲಭ ಮತ್ತು ಹೂಡಿಕೆದಾರರ ಸ್ನೇಹಿ ವಾತಾವರಣವನ್ನು ನಿರ್ಮಿಸಿದ್ದೇವೆ. ಬೆಂಗಳೂರಿನಲ್ಲಿ ಜಿಐಐ ಕಚೇರಿ ‌ಆರಂಭವಾಗುತ್ತಿರುವುದರಿಂದ‌ ಹೆಚ್ಚಿನ ಹೂಡಿಕೆಗಳು, ವ್ಯಾಪಾರ ಮತ್ತು ಉದ್ಯೋಗ ಸೃಷ್ಟಿಗೆ ದಾರಿ ಮಾಡಿಕೊಡುತ್ತದೆ ಎಂಬ ವಿಶ್ವಾಸ ನನಗಿದೆ‌ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತದ ಕಾನ್ಸುಲ್ ಜನರಲ್ ಡಾ.ಅಮಾನ್ ಪುರಿ ಮಾತನಾಡಿ, ದುಬೈಗೆ ಕರ್ನಾಟಕ‌ವು ಏಷ್ಯಾ ಖಂಡದ ರಾಜಧಾನಿಯಾಗಿದೆ. ಶೇ 40ರಷ್ಟು ಯುನಿಕಾರ್ನ್‌ಗಳಿಗೆ ನೆಲೆಯಾಗಿದೆ.‌ 5 ಲಕ್ಷ ಕೋಟಿ ಅಮೆ ಡಾಲರ್ ಆರ್ಥಿಕತೆಯಾಗುವ ಭಾರತದ ಪ್ರಯತ್ನಕ್ಕೆ ಯುಎಇ ಸಹಕರಿಸುತ್ತಿದೆ ಎಂದು ಎಂದು ‌ಪ್ರಶಂಸಿದರು. ಇಸ್ಲಾಮಿಕ್ ಇನ್ವೆಸ್ಟ್​ಮೆಂಟ್ಸ್​ನ ಸ್ಥಾಪಕ ಪಾಲುದಾರ ಮೊಹಮ್ಮದ್ ಅಲ್ಹಾಸನ್ ಮತ್ತು ಪಂಕಜ್ ಗುಪ್ತಾ ಮತ್ತು ಇತರ ಸಿಇಒಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿ, ‘ಭಾರತದ ತಂತ್ರಜ್ಞಾನ ರಾಜಧಾನಿ ಬೆಂಗಳೂರಿನಲ್ಲಿ ಜಿಐಐ ಕಚೇರಿಯನ್ನು ಸ್ಥಾಪಿಸುವ ನಮ್ಮ ಯೋಜನೆಗಳನ್ನು ಅಧಿಕೃತವಾಗಿ ಘೋಷಿಸಲು ನಾವು ಸಂತೋಷಪಡುತ್ತೇವೆ’ ಎಂದರು.

‌ಕಳೆದ ಮೂರು ದಿನಗಳಿಂದ ಸಚಿವ ಮುರುಗೇಶ್ ನಿರಾಣಿ ಅವರು ಹಲವು ಉದ್ಯಮಿಗಳನ್ನು ಭೇಟಿ ಮಾಡಿ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ನಿರಂತರವಾಗಿ ‌ಹೆಸರಾಂತ ನಿಯೋಗಗಳನ್ನು ಭೇಟಿ ಮಾಡಿರುವ‌ ಅವರು, ಕರ್ನಾಟಕದಲ್ಲಿ ಹೂಡಿಕೆ ಮಾಡಲು ಹಲವಾರು ಕಂಪನಿಗಳನ್ನು ಮನವೊಲಿಸುವಲ್ಲಿ ಯಶಸ್ವಿಯಾದರು. ಲುಲು ಗುಂಪು, ಡುಕಾಬ್ ಮತ್ತು ಎಲೆಕ್ಟ್ರಿಕ್ ವೇ ಸೇರಿದಂತೆ ಹಲವು ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡುವ ಭರವಸೆ ನೀಡಿವೆ.

ಕೇಬಲ್‌ಗಳು, ಕೈಗಾರಿಕಾ ದೀಪಗಳು ಮತ್ತು ವಿದ್ಯುತ್ ವ್ಯವಸ್ಥೆಗಳ ವಿತರಣೆಯಲ್ಲಿ ಮುಂಚೂಣಿಯಲ್ಲಿರುವ ಎಲೆಕ್ಟ್ರಿಕ್ ವೇ ಕಂಪನಿಯ ಸಿಇಒ ಅಥೀಕ್ ಅನ್ಸಾರಿ, ತಾಮ್ರದ ವಿನ್ಯಾಸ ಮತ್ತು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಅಲ್ಯೂಮಿನಿಯಂ ತಂತಿ ಮತ್ತು ಕೇಬಲ್ ಉತ್ಪನ್ನಗಳ ಜನರಲ್ ಮ್ಯಾನೇಜರ್, ಸರ್ಕಾರಿ ವ್ಯವಹಾರಗಳ ಮೊಹಮ್ಮದ್ ಎ.ಅಲ್.ಖುರೇಶಿ, ಆಸ್ಟರ್ ಹೆಲ್ತ್ ಕೇರ್ ಡಿಎಂ ಶ್ರೀನಾಥ್ ಪಿ.ರೆಡ್ಡಿ ಸೇರಿದಂತೆ ಅನೇಕ ‌ಉದ್ಯಮಿಗಳನ್ನು‌ ಭೇಟಿಯಾಗಿ ರಾಜ್ಯದಲ್ಲಿ ಬಂಡವಾಳ ‌ಹೂಡಿಕೆಗೆ ಇರುವ‌ ಅವಕಾಶಗಳ ಬಗ್ಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು.

ಇದನ್ನೂ ಓದಿ: ಪಂಚಮಸಾಲಿಗಳಿಗೆ ಮೀಸಲಾತಿ ನೀಡಲು ಸರ್ಕಾರ ಮರೆತಿದೆ ಎಂದ ಜಯಮೃತ್ಯುಂಜಯ ಸ್ವಾಮೀಜಿ, ನೆನಪಿದೆ ಎಂದ ಮುರುಗೇಶ್ ನಿರಾಣಿ ಇದನ್ನೂ ಓದಿ: ನಾನು 35 ಮಾಕ್ಸ್ ಕೆಟಗೆರಿಯವನು ಅದಕ್ಕೆ ಕೈಗಾರಿಕಾ ಸಚಿವನಾದೆ; ಸಚಿವ ಮುರುಗೇಶ್ ನಿರಾಣಿ

ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ